33 ವರ್ಷದ ಮಹಿಳೆಯ ಪಾತ್ರದಲ್ಲಿ ಮಿಂಚಲಿರುವ ಶ್ರುತಿ ಹರಿಹರನ್..!

By Suneetha

ಬಹುಭಾಷಾ ನಟಿ ಶ್ರುತಿ ಹರಿಹರನ್ ಅವರು ಸ್ಯಾಂಡಲ್ ವುಡ್ ಸೇರಿದಂತೆ, ತಮಿಳು, ತೆಲುಗು ಭಾಷೆಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡದಲ್ಲಿ ನಟ ಪ್ರಜ್ವಲ್ ದೇವರಾಜ್ ಜೊತೆ 'ಮಾದ ಮತ್ತು ಮಾನಸಿ' ಎಂಬ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ನಟಿ ಶ್ರುತಿ ಹರಿಹರನ್ ಅವರಿಗೆ ಸವಾಲಿನ ಪಾತ್ರಗಳೆಂದರೆ ಬಹಳ ಇಷ್ಟವಂತೆ.

ತೆರೆಯ ಮೇಲಿನ ಪಾತ್ರಗಳಿಗೆ ವಯಸ್ಸು ಅಡ್ಡಿ ಪಡಿಸುವುದಿಲ್ಲ ಎನ್ನುವ ನಟಿ ಶ್ರುತಿ ಅವರು 'ರೆಂಜಿತ್ ಕಾಳಿದಾಸ್' ಎಂಬ ದ್ವಿಭಾಷಾ ಚಲನಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳು ಚಿತ್ರ 'ಅಚ್ಚಮುಂಡು ಅಚ್ಚಮುಂಡು'ಗೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಅರುಣ್ ವೈದ್ಯನಾಥನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ರೆಂಜಿತ್ ಕಾಳಿದಾಸ' ತಮಿಳು ಮತ್ತು ಕನ್ನಡದಲ್ಲಿ ಮೂಡಿಬರಲಿದೆ.[ಅರ್ಜುನ್ ಸರ್ಜಾ ಅವರ ಹೆಂಡತಿಯಾದ ಲೂಸಿಯಾ ಬೆಡಗಿ]

ಇನ್ನು ಈ ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್ ಅವರು ಕೇವಲ ಪತ್ನಿ ಪಾತ್ರವನ್ನು ಮಾತ್ರ ನಿರ್ವಹಿಸುವುದಲ್ಲದೇ, ಒಬ್ಬ ತಾಯಿಯ ಪಾತ್ರವನ್ನು ಮಾಡುತ್ತಿದ್ದಾರಂತೆ.

ಈ ಸಿನಿಮಾದಲ್ಲಿ ಸುಮಾರು 33 ವರ್ಷದ ಮಹಿಳೆಯಾಗಿ ಹಾಗೂ ಒಂದು ಮಗುವಿನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ನಿರ್ದೇಶಕ ಅರುಣ್ ವೈದ್ಯನಾಥನ್ ಅವರ ಕ್ರೈಮ್ ಥ್ರಿಲ್ಲರ್ ಸ್ಕ್ರಿಪ್ಟ್ ಅದ್ಭುತವಾಗಿದೆ. ಈ ರೀತಿಯ ಸಿನಿಮಾಗಳು ತಮಿಳಿನಲ್ಲಿ ಜನಪ್ರಿಯ ಆದರೆ ಕನ್ನಡದಲ್ಲಿ ತುಂಬಾ ವಿರಳ. ಕನ್ನಡದಲ್ಲಿ ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು ಎಂದು ಶ್ರುತಿ ನುಡಿಯುತ್ತಾರೆ.

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಈ ಇಡೀ ಚಿತ್ರದ ಚಿತ್ರೀಕರಣ ನಮ್ಮ ಬೆಂಗಳೂರಿನಲ್ಲಿ ನಡೆಯುವುದರಿಂದ, ಶ್ರುತಿ ಅವರು ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಎನ್ನುತ್ತಾರೆ ನಟಿ ಶ್ರುತಿ ಹರಿಹರನ್.

ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್ ಕಾಣಿಸಿಕೊಂಡಿರುವ 'ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು' ಬಿಡುಗಡೆಗೆ ಸಿದ್ಧವಾಗಿದ್ದು, ಸದ್ಯದಲ್ಲೇ ತೆರೆ ಕಾಣಲಿದೆ. ಜೊತೆಗೆ ಕಾಮಿಡಿ ನಟ ಶರಣ್ ಜೊತೆ 'ಜೈ ಮಾರುತಿ 800' ಚಿತ್ರದ ಶೂಟಿಂಗ್ ನಲ್ಲೂ ಶ್ರುತಿ ಹರಿಹರನ್ ಬ್ಯುಸಿಯಾಗಿದ್ದಾರೆ.

More from Filmibeat

English summary
Shruti Hariharan, who has worked in Kannada, Tamil and Malayalam movies, has carved a niche for herself doing a variety of roles, ever since she shot to fame with Lucia.The actress says that ‘age is no bar’ when it comes to on-screen characters and will soon play the wife of Arjun Sarja’s character in the upcoming bilingual film, Renjith Kalidoss made in Kannada and Tamil. The movie is directed by Arun Vaidyanathan of Achchamundu!Achchamundu fame.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X