ಸಿಬಿಎಸ್ಇ 12th ಬೋರ್ಡ್ ಪರೀಕ್ಷೆಯಲ್ಲಿ ಸುಧಾರಾಣಿ ಮಗಳ ಸಾಧನೆ

ಶಾಲೆ-ಕಾಲೇಜುಗಳಿಗೆ ಹೋಗುತ್ತಿರುವ ಮಕ್ಕಳ ತಂದೆ-ತಾಯಿಗೆ ಮಕ್ಕಳ ಪರೀಕ್ಷೆ ಮತ್ತು ಫಲಿತಾಂಶದ ಬಗ್ಗೆಯೇ ಹೆಚ್ಚು ತಲೆಕೆಡಿಸಿ ಕೊಂಡಿರುತ್ತಾರೆ. ಇತ್ತೀಚಿಗಷ್ಟೆ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಇದರ ಬೆನ್ನಲ್ಲೆ ಈಗ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ ಕೂಡ ಹೊರಬಿದ್ದಿದ್ದೆ.

ಸ್ಯಾಂಡಲ್ ವುಡ್ ನಟಿ ಸುಧಾರಾಣಿ ಪುತ್ರಿ ಅತಿಹೆಚ್ಚು ಮಾರ್ಕ್ಸ್ ಪಡೆಯುವ ಮೂಲಕ ತಂದೆ-ತಾಯಿಗೆ ಕೀರ್ತಿ ತಂದಿದ್ದಾರೆ. ಹೌದು, ಸುಧಾರಾಣಿ ಮಗಳು ನಿಧಿ 96.4% ಮಾರ್ಕ್ಸ್ ಪಡೆಯುವ ಮೂಲಕ ಪೋಷಕರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೆ ಪಿಯುಸಿ ಫಲಿತಾಂಶ ಪ್ರಕಟವಾಗಿತ್ತು. ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ 91% ಮಾರ್ಕ್ಸ್ ಪಡೆಯುವ ಮೂಲಕ ಪೊಷಕರಿಗೆ ಸಂತಸ ತಂದಿದ್ದರು. ಇನ್ನು SSLCಯಲ್ಲಿ ನಟ ಮತ್ತು ನಿರ್ದೇಶಕ ರಾಘುರಾಮ್ ಪುತ್ರಿ ನನಸು 92% ಪಡೆದುಕೊಳ್ಳುವ ಮೂಲಕ ಪೋಷಕರಿಗೆ ಕೀರ್ತಿ ತಂದಿದ್ದಾರೆ.

kannada actress sudharani daughter Nidhi got 96% in cbse 12th

ಈಗ ಸುಧಾರಾಣಿ ಮಗಳು ನಿಧಿ ಕೂಡ ಉತ್ತಮ ಮಾರ್ಕ್ಸ್ ಪಡೆದು ಶಾಲೆಗೆ ಎರಡನೆ ಸ್ಥಾನ ಗಳಿಸಿದ್ದಾರೆ. ಈ ಸಂತಸವನ್ನು ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಇದು ನಮ್ಮ ಜೀವನದ ತುಂಬಾ ಸಂತೋಷದ ಸಮಯ. ಸುಬ್ಬಿಕುಟ್ಟಿ 12ನೇ ತರಗತಿ ಸಿಬಿಎಸ್ಇ ಪರೀಕ್ಷೆಯಲ್ಲಿ 96.4% ಪಡೆದು ಶಾಲೆಗೆ ಎರಡನೇ ರ್ಯಾಂಕ್ ಪಡೆದಿದ್ದಾಳೆ" ಎಂದು ಮಗಳ ಸಾಧನೆಯನ್ನು ಕೊಂಡಾಡಿದ್ದಾರೆ.

ಸುಧಾರಾಣಿ ಮತ್ತು ಪತಿ ಗೋವರ್ಧನ್ ಇಬ್ಬರು ಮಗಳನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಮಗಳು ಶಾಲೆ ಮುಗಿಸಿದ ವಿಚಾರವನ್ನು ಸುಧಾರಾಣಿ ಹೇಳಿಕೊಂಡಿದ್ದರು. ಸದ್ಯ ನಿಧಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ನಿಧಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರಾ ಅಥವಾ ಕಾಲೇಜು ಮುಂದುವರೆಸುತ್ತಾರ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Kannada actress Sudharani daughter Nidhi got 96% in cbse 12th. Sudharani shares her happiness her in instagram account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X