ಮಗಳ ಮೊದಲ ವಿಡಿಯೋ ಹಂಚಿಕೊಂಡ ಶ್ರುತಿ ಹರಿಹರನ್: ಮಗು ನೋಡಿ ರಶ್ಮಿಕಾ ಹೇಳಿದ್ದೇನು?
ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಶ್ರುತಿ ಮೊದಲ ಮಗುವಿಗೆ ಜನ್ಮ ನೀಡಿ ಸುಮಾರು ಎರಡು ತಿಂಗಳಾಗಿದೆ. ಇದುವರೆಗೂ ಮಗಳ ಫೋಟೋವನ್ನು ಎಲ್ಲಿಯೋ ಶೇರ್ ಮಾಡಿಲ್ಲ. ಅಲ್ಲದೆ ಮುದ್ದು ಮಗಳ ಬಗ್ಗೆ ಎಲ್ಲಿಯೊ ಹೇಳಿಕೊಂಡಿಲ್ಲ.
ಆದ್ರೀಗ ಮೊದಲ ಬಾರಿಗೆ ಶ್ರುತಿ ಹರಿಹರನ್ ಮಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಶ್ರುತಿ ಹರಿಹರನ್ ಮಗಳ ಫೋಟೋ ನೋಡಿ ಸ್ಯಾಂಡಲ್ ವುಡ್ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರು ಹಾರ್ಟ್ ಇಮೋಜಿ ಕಳುಹಿಸುತ್ತಿದ್ದಾರೆ. ಅಂದ್ಹಾಗೆ ಶ್ರುತಿ ಮಗಳ ಪುಟ್ಟ ಕಾಲುಗಳ ವಿಡಿಯೋವನ್ನು ಮಾತ್ರ ಶೇರ್ ಮಾಡಿದ್ದಾರೆ. ವಿಡಿಯೋ ಜೊತೆಗೆ ಪುಟ್ಟ ಕಾಲುಗಳ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ.

ಪುಟ್ಟ ಕಾಲಿನ ವಿಡಿಯೋ ಶೇರ್ ಮಾಡಿದ ಶ್ರುತಿ
"ಪುಟ್ಟ ಕಾಲುಗಳಿವು. ಒಂದು ದಿನ ನಾನು ಇದೇ ಕಾಲುಗಳಲ್ಲಿ ಜಿಗಿಯುತ್ತೇನೆ, ಜೋರಾಗಿ ಓಡುತ್ತೇನೆ, ಮುಂದೊಂದು ದಿನ ಇದೇ ಕಾಲುಗಳಲ್ಲಿ ನಾನು ರಸ್ತೆಯನ್ನು ದಾಟುತ್ತೇನೆ, ಯಾರಿಗೆ ಗೊತ್ತು ನಾನು ಬಾಹ್ಯಾಕಾಶದಲ್ಲೂ ನಡೆಯಬಹುದು. ಒಂದು ದಿನ ಪರ್ವತ ಅಳತೆ ಮಾಡಬಹುದು. ಸಮುದ್ರದಲ್ಲಿ ಇದೇ ಕಾಲುಗಳನ್ನು ಬಡಿಯುತ್ತ ಈಜುತ್ತೇನೆ" ಎಂದು ಮಗಳ ಮುದ್ದು ಕಾಲುಗಳ ಬಗ್ಗೆ ಹೇಳಿದ್ದಾರೆ.

ಈ ರೀತಿಯ ಪ್ರೀತಿಯನ್ನು ಕಂಡಿರಲಿಲ್ಲ
"ನನ್ನ ಈ ಕಾಲುಗಳೂ ನಿಮ್ಮೆಲ್ಲರಂತೆ ಎಲ್ಲ ಕೆಲಸಗಳನ್ನೂ ಮಾಡಲಿವೆ. ಆದರೆ, ಇಂದು ಈ ಕಾಲುಗಳು ಬಹಳ ಸಂತೋಷವಾಗಿವೆ. ಈ ಕಾಲುಗಳಿಗೆ ತನ್ನ ಬೆರಳುಗಳನ್ನು ಅಲುಗಿಸುತ್ತಾ ಇರುವುದೆಂದರೆ ಬಹಳ ಖುಷಿ. ಪ್ರೀತಿಯ ಜೆ...ಈ 2 ತಿಂಗಳು ನಿನ್ನೊಂದಿಗೆ ಅದೆಷ್ಟು ಹುಚ್ಚಾಟಗಳನ್ನು ಆಡಿದ್ದೇನೋ ಗೊತ್ತಿಲ್ಲ. ಈ ರೀತಿಯ ಪ್ರೀತಿಯನ್ನು ನಾನು ಕಂಡಿರಲಿಲ್ಲ" ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ಶ್ರುತಿ ಹರಿಹರನ್ ಈ ಪೋಸ್ಟ್ ಗೆ ನಟಿ ರಶ್ಮಿಕಾ ಮಂದಣ್ಣ ಕಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ರಶ್ಮಿಕಾ ಕನ್ನಡ ನಟಿಯರ ಪೋಸ್ಟ್ ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಆದ್ರೆ ಶ್ರುತಿ ಹರಿಹರನ್ ಶೇರ್ ಮಾಡಿರುವ ಮಗು ವಿಡಿಯೋಗೆ "ಜಗತ್ತಿನ ಎಲ್ಲಾ ಸಂತೋಷ ನಿನಗೆ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಟಿಮಣಿಯರು ಹೇಳಿದ್ದೇನು?
ನಟಿ ರಾಗಿಣಿ ದ್ವಿವೇದಿ, ಸೋನು ಗೌಡ, ಸಂಯುಕ್ತ ಹೆಡ್ಗೆ, ಸಂಯುಕ್ತ ಹೋರನಾಡು ಸೇರಿದಂತೆ ಅನೇಕರು ವಿಶ್ ಮಾಡುವ ಜೊತೆಗೆ ಹಾರ್ಟ್ ಇಮೋಜಿ ಹಾಕಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಶ್ರುತಿ ಹರಿಹರನ್ ಸದ್ಯ ಕೇರಳದಲ್ಲಿ ಇದ್ದಾರೆ. ಮಗುವಿನ ಜೊತೆ ಉತ್ತಮ ಸಮಯ ಕಳೆಯುತ್ತಿದ್ದಾರೆ. ಅಪರೂಪಕ್ಕೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಶ್ರುತಿ ಇತ್ತೀಚಿಗೆ ಯಾವ ಫೋಟೋವನ್ನು ಶೇರ್ ಮಾಡಿರಲಿಲ್ಲ. ಆದ್ರೀಗ ಮಗುವಿನ ಪುಟ್ಟ ಕಾಲಿನ ಫೋಟೋವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











