For Quick Alerts
  ALLOW NOTIFICATIONS  
  For Daily Alerts

  ಮೀಟೂ ರಂಪಾಟ ಆದ್ಮೇಲೆ ಶ್ರುತಿ ಹರಿಹರನ್ ಗೆ ಅವಕಾಶಗಳೇ ಸಿಗುತ್ತಿಲ್ಲ.!

  |

  ಚಿತ್ರರಂಗಕ್ಕೆ ಕಾಲಿಟ್ಟ ಸ್ವಲ್ಪ ಸಮಯದಲ್ಲೇ ಸಿಕ್ಕಾಪಟ್ಟೆ ಬಿಜಿಯಾದ ನಟಿಯರ ಪೈಕಿ ಶ್ರುತಿ ಹರಿಹರನ್ ಕೂಡ ಒಬ್ಬರು. ರಿಯಲ್ ಸ್ಟಾರ್ ಉಪೇಂದ್ರ, ಅರ್ಜುನ್ ಸರ್ಜಾ, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶರಣ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದ ಶ್ರುತಿ ಹರಿಹರನ್ ಗೆ ಈಗ ಗಾಂಧಿನಗರದಲ್ಲಿ ಅವಕಾಶಗಳೇ ಸಿಗುತ್ತಿಲ್ಲ.!

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ #ಮೀಟೂ ಆರೋಪ ಮಾಡಿದ್ದರು. 'ವಿಸ್ಮಯ' ಚಿತ್ರೀಕರಣದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಸದ್ಯ ಈ ವಿವಾದ ಕೋರ್ಟ್ ಅಂಗಳದಲ್ಲಿದೆ.

  'ಜೆಂಟಲ್ ಮ್ಯಾನ್' ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಬೆಟ್ಟು ಮಾಡಿ ತೋರಿಸಿದ್ಮೇಲೆ ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲ ಶುರುವಾಯ್ತು. ಅಂದಿನಿಂದ ಮಾಧ್ಯಮಗಳ ಮುಂದೆ ಬಾರದ ಶ್ರುತಿ ಹರಿಹರನ್ ಇದೀಗ ಪ್ರತ್ಯಕ್ಷವಾಗಿದ್ದಾರೆ.

  ಸಂಚಾರಿ ವಿಜಯ್ ಮತ್ತು ಶ್ರುತಿ ಹರಿಹರನ್ ನಟಿಸಿರುವ 'ನಾತಿಚರಾಮಿ' ಡಿಸೆಂಬರ್ 28 ರಂದು ಬಿಡುಗಡೆ ಆಗಲಿದೆ. 'ನಾತಿಚರಾಮಿ' ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿದ ಶ್ರುತಿ ಹರಿಹರನ್, ''ಕನ್ನಡದಲ್ಲಿ ಅವಕಾಶಗಳ ಕೊರತೆ'' ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಮುಂದೆ ಓದಿರಿ...

  ಆಫರ್ ಬರುತ್ತಿಲ್ಲ.!

  ಆಫರ್ ಬರುತ್ತಿಲ್ಲ.!

  ''ಹೊಸ ಆಫರ್ ಗಳು ಹೇಗೆ ಬರಬೇಕಿತ್ತೋ, ಹಾಗೆ ನನಗೆ ಬರುತ್ತಿಲ್ಲ. ಇದು ಸತ್ಯ. ಅದಕ್ಕೆ ಕಾರಣ ಈ ಮೀಟೂ ಅಭಿಯಾನನಾ.? ಗೊತ್ತಿಲ್ಲ'' ಎಂದು ಮಾಧ್ಯಮಗಳ ಮುಂದೆ ನಟಿ ಶ್ರುತಿ ಹರಿಹರನ್ ಹೇಳಿಕೆ ಕೊಟ್ಟಿದ್ದಾರೆ.

  ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.!ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.!

  ಕನ್ನಡದಲ್ಲಿ ಕೆಲಸ ಮಾಡುತ್ತಿಲ್ಲ.!

  ಕನ್ನಡದಲ್ಲಿ ಕೆಲಸ ಮಾಡುತ್ತಿಲ್ಲ.!

  ''ಕನ್ನಡದಲ್ಲಿ ಸದ್ಯಕ್ಕೆ ನಾನು ಕೆಲಸ ಮಾಡುತ್ತಿಲ್ಲ. ಯಾಕಂದ್ರೆ, ಯಾವುದೇ ಪ್ರಾಜೆಕ್ಟ್ ನ ನಾನು ಹೊಸದಾಗಿ ಸೈನ್ ಮಾಡಿಲ್ಲ. ನಾನು ಸಮಯಕ್ಕೆ ಕಾಯುತ್ತಿರುವೆ. ಕೆಲವು ನಿರ್ದೇಶಕರ ಜೊತೆಗೆ ಮಾತುಕತೆ ನಡೆಯುತ್ತಿದೆ'' - ಶ್ರುತಿ ಹರಿಹರನ್, ನಟಿ

  ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.!ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.!

  ದುಡ್ಡಿಗಾಗಿ ಸಿನಿಮಾ ಮಾಡಲ್ಲ.!

  ದುಡ್ಡಿಗಾಗಿ ಸಿನಿಮಾ ಮಾಡಲ್ಲ.!

  ''ಮುಂಚೆ ಯಾವುದೇ ಆಫರ್ ಬಂದರೂ ನಾನು ಸ್ವೀಕರಿಸುತ್ತಿದ್ದೆ. ಯಾಕಂದ್ರೆ, ನನ್ನ ವಯಸ್ಸು ಹಾಗಿತ್ತು. ಯೌವನದ ಸೊಕ್ಕಿನಿಂದ ಸದಾ ಕೆಲಸ ಮಾಡಬೇಕು ಅಂದುಕೊಳ್ಳುತ್ತಿದ್ದೆ. ಆದ್ರೀಗ, ದುಡ್ಡಿಗಾಗಿ ಸಿನಿಮಾ ಒಪ್ಪಿಕೊಳ್ಳುವುದನ್ನ ನಿಲ್ಲಿಸಿದ್ದೇನೆ. ಸ್ವಲ್ಪ ಚ್ಯೂಸಿ ಆಗಿದ್ದೇನೆ. ಯಾವುದೇ ಸಿನಿಮಾ ಮಾಡಿದರೂ, ಪ್ರೀತಿಯಿಂದ, ಹೆಮ್ಮೆಯಿಂದ ಮಾಡುತ್ತೇನೆ'' ಅಂತಾರೆ ಶ್ರುತಿ ಹರಿಹರನ್

  ಅರ್ಜುನ್ ಸರ್ಜಾ-ಶ್ರುತಿ ಕೇಸ್ ಗೆ ಟ್ವಿಸ್ಟ್: ಪೊಲೀಸರ ಮುಂದೆ 'ವಿಸ್ಮಯ' ನಿರ್ಮಾಪಕ ಹೇಳಿದ್ದೇನು.?ಅರ್ಜುನ್ ಸರ್ಜಾ-ಶ್ರುತಿ ಕೇಸ್ ಗೆ ಟ್ವಿಸ್ಟ್: ಪೊಲೀಸರ ಮುಂದೆ 'ವಿಸ್ಮಯ' ನಿರ್ಮಾಪಕ ಹೇಳಿದ್ದೇನು.?

  ನಂಬಿಕೆ ಇದೆ

  ನಂಬಿಕೆ ಇದೆ

  ''ನಮ್ಮಂಥ ನಟ-ನಟಿಯರಿಗೆ ಸಾಕಷ್ಟು ಡೈರೆಕ್ಟರ್ ಗಳು ಕೆಲಸ ಕೊಡುತ್ತಾರೆ ಅಂತ ನನಗೆ ನಂಬಿಕೆ ಇದೆ. ಇಲ್ಲಿಯವರೆಗೂ ಚೆನ್ನೈನಲ್ಲಿದ್ದೆ. ಅಲ್ಲಿ ಒಂದು ವೆಬ್ ಸೀರೀಸ್ ಮಾಡ್ತಿದ್ದೆ. ಕೇರಳದಲ್ಲಿ ಒಂದು ಶಾರ್ಟ್ ಮೂವಿ ಮಾಡಿದ್ದೇನೆ'' - ಶ್ರುತಿ ಹರಿಹರನ್, ನಟಿ

  English summary
  Kannada Actress Sruthi Hariharan is not getting offers post MeToo Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X