ಮುದ್ದು 'ರಾಕ್ಷಸಿ' ಸಿಂಧುಗೆ ಅಭಿಮಾನಿಯೊಬ್ಬನ ಸ್ವೀಟ್ ಗಿಫ್ಟ್
'ಲವ್ ಇನ್ ಮಂಡ್ಯ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ನಟಿ ಸಿಂಧು ಲೋಕನಾಥ್ ಅವರಿಗೆ ನಿನ್ನೆ (ಫೆಬ್ರವರಿ 5) ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ 'ಡ್ರಾಮಾ' ಕ್ವೀನ್ ಸಿಂಧು ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿ ಸಂದೀಪ್ ರಾಮ್, ಅವರ ಫೊಟೋಗಳನ್ನೆಲ್ಲಾ ಸೇರಿಸಿ ವಿಡಿಯೋ ಮಾಡಿ ಗಿಫ್ಟ್ ಅಂತ ಕೊಟ್ಟಿದ್ದಾರೆ.
ಹೌದು ಕೊಡಗಿನ ಬೆಡಗಿ ನಟಿ ಸಿಂಧು ಲೋಕನಾಥ್ ಅವರು ಡೇರಿಂಗ್ ನಟಿ ಅಂತಾನೇ ಖ್ಯಾತಿ ಪಡೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ನಿನಾಸಂ ಸತೀಶ್ ಅವರೊಂದಿಗೆ 'ಡ್ರಾಮಾ' ಚಿತ್ರದಲ್ಲಿ ನಟಿಸಿದ ನಂತರ ಅವರಿಗೆ ಒಳ್ಳೊಳ್ಳೆ ಅವಕಾಶಗಳು ಹುಡುಕಿಕೊಂಡು ಬಂದವು.['ರಾಕ್ಷಸಿ' ನೋಡಿದ ವಿಮರ್ಶಕರು ಭಯಗೊಂಡ್ರಾ ಇಲ್ಲ ಭೇಷ್ ಅಂದ್ರಾ?]
ಇದೀಗ ಅಭಿಮಾನಿಯೊಬ್ಬರ ಈ ಸುಂದರ ಗಿಫ್ಟ್ ನೋಡಿ ನಟಿ ಸಿಂಧು ಅವರು ಫುಲ್ ಖುಷ್ ಆಗಿ ಬಿಟ್ಟಿದ್ದಾರೆ. ಅತೀ ಕಡಿಮೆ ಸಿನಿಮಾಗಳಲ್ಲಿ ನಟಿಸಿದರೂ ಅತೀ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಕೀರ್ತಿ ಸಿಂಧು ಲೋಕನಾಥ್ ಅವರದು.
ಸುಮಾರು 15 ಸಿನಿಮಾಗಳಲ್ಲಿ ನಟಿಸಿರುವ ಸಿಂಧು ಅವರಿಗೆ 'ಲವ್ ಇನ್ ಮಂಡ್ಯ', 'ಡ್ರಾಮಾ' ಮತ್ತು 'ರಾಕ್ಷಸಿ' ಸಿನಿಮಾಗಳು ಅತೀ ಹೆಚ್ಚು ಹೆಸರು ತಂದು ಕೊಟ್ಟ ಚಿತ್ರಗಳು.[ಟ್ರೈಲರ್: ಮುದ್ದು ರಾಕ್ಷಸಿ ಮೇಲೆ ನಿಮಗೂ ಲವ್ ಆಗೋದು ಗ್ಯಾರಂಟಿ]
ನಟಿ ಸಿಂಧು ಲೋಕನಾಥ್ ಅವರು ನಿನ್ನೆ ತಮ್ಮ ಫ್ಯಾಮಿಲಿ ಮತ್ತು ಗೆಳೆಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಅಭಿಮಾನಿ ಸಂದೀಪ್ ರಾಮ್ ನೀಡಿರುವ ಅಮೂಲ್ಯ ಗಿಫ್ಟ್ ಅನ್ನು ಸಿಂಧು ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದು, ವಿಡಿಯೋ ಇಲ್ಲಿದೆ ನೋಡಿ...
Thank u soooo much #SandeepRam for making this video.. Meant a lot.. Thank uuu..
Posted by Sindhu Loknath on Thursday, February 4, 2016


Click it and Unblock the Notifications













