For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿ ಹರಿಹರನ್ ಗೆ ಸೀಮಂತ ಸಂಭ್ರಮ

  |

  ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಗರ್ಭಿಣಿ ಆಗಿರುವ ಸಂತಸದ ವಿಚಾರವನ್ನು ಇತ್ತೀಚಿಗಷ್ಟೆ ಹಂಚಿಕೊಂಡಿದ್ದರು. ಈಗ ಶ್ರುತಿ ಮತ್ತೊಂದು ಸಂತಸದ ಕ್ಷಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹೌದು, ಶ್ರುತಿ ಸೀಮಂತ ಕಾರ್ಯಕ್ರಮದ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

  ಸೀಮಂತ ಸಂಭ್ರಮದ ಎಲ್ಲಾ ಪೋಟೋಗಳನ್ನು ಒಂದು ಸ್ಲೈಡ್ ಮಾಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ವಿಭಿನ್ನವಾಗಿ ಡಿಸೈನ್ ಆಗಿರುವ ಕೇಕ್ ಅನ್ನು ಕತ್ತರಿಸಿ, ತಮಗಿಷ್ಟವಾದ ತಿನಿಸುಗಳ ಜೊತೆಗೆ ಮೊಸರನ್ನವನ್ನು ಸವಿದು ಸೀಮಂತ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

  ಶ್ರುತಿ ಹರಿಹರನ್ ಫೋಸ್ಟ್ ಗೆ ನೆಟ್ಟಿಗರ ಕಮೆಂಟ್ಸ್ ನೋಡಿ ಸಿಡಿದೆದ್ದ ಪ್ರಥಮ್

  ಇನ್ನು ಈ ಸೀಮಂತ ಕಾರ್ಯಕ್ರಮದ ಸಂಭ್ರಮ, ಸಡಗರಕ್ಕೆ ಕಾರಣರಾದ ಸ್ನೇಹಿತರು ಮತ್ತು ಕುಂಟುಂಬದ ಒಂದಿಷ್ಟು ಮಂದಿಗೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ. ತುಂಬು ಗರ್ಭಿಣಿ ಆಗಿರುವ ಶ್ರುತಿಗೆ ಅಭಿಮಾನಿಗಳ ಮಹಾಪೂರವೆ ಹರಿದು ಬರುತ್ತಿದೆ. ಶ್ರುತಿ ಸದ್ಯ ಪತಿ ರಾಮ್ ಕುಮಾರ್ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ.

  ಇನ್ನು ಕೆಲವರು ಮೀ ಟೂ ಪ್ರಕರಣವನ್ನು ಇಟ್ಟುಕೊಂಡು ತೀರ ಕೆಳಮಟ್ಟದ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಆದ್ರೆ ಶ್ರುತಿ ಇದ್ಯಾವದಕ್ಕು ತಲೆಕೆಡಿಸಿಕೊಳ್ಳದೆ ಪ್ರೆಗ್ನೆನ್ಸಿಯ ಅನುಭವವನ್ನು ಎಂಜಾಯ್ ಮಾಡುತ್ತಿದ್ದಾರೆ. ಶ್ರುತಿ ಹರಿಹರನ್ ಕೊನೆಯದಾಗಿ ನಾತಿಚರಾಮಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಯಾವ ಸಿನಿಮಾದಲ್ಲು ಬಣ್ಣ ಹಚ್ಚಿಲ್ಲ ಶ್ರುತಿ. ಆದ್ರೆ ಶ್ರುತಿ ಅಭಿನಯದ ಮತ್ತೊಂದು ಸಿನಿಮಾ ಮನೆ ಮಾರಟಕ್ಕಿದೆ ರಿಲೀಸ್ ಗೆ ರೆಡಿಯಾಗಿದೆ.

  English summary
  Kannada actress Sruthi Hariharan share a baby shower photos. Sruthi Hariharan announced happy news couple of days back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X