ತಾಯಿಯನ್ನು ಕಳೆದುಕೊಂಡ ನಟಿ ಶುಭಾ ಪೂಂಜಾ ಭಾವುಕ

ಕನ್ನಡ ನಟಿ ಶುಭಾ ಪೂಂಜಾಗೆ ಮಾತೃ ವಿಯೋಗ. ಈ ಬಗ್ಗೆ ಅವರು ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ತಾಯಿ ಅಗಲಿಕೆ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಿನ್ನೆ(ಮಾರ್ಚ್ 6) ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾಗಿ ಆಕೆ ಬರೆದುಕೊಂಡಿದ್ದಾರೆ.

"ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ. ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ" ಎಂದು ನಟಿ ಶುಭಾ ಪೂಂಜಾ ಪೋಸ್ಟ್ ಮಾಡಿದ್ದಾರೆ.

Kannada Actress Shubha Poonja s mother no more

ಒಂದು ದಿನನ ಹಿಂದೆ ಅಂದರೆ ಮಾರ್ಚ್ 6 ರಂದು ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ನನ್ನ ಜೀವನ ಅವಳ ಸುತ್ತ ಮಾತ್ರ ಸುತ್ತುತ್ತಿತ್ತು.. ಅವಳಿಲ್ಲದ ಜೀವನವನ್ನು ನಾನು ಊಹಿಸಲೂ ಸಾಧ್ಯವಿಲ್ಲ.. ಅವಳಿಲ್ಲದ ನನ್ನ ಜೀವನಕ್ಕೆ ಅರ್ಥವಿಲ್ಲ.. ನನ್ನ ಹೃದಯ ಛಿದ್ರ ಛಿದ್ರವಾಗಿದೆ. ಕಾರಣ ನನ್ನ ತಾಯಿಯೇ ಎಲ್ಲವೂ.. ನನ್ನ ಜೀವನ ಮೊದಲಿನಂತೆ ಇರುವುದಿಲ್ಲ. ನನ್ನ ನಗು ಕಳೆದು ಹೋಗಿದೆ ಎಂದು ಶುಭಾ ಪೂಂಜಾ ನೋವು ತೋಡಿಕೊಂಡಿದ್ದಾರೆ.

ಶುಭಾ ಪೂಂಜಾ ತಾಯಿ ಆಸೆಯಂತೆ ಮಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗುತ್ತಿದೆ. 2006ರಲ್ಲಿ ಶುಭಾ ಪೂಂಜಾ ಚಿತ್ರರಂಗ ಪ್ರವೇಶಿಸಿದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. 3 ವರ್ಷಗಳ ಹಿಂದೆ ಸುಮಂತ್ ಮಹಾಬಲ ಎಂಬುವವರ ಜೊತೆ ಆಕೆಯ ಮದುವೆ ನಡೆದಿತ್ತು.

ಅಂದಹಾಗೆ ಶುಭಾ ಪೂಂಜಾ ಅವರ ತಾಯಿಗೆ 70 ವರ್ಷ ವಯಸ್ಸಾಗಿತ್ತು. ನ್ಯೂಮೊನಿಯಾ ಕಾರಣಕ್ಕೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಇಹಲೋಹ ತ್ಯಜಿಸಿದ್ದಾರೆ. ಕುಟುಂಬದ ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ.

More from Filmibeat

English summary
Sandalwood Actress Shubha Poonja's mother dies
Read more about: sandalwood kannada shubha poonja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X