ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿರೋ ಕನ್ನಡದ ಈ ನಟಿಯನ್ನ ಗುರುತಿಸಿ
ಈ ವರ್ಷದ ಕಿಂಗ್ ಫಿಶರ್ ಕ್ಯಾಲೆಂಡರ್ ಹೊರ ಬಂದಿದೆ. ಕೆಲ ಸುಂದರಿಯರು ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಳ್ಳುವ ಭಾಗ್ಯ ಪಡೆದಿದ್ದಾರೆ. ಇದರಲ್ಲಿ ಕನ್ನಡದ ನಟಿ ಕೂಡ ಒಬ್ಬರಾಗಿದ್ದಾರೆ.
ಅಂದಹಾಗೆ, ಈ ಫೋಟೋ ನೋಡಿದ ತಕ್ಷಣ ಯಾರು ಈ ನಟಿ ಎನ್ನುವ ಕುತೂಹಲ ಮೂಡುತ್ತದೆ. ಅಂದಹಾಗೆ, ಈಕೆ ಬೇರೆ ಯಾರು ಅಲ್ಲ ನಟಿ ಶುಭ್ರ ಅಯ್ಯಪ್ಪ. ಶಿವರಾಜ್ ಕುಮಾರ್ ಜೊತೆಗೆ 'ವಜ್ರಕಾಯ' ಸಿನಿಮಾದಲ್ಲಿ ನಟಿಸಿದ್ದ ಈಕೆ ಈಗ ಕ್ಯಾಲೆಂಡರ್ ಗರ್ಲ್ ಆಗಿದ್ದಾರೆ.

'ವಜ್ರಕಾಯ' ಸಿನಿಮಾದ ಮೂರು ನಟಿಯರ ಪೈಕಿ ಇವರು ಒಬ್ಬರಾಗಿದ್ದರು. ಶಿವಣ್ಣನ ಜೊತೆಗೆ ಶುಭ್ರ ಕಾಣಿಸಿಕೊಂಡಿದ್ದ 'ನೋ ಪ್ಲಾಬಂ..' ಹಾಡು ಸಖತ್ ಹಿಟ್ ಆಗಿತ್ತು. ಇನ್ನು ಈ ಚಿತ್ರದ ಬಳಿಕ ಬೇರೆ ಯಾವ ಕನ್ನಡ ಚಿತ್ರಗಳಲ್ಲಿಯೂ ಇವು ನಟಿಸಿಲ್ಲ.
ಉಳಿದಂತೆ ಬ್ರಿಟಿಷ್ ಮಾಡೆಲ್, ನ್ಯೂಯಾರ್ಕ ಮಾಡೆಲ್ ಸೇರಿದಂತೆ 12 ಮಾಡೆಲ್ ಗಳು ಈ ವರ್ಷದ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿ ಜಾಗ ಪಡೆದಿದ್ದಾರೆ.
English summary
Kannada actress Shubra Aiyappa poses for Kingfisher calendar 2019.


Click it and Unblock the Notifications