ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡ ನಟಿ ಶ್ರುತಿ ಹರಿಹರನ್
Recommended Video
ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿ ಶ್ರುತಿ ಹರಿಹರನ್ ಮೀ ಟೂ ವಿವಾದದ ಬಳಿಕ ದಿಢೀರನೆ ಮಾಯವಾಗಿದ್ದರು. ಶ್ರುತಿ ಹರಿಹರನ್ ಈಗ ಏನ್ಮಾಡ್ತಿದ್ದಾರೆ ಎನ್ನುವುದು ಅನೇಕರ ಯೋಚನೆಯಾಗಿತ್ತು. ಉತ್ತಮ ಸಿನಿಮಾಗಳಲ್ಲಿ ಅಭಿನಯಿಸುತ್ತ, ಅಭಿಮಾನಿಗಳನ್ನು ರಂಜಿಸುತ್ತ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಶ್ರುತಿ ಅಭಿಮಾನಿಗಳ ಮುಂದೆ ಬರದೆ ಅನೇಕ ತಿಂಗಳುಗಳೆ ಆಗಿವೆ.
ಮೀ ಟೂ ರಂಪಾಟದ ನಂತರ ಸಿನಿಮಾ ಅವಕಾಶಗಳಿಲ್ಲದೆ ಶ್ರುತಿ ಮಾಯವಾಗಿದ್ದಾರೆ ಅಂತ ಹೇಳಲಾಗುತ್ತಿತ್ತು. ಜೊತೆಗೆ ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆಯುವ ಉದ್ದೇಶದಿಂದ ಪತಿ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ ಅಂತಾನು ಹೇಳಲಾಗುತ್ತಿತ್ತು. ಶ್ರುತಿ ಮತ್ತೆ ಸಿನಿಮಾಗೆ ಮರಳುತ್ತಾರೆ ಎನ್ನುವಷ್ಟೊತ್ತಿಗೆ ಗರ್ಭಿಣಿ ಆಗಿರುವ ಸಂತಸದ ಸುದ್ದಿಯನ್ನು ನೀಡಿದ್ದಾರೆ.
ಕೆಲವುದಿನಗಳ ಹಿಂದೆ ಶ್ರುತಿ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಈ ಬಗ್ಗೆ ಶ್ರುತಿ ಎಲ್ಲೂ ಸ್ಪಷ್ಟಪಡಿಸಿರಲಿಲ್ಲ. ಆದ್ರೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದಾರೆ. ಬಹು ದಿನಗಳ ನಂತರ ಶ್ರುತಿ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದು ಹೀಗೆ.

ಪುಟ್ಟ ಮಗುವಿನ ನಿರೀಕ್ಷೆಯಲ್ಲಿ ಶ್ರುತಿ
"ಶ್ರುತಿ ಹರಿಹರನ್ ಪುಟ್ಟ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬ್ಗಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೊಳಗಿನ ಜೀವದ ಬಡಿತವನ್ನು ಅನುಭವಿಸಲು..ಇದು ಸಂಪೂರ್ಣ ಜರ್ನಿಯ ಆರಂಭ. ಪುಟ್ಟಮಗುವಿಗೆ ಸ್ವಾಗತ. ನಿನ್ನನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ. ಈ ಫೋಟೋ ಕ್ಲಿಕ್ಕಿಸಿದ್ದು ನಿನ್ನ ಸೂಪರ್ ಎಕ್ಸಾಯಿಟೆಡ್ ತಂದೆ" ಎಂದು ಹೇಳುತ್ತ ತಾಯಿಯಾಗುತ್ತಿರುವ ಸಂತಸವನ್ನು ಬಹಿರಂಗ ಪಡಿಸಿದ್ದಾರೆ.

ಮತ್ತೆ ಸಿನಿಮಾಗೆ ಬರ್ತಾರಾ ಶ್ರುತಿ?
ಶ್ರುತಿ ಹರಿಹರನ್ ಈಗಾಗಲೆ ದೊಡ್ಡ ಬ್ರೇಕ್ ಪಡೆದು ಚಿತ್ರರಂಗದಿಂದ ದೂರ ಸರಿದಿದ್ದಾರೆ. ಮೀ ಟು ಅಭಿಯಾನದ ನಂತರ ಅವಕಾಶಗಳಿಲ್ಲದೆ ದೂರ ಸರಿದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ತಾಯಿಯಾಗುತ್ತಿರುವ ಕಾರಣ ಶ್ರುತಿ ಚಿತ್ರರಂಗದಿಂದ ದೂರ ಸರಿಯುವ ಸಾಧ್ಯತೆ ಇದೆ. ಅಲ್ಲದೆ ಮಗುವಿನ ಆರೈಕೆಯಲ್ಲಿ ಶ್ರುತಿ ಬ್ಯುಸಿಯಾಲಿದ್ದಾರೆ. ಹಾಗಾಗಿ ಒಂದು ವೇಳೆ ಚಿತ್ರರಂಗಕ್ಕೆ ಬಂದರು ಸಧ್ಯದಲ್ಲೇ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ.
ತಿಂಗಳುಗಳ ಬಳಿಕ ಟ್ವಿಟ್ಟರ್ ನಲ್ಲಿ ಶ್ರುತಿ ಹರಿಹರನ್ ದರ್ಶನ

ತಿಂಗಳುಗಳ ಬಳಿಕ ಸಾಮಾಜಿಕ ಜಾಲಾತಾಣದಲ್ಲಿ
ಟ್ವಿಟ್ಟರ್ ನಲ್ಲಿ ಸಾದಾ ಸಕ್ರೀಯರಾಗಿದ್ದ ಶ್ರುತಿ ಹರಿಹರನ್ ಮಿಟೂ ಆರೋಪದ ಬಳಿಕ ಸುಮ್ಮನಾಗಿದ್ದರು. ಬಳಿಕ ಆಗಾಗ ಒಂದೊಂದು ಟ್ವೀಟ್ ಮಾಡುತ್ತಿದ್ದರು ಅಷ್ಟೆ. ಕೊನೆಯದಾಗಿ ಫೆಬ್ರವರಿ ತಿಂಗಳಿನಲ್ಲಿ ಮಿಟೂ ಬಗ್ಗೆಯೇ ಒಂದು ಟ್ವೀಟ್ ಮಾಡಿದ್ದ ಶ್ರುತಿ ಆನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅದರ ನಂತರ ತಿಂಗಳುಗಳ ಬಳಿಕ ಮತ್ತೆ ಗಿರೀಶ್ ಕಾರ್ನಾಡ್ ನಿಧನರಾದ ಸಮಯದಲ್ಲಿ ಟ್ವೀಟ್ ಮೂಲಕ ಟ್ವಿಟ್ಟರ್ ಗೆ ಕಮ್ ಬ್ಯಾಕ್ ಮಾಡಿದ್ದರು.

ಮನೆ ಮಾರಾಟಕ್ಕೆ ಇದೆ ಚಿತ್ರದಲ್ಲಿ ಶ್ರುತಿ
ನಾತಿಚರಾಮಿ ಚಿತ್ರದ ನಂತರ ಶ್ರುತಿ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಆದ್ರೀಗ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದ 'ಮನೆ ಮಾರಟಕ್ಕಿದೆ' ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ನಾಲ್ವರು ಹಾಸ್ಯ ಕಲಾವಿದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿ ಶಂಕರ್ ಈ ನಾಲ್ವರು ಕಾಮಿಡಿ ಸ್ಟಾರ್ಸ್ ಅಭಿನಯಿಸುತ್ತಿದ್ದಾರೆ. ನಾಲ್ಕು ಜನ ಹಾಸ್ಯ ಕಲಾವಿದರಿರುವ ಕಾಮಿಡಿ ಸಿನಿಮಾದಲ್ಲಿ ಶ್ರುತಿ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications











