38 ವರ್ಷದ ಹಿಂದಿನ ಲೇಖನ ಹಂಚಿಕೊಂಡ ನಟಿ ಸುಧಾರಾಣಿ
Recommended Video

ನಟಿ ಸುಧಾರಾಣಿ ಕನ್ನಡದ ಚೆಂದದ ನಟಿ. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇವರ ಬಗ್ಗೆ ಅನೇಕ ಲೇಖನಗಳು, ಕಾರ್ಯಕ್ರಮಗಳ ಬಂದಿವೆ. ಅದು ಸಾಮಾನ್ಯ ಕೂಡ.
ಆದರೆ, ಸುಧಾರಾಣಿಗೆ ಬಹಳ ಇಷ್ಟ ಆದ ಒಂದು ಲೇಖನ ಇದೆ. ಅದು 38 ವರ್ಷದ ಹಿಂದಿನ ಲೇಖನ. ಅದನ್ನು ಈಗ ಸುಧಾರಾಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆಗಿನ್ನು ಸುಧಾರಾಣಿ ಎರಡನೇ ತರಗತಿಯಲ್ಲಿ ಓದುತ್ತಿದ್ದರು. ಓದುವುದರ ಜೊತೆಗೆ ಭರತನಾಟ್ಯ ಪ್ರವೀಣೆ ಆಗಿದ್ದಿರು. 'ಕಿಟ್ಟು ಪುಟ್ಟು', 'ಕುಳ್ಳ ಕುಳ್ಳಿ' ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯ ಮಾಡಿದ್ದರು.

ಅವರ ಪ್ರತಿಭೆ ಬಗ್ಗೆ ರೂಪತಾರ ಮ್ಯಾಗಜಿನ್ ನಲ್ಲಿ ಒಂದು ಲೇಖನ ಬಂದಿತ್ತು. ಉಜ್ವಲ ಭವಿಷ್ಯವನ್ನು ನಿರೀಕ್ಷಿಸುತ್ತಿರುವ ಬೇಬಿ ಜಯಶ್ರೀ (ಸುಧಾರಾಣಿ ಮೊದಲ ಹೆಸರು) ಎನ್ನುವ ಶೀರ್ಷಿಕೆಯನ್ನು ಆ ಲೇಖನಕ್ಕೆ ನೀಡಲಾಗಿತ್ತು. 1981ರ ಏಪ್ರಿಲ್ ನಲ್ಲಿ ಈ ಲೇಖನ ಪ್ರಕಟ ಆಗಿತ್ತು.
ಲೇಖನದಲ್ಲಿ ಹೇಳಿದ ಹಾಗೆ ಆಗ ಉಜ್ವಲ ಭವಿಷ್ಯವನ್ನು ಸುಧಾರಾಣಿ ನಿರೀಕ್ಷೆ ಮಾಡುತ್ತಿದ್ದರು. ಎಲ್ಲ ನಿರೀಕ್ಷೆಯನ್ನು ನಿಜ ಮಾಡಿ ಕನ್ನಡ ಜನಪ್ರಿಯ ನಾಯಕಿಯರ ಪೈಕಿ ಒಬ್ಬರಾಗಿದ್ದಾರೆ.


Click it and Unblock the Notifications











