»   » ಹೊಸದೊಂದು ಜವಾಬ್ದಾರಿ ಹೊತ್ತ ನಟಿ ಸ್ಫೂರ್ತಿ ವಿಶ್ವಾಸ್

ಹೊಸದೊಂದು ಜವಾಬ್ದಾರಿ ಹೊತ್ತ ನಟಿ ಸ್ಫೂರ್ತಿ ವಿಶ್ವಾಸ್

Posted By:
Subscribe to Filmibeat Kannada

'ಕರ್ನಾಟಕ ವುಮನ್ ಅಚೀವರ್ಸ್ ಅವಾರ್ಡ್-2018' ಎಂಬ ಹೆಸರಿನಲ್ಲಿ, ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ನಡೆಯಲಿದೆ. ಇಂಥಾ ಪ್ರಯತ್ನನ್ನು "ಇವೆಂಟ್ ಆರ್ಟ್" ಎಂಬ ಸಂಸ್ಥೆ ಹಮ್ಮಿಕೊಂಡಿದ್ದು, ಇದಕ್ಕೆ ಕನ್ನಡದ ಖ್ಯಾತ ನಟಿ ಸ್ಫೂರ್ತಿ ವಿಶ್ವಾಸ್ ಜೊತೆಯಾಗಿದ್ದಾರೆ.

ಕಳೆದ 5 ತಿಂಗಳಿಂದಲೂ ಈ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸುವ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ಒಟ್ಟು 18 ಕೆಟಗರಿಗಳಿದ್ದು, ಕಲೆ, ಸಾಹಿತ್ಯ, ಸಂಸ್ಕøತಿ, ಸಮಾಜಸೇವೆ, ವಿಜ್ಞಾನ, ಶಿಕ್ಷಣ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಹಿಳೆಯರು ಮಾಡಿದಂಥ ಸಾಧನೆಯನ್ನು ಪರಿಗಣಿಸಿ ಅಂಥಾ ಸಾಧಕಿಯರನ್ನು ಗುರುತಿಸಿ ಗೌರವಿಸುವ ಕೆಲಸ ಈ ಸಂಸ್ಥೆಯಿಂದ ನಡೆಯಲಿದೆ.

ಈಗಾಗಲೇ ಈ ಮಹಿಳಾ ಸಾಧಕಿಯರನ್ನು ಆಯ್ಕೆ ಮಾಡಲು ಪರಿಣಿತರ ತಂಡವೊಂದನ್ನು ರಚಿಸಲಾಗಿದೆ. ಈ ತಂಡದಲ್ಲಿ ಡಾ.ಗಣೇಶ್ ಭಟ್, ಛಾಯಾ ಶ್ರೀವಾತ್ಸವ್, ಆರ್.ಜೆ. ಪ್ರದೀಪ್, ವನಿತಾ ಅಲೋಕ್, ದೀಪಾಲಿ ಸಿಕಂದ್, ಸಜ್ಜನ್ ಪೂವಯ್ಯ, ಡಾ.ಶೃತಿ ಚೇತನ್, ಸಮುದ್ಯತಾ ಕಡೂರು, ಸರಸ್ವತಿ ಪ್ರಿಯದರ್ಶಿನಿ ಹಾಗೂ ಶತೃಘ್ನ ಶೆಟ್ಟಿ ಸೇರಿದಂತೆ ವಿವಿಧ ರಂಗಗಳ ತಜ್ಞರುಗಳು ಪಾಲ್ಗೊಂಡಿದ್ದಾರೆ.

kannada actress spoorthi suresh new step

ಇದರಲ್ಲಿ ಮಕ್ಕಳನ್ನು ಸನ್ನಡತೆಯಲ್ಲಿ ಬೆಳೆಸುವ ತಾಯಂದಿರಿಗೂ ಒಂದು ಪ್ರಶಸ್ತಿಯಿದೆ. ಅಮೇಜಿಂಗ್ ಮದರ್ ಅವಾರ್ಡ್ ಎಂಬ ಹೆಸರಿನಲ್ಲಿ ಈ ಪಶಸ್ತಿಯನ್ನು ನೀಡಲಾಗುವುದು. ಇದೇ ಮೇ 5ರಂದು 'ಕೆಡಬ್ಲೂಎಎ-2018' ಸಮಾರಂಭದ ಕರ್ಟನ್ ರೈಸರ್ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ಈ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಫಲಕ ಅನಾವರಣಗೊಳಿಸಲಿದ್ದಾರೆ.

ಈ ವರ್ಣರಂಜಿತ ಹಾಗೂ ಅಪರೂಪದ ಮಹಿಳಾ ಪ್ರದಾನ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಸ್ಯಾಂಡಲ್ ವುಡ್ ನಟಿ, ನಿರೂಪಕಿ ಶ್ರೀಮತಿ ಸ್ಫೂರ್ತಿ ವಿಶ್ವಾಸ್ ಅವರು ವಹಿಸಿಕೊಂಡಿದ್ದಾರೆ. ಸ್ಫೂರ್ತಿ ವಿಶ್ವಾಸ್ ಕೂಡ ಮಾಧ್ಯಮ ಕ್ಷೇತ್ರದಿಂದ ಬಂದವವರು. ನಂತರ ಚಲನಚಿತ್ರ ಕಲಾವಿದೆಯಾಗಿ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಸಮಾರಂಭದ ಲೋಗೋ ಹಾಗೂ ಪ್ರಶಸ್ತಿ ಫಲಕದ ಅನಾವರಣ ಕಾರ್ಯಕ್ರಮ ಮೇ. 5 ರಂದು ನಡೆಯಲಿದೆ. ಬರುವ ಜೂನ್ ತಿಂಗಳಲ್ಲಿ ಈ ಸಾಧಯರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ.

English summary
Karnataka women achievers award 2018 programme will lead by kannada actress spoorthi vishwas. logo launching ceremony will held on may 5.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X