ಕಡೆಗೂ ಮದುವೆ ಬಗ್ಗೆ ಮೌನ ಮುರಿದ ಶ್ರುತಿ ಹರಿಹರನ್.!
#ಮೀಟೂ ಅಭಿಯಾನದ ಅಡಿ ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಶ್ರುತಿ ಹರಿಹರನ್, ದೂರಿನಲ್ಲಿ 'W/O Raam Kumar' ಎಂಬುದನ್ನು ಉಲ್ಲೇಖಿಸಿದ್ದರು.
ದೂರಿನ ಪ್ರತಿ ನೋಡಿದವರು ಶ್ರುತಿ ಹರಿಹರನ್ ಗುಟ್ಟಾಗಿ ಮದುವೆ ಆಗಿದ್ದಾರೆ ಅಂತಲೇ ಭಾವಿಸಿದ್ದರು. ಆದ್ರೆ, ತಮ್ಮ ಮದುವೆ ಬಗ್ಗೆ ಶ್ರುತಿ ಹರಿಹರನ್ ಇಲ್ಲಿಯವರೆಗೂ ಯಾವುದೇ ಕ್ಲಾರಿಟಿ ಕೊಟ್ಟಿರಲಿಲ್ಲ.
ಅಸಲಿಗೆ, #ಮೀಟೂ ವಿವಾದ ಕೋರ್ಟ್ ಮೆಟ್ಟಿಲೇರಿದ ಮೇಲೆ ಮಾಧ್ಯಮಗಳ ಮುಂದೆ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದೇ ಕಡಿಮೆ. ಇದೀಗ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಶ್ರುತಿ ಹರಿಹರನ್ ಕಡೆಗೂ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಮುಂದೆ ಓದಿರಿ...

ವರ್ಷದ ಹಿಂದೆ ಮದುವೆ
''ನಾನು ವರ್ಷದ ಹಿಂದೆ ಮದುವೆಯಾದೆ'' ಎಂಬುದನ್ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಸ್ಪಷ್ಟ ಪಡಿಸಿದ್ದಾರೆ. ಆದ್ರೆ, ಪತಿಯ ಹೆಸರನ್ನಾಗಲಿ, ಪತಿಯ ಕುರಿತಾಗಲಿ ಶ್ರುತಿ ಹರಿಹರನ್ ಹೆಚ್ಚು ಮಾತನಾಡಿಲ್ಲ.

ಏಳು ವರ್ಷಗಳ ಸಂಬಂಧ
ರಾಮ್ ಕುಮಾರ್ ಎಂಬುವರನ್ನ ಏಳು ವರ್ಷಗಳಿಂದ ಪ್ರೀತಿಸುತ್ತಿರುವ ಬಗ್ಗೆ ನಟಿ ಶ್ರುತಿ ಹರಿಹರನ್ ಈ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು. ಇದೇ ರಾಮ್ ಕುಮಾರ್ ರನ್ನ ಶ್ರುತಿ ಹರಿಹರನ್ ಮದುವೆ ಆಗಿದ್ದಾರೆ ಎನ್ನಲಾಗಿದೆ.

ವೃತ್ತಿಗಾಗಿ ಮದುವೆ ಮ್ಯಾಟರ್ ಮುಚ್ಚಿಟ್ರಾ ಶ್ರುತಿ.?
ಮದುವೆ ವಿಚಾರ ಬಹಿರಂಗ ಪಡಿಸಿದರೆ, ಆಫರ್ ಗಳು ಕಮ್ಮಿ ಆಗಬಹುದು ಎಂದು ಶ್ರುತಿ ಹರಿಹರನ್ ಮುಚ್ಚಿಟ್ಟಿದ್ರಾ.? ಗೊತ್ತಿಲ್ಲ. ಆದ್ರೆ, ಶ್ರುತಿ ಹರಿಹರನ್ ಮದುವೆ ಬಗ್ಗೆ ಗಾಂಧಿನಗರದಲ್ಲಿ ಗಾಸಿಪ್ ಹಬ್ಬಿದಾಗ, ಅದನ್ನೆಲ್ಲ ಆಕೆ ನಿರಾಕರಿಸಿದ್ದರು.

ಆಫರ್ ಗಳು ಕಮ್ಮಿ
#ಮೀಟೂ ವಿವಾದ ಆದ್ಮೇಲೆ ಶ್ರುತಿ ಹರಿಹರನ್ ಗೆ ಅವಕಾಶಗಳ ಕೊರತೆ ಎದ್ದು ಕಾಣುತ್ತಿದೆ. ಮುಂಚೆ ಇದ್ದ ಡಿಮ್ಯಾಂಡ್ ಈಗಿಲ್ಲ. ಅದನ್ನ ಸ್ವತಃ ಶ್ರುತಿ ಕೂಡ ಒಪ್ಪಿಕೊಳ್ಳುತ್ತಾರೆ.


Click it and Unblock the Notifications











