For Quick Alerts
  ALLOW NOTIFICATIONS  
  For Daily Alerts

  ಸದ್ದು ಮಾಡದೆ, ಸುದ್ದಿ ಆಗದೆ ಮದುವೆ ಆದ ನಟಿ ಸಿಂಧು ಲೋಕನಾಥ್

  By Harshitha
  |

  'ಪರಿಚಯ', 'ಡ್ರಾಮಾ', 'ಯಾರೇ ಕೂಗಾಡಲಿ', 'ಲವ್ ಇನ್ ಮಂಡ್ಯ' ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಸ್ವಲ್ಪ ಕೂಡ ಸದ್ದು ಮಾಡದೆ, ಎಲ್ಲೂ ಸುದ್ದಿ ಆಗದೆ ನಟಿ ಸಿಂಧು ಲೋಕನಾಥ್ ಮದುವೆ ಆಗಿದ್ದಾರೆ. ಕುಟುಂಬ, ಬಂಧು-ಬಳಗ, ಸ್ನೇಹಿತರ ಸಮ್ಮುಖದಲ್ಲಿ ಕರಾವಳಿ ಹುಡುಗ ಶ್ರೇಯಸ್ ಎಂಬುವರ ಜೊತೆ ನಟಿ ಸಿಂಧು ಲೋಕನಾಥ್ ವಿವಾಹ ಮಹೋತ್ಸವ ನಡೆದಿದೆ. ಮುಂದೆ ಓದಿರಿ...

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿಂಧು ಲೋಕನಾಥ್

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿಂಧು ಲೋಕನಾಥ್

  ಮಂಗಳೂರು ಮೂಲದ ಶ್ರೇಯಸ್ ಎಂಬುವರ ಕೈಹಿಡಿದಿದ್ದಾರೆ ಕೊಡಗಿನ ಕುವರಿ ನಟಿ ಸಿಂಧು ಲೋಕನಾಥ್.

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಕಳೆದ ಎರಡು ವರ್ಷಗಳಿಂದ ಶ್ರೇಯಸ್ ಹಾಗೂ ನಟಿ ಸಿಂಧು ಲೋಕನಾಥ್ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬದವರ ಸಮ್ಮತಿ ಲಭಿಸಿದ ಕೂಡಲೆ ಶ್ರೇಯಸ್-ಸಿಂಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಮದುವೆ ನಡೆದದ್ದು ಯಾವಾಗ.?

  ಮದುವೆ ನಡೆದದ್ದು ಯಾವಾಗ.?

  ನಾಲ್ಕು ದಿನಗಳ ಹಿಂದೆ ಅಂದ್ರೆ ಆಗಸ್ಟ್ 27 ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಂಧು ಲೋಕನಾಥ್-ಶ್ರೇಯಸ್ ಮದುವೆ ನಡೆದಿದೆ.

  ಶ್ರೇಯಸ್ ಹಿನ್ನಲೆ ಏನು.?

  ಶ್ರೇಯಸ್ ಹಿನ್ನಲೆ ಏನು.?

  ಮಂಗಳೂರು ಮೂಲದ ಸಂಜೀವ್ ಕೊಡಿಯಾಲ್ ಮತ್ತು ಸಬಿತಾ ಕೊಡಿಯಾಲ್ ರವರ ಪುತ್ರ ಶ್ರೇಯಸ್. ಪ್ರತಿಷ್ಟಿತ ಪೂಮಾ ಕಂಪನಿಯಲ್ಲಿ ಉದ್ಯೋಗಿ ಆಗಿರುವ ಶ್ರೇಯಸ್ ಜೊತೆ ಸಿಂಧು ಲೋಕನಾಥ್ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ.

  English summary
  Kannada Actress Sindhu Lokanath got married to Shreyas on August 27th in Madikeri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X