For Quick Alerts
  ALLOW NOTIFICATIONS  
  For Daily Alerts

  ಪ್ರೇಮಿ ಸುಮಂತ್ ಜೊತೆ ಶುಭಾ ಪೂಂಜಾ ಮದುವೆ: ಕನಸಿನಂತೆ ಅಜ್ಜಿ ಮನೆಯಲ್ಲಿ ವಿವಾಹ!

  |

  ಕನ್ನಡದ ನಟಿ ಶುಭಾ ಪೂಂಜಾ ಬಿಗ್ ಬಾಸ್‌ ಬಳಿಕ ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಶುಭಾ ಸದ್ಯ ಸಿಹಿ ಸುದ್ದಿ ಕೊಟ್ಟಿದ್ದಾರೆ. ಶುಭಾ ಪೂಂಜಾ ಅವರು ಮದುವೆ ಆಗಿದ್ದಾರೆ. ಈ ಹಿಂದೆ ತಮ್ಮ ಪ್ರಿಯಕರನ ಬಗ್ಗೆ ಶುಭಾ ಪೂಂಜಾ ಹಲವು ಬಾರಿ ಹೇಳಿಕೊಂಡಿದ್ದರು.

  ಚಿನ್ನಿ ಬಾಂಬ್ ಎಂದು ತಮ್ಮ ಪತಿಯನ್ನು ಶುಭಾ ಪ್ರೀತಿಯಿಂದ ಕರೆಯುತ್ತಿದ್ದರು. ಬಿಗ್‌ ಬಾಸ್ ಕಾರ್ಯಕ್ರಮದಲ್ಲಿ ಇರುವಾಗಲೇ ಅವರ ಹೆಸರನ್ನು ಶುಭಾ ಪೂಂಜಾ ಜಪ ಮಾಡುತ್ತಿದ್ದರು. ಶುಭಾ ಮದುವೆ ಆಗುವ ಹುಡುಗನ ಬಗ್ಗೆ ಮೊದಲೇ ಹೇಳಿ ಕೊಂಡಿದ್ದರು. ಈಗ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಶುಭಾ ಪೂಂಜಾ ಸರಳವಾಗಿ ಮದುವೆ ಆಗಿದ್ದಾರೆ. ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ. ಈ ವಿಚಾರವನ್ನು ಶುಭಾ ಪೂಂಜಾ ಮದುವೆ ಫೋಟೊ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ: ನಟಿ ಶುಭಾ ಪೂಂಜಾ!

  ಮದುವೆಯ ಬಳಿಕ ಶುಭಾ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಹಂಚಿಕೊಂಡಿದ್ದಾರೆ. "ಶುಭಾ ಪೂಂಜಾ: ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ" ಎಂದು ಪೋಸ್ಟ್‌ನಲ್ಲಿ ಶುಭಾ ಬರೆದು ಕೊಂಡಿದ್ದಾರೆ.

  ಹುಟ್ಟಿ ಬೆಳೆದ ಮನೆಯಲ್ಲಿ ಸರಳವಾಗಿ ಮದುವೆ ಆದ ನಟಿ ಶುಭಾ ಪೂಂಜಾ!

  ಹುಟ್ಟಿ ಬೆಳೆದ ಮನೆಯಲ್ಲಿ ಸರಳವಾಗಿ ಮದುವೆ ಆದ ನಟಿ ಶುಭಾ ಪೂಂಜಾ!

  ಸಿನಿಮಾ ತಾರೆಯರ ಮದುವೆ ಅಂದರೆ ಅಲ್ಲಿ ಅದ್ದೂರಿತನ ಇರುತ್ತದೆ. ಆದರೆ ಶುಭಾ ಪೂಂಜಾ, ಸುಮಂತ್ ಮಹಾಬಲ ಅವರೊಂದಿಗೆ ಸರಳವಾಗಿ ಮದುವೆ ಆಗಿದ್ದಾರೆ. ಯಾಕೆ ಶುಭಾ ಪೂಂಜಾ ಸರಳವಾಗಿ ಊರಿನಲ್ಲಿ ಮದುವೆ ಆದರು ಎನ್ನು ಬಗ್ಗೆ ಫಿಲ್ಮಿ ಬೀಟ್ ಜೊತೆಗೆ ಮಾತನಾಡಿದ್ದಾರೆ. "ಇದು ನನ್ನ ಊರು, ಇದು ಅಜ್ಜಿ ಮನೆ, ನಾನು ಹುಟ್ಟಿ ಬೆಳೆದ ಮನೆಯಲ್ಲಿಯೇ ಮದುವೆ ಆಗಬೇಕು ಎನ್ನುವ ಆಸೆ ಇತ್ತ. ಹಾಗಾಗಿ ಇಲ್ಲೇ ಮದುವೆ ಆಗಿದ್ದೇವೆ". ಎಂದಿದ್ದಾರೆ.

  ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸುಮಂತ್ ಮತ್ತು ಶುಭಾ ಪೂಂಜಾ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ.

  2 ವರ್ಷದಿಂದ ಪ್ರೀತಿಸುತ್ತಿದ್ದ ಶುಭಾ-ಸುಮಂತ್!

  2 ವರ್ಷದಿಂದ ಪ್ರೀತಿಸುತ್ತಿದ್ದ ಶುಭಾ-ಸುಮಂತ್!

  ಇನ್ನು ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಅವರು ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದಾರೆ. ಮನೆಯವರ ಒಪ್ಪಿಯ ಮೇರೆಗೆ ಈ ವೈವಾಹಿಕ ಜೀವನಕ್ಕೆ ಶುಭಾ, ಸುಮಂತ್‌ ಕಾಲಿಟ್ಟಿದ್ದಾರೆ. ಸುಮಂತ್ ಅವರನ್ನು ಶುಭಾ ಪೂಂಜಾ ಪ್ರೀತಿಯಿಂದ ಚಿನ್ನಿ ಬಾಂಬ್ ಎಂದು ಕರೆಯುತ್ತಾರೆ. ಇನ್ನು ಸುಮಂತ್ ಒಬ್ಬ ಉದ್ಯಮಿ ಆಗಿದ್ದು, ಶುಭಾ ಪೂಂಜಾ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಾ ಇದ್ದರು.

  ನವ ಜೋಡಿಗೆ ಹರಿದು ಬಂದ ಶುಭಾಶಯ!

  ನವ ಜೋಡಿಗೆ ಹರಿದು ಬಂದ ಶುಭಾಶಯ!

  ನಟಿ ಶುಭಾ ಪೂಂಜಾ ಮದುವೆ ಬಳಿಕ ಚಿತ್ರ ರಂಗದಲ್ಲಿ ಸಕ್ರಿಯವಾಗಿ ಇರಲಿದ್ದಾರೆ. ಸದ್ಯ ಅವರು ಅಭಿನಯದ ತ್ರಿದೇವಿ, ಅಂಬುಜ ಚಿತ್ರಗಳು ಸದ್ದು ಮಾಡುತ್ತಿವೆ. ಜೊತೆಗೆ ರೈಮ್ಸ್‌ ಚಿತ್ರದಲ್ಲೂ ಶುಭಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ನವ ಜೋಡಿಗೆ ಎಲ್ಲರು ಶುಭ ಕೊರುತ್ತಿದ್ದಾರೆ. sh

  English summary
  Kannada actress Shubha Poonja ties the knot with Sumanth Mahabala,
  Thursday, January 6, 2022, 11:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X