ಸುಧಾರಾಣಿ ಪುತ್ರಿಯ ಶಾಲೆಯ ಕೊನೆಯ ದಿನ ಹೀಗಿತ್ತು

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ ಸುಧಾರಾಣಿ. ಈಗ ಅವರ ಮಗಳು ನಿಧಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದ್ರ ಜೊತೆಗೆ ಈಗ ಶಾಲೆಗೆ ಹೋಗುತ್ತಿದ್ದ ಸುಧಾರಾಣಿ ಮಗಳು ನಿಧಿ ಇನ್ಮುಂದೆ ಶಾಲೆಗೆ ಹೋಗುವುದಿಲ್ಲವಂತೆ.

ಹಾಗಾದ್ರೆ, ಓದುವುದನ್ನ ಬಿಟ್ಟು ನಿಧಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರ ಅಂತ ಅಚ್ಚರಿ ಪಡಬೇಡಿ. ನಿಧಿ ಶಾಲೆ ಮುಗಿಸಿ ಕಾಲೇಜ್ ಗೆ ಹೊರಡಲು ತಯಾರಾಗುತ್ತಿದ್ದಾರೆ. ಹೌದು, ಇತ್ತೀಚಿಗಷ್ಟೆ ನಿಧಿ ಹೈಸ್ಕೂಲ್ ಮುಗಿಸಿದ್ದಾರೆ. ಕೊನೆಯ ಪರೀಕ್ಷೆ ಬರೆಯುವ ಮೂಲಕ ನಿಧಿ ಪ್ರೌಢ ಶಿಕ್ಷಣವನ್ನು ಮುಗಿಸಿ ಕಾಲೇಜ್ ಮೆಟ್ಟಿಲು ಹತ್ತಲು ಸಿದ್ಧರಾಗುತ್ತಿದ್ದಾರೆ.

kannada actress sudharanis daughter Nidhis last exam and last day of school life

ಮಗಳು ಶಾಲೆ ಮುಗಿಸಿದ ಸಂತಸವನ್ನು ಸುಧಾರಾಣಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮಗಳು ನಿಧಿ ಮತ್ತು ಸುಧಾರಾಣಿ ಅವರ ಪತಿ ಗೋವರ್ಧನ್ ಅವರ ಜೊತೆ ನಿಂತು ಕೊನೆಯ ಬಾರಿ ಶಾಲೆಗೆ ಹೋಗುತ್ತಿರುವ ಫೋಟೋವನ್ನು ಶೇರ್ ಮಾಡುವ ಜೊತೆಗೆ ಆ ಸಂತಸದ ಸಮಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

kannada actress sudharanis daughter Nidhis last exam and last day of school life

''ಇಂದು ಕಹಿ ಸಿಹಿ ಕ್ಷಣವಾಗಿದೆ. ನಿಧಿಯ ಕೊನೆಯ ಪರೀಕ್ಷೆ ಮತ್ತು ಶಾಲಾ ಜೀವನದ ಕೊನೆಯ ದಿನ. ಅಪ್ಪನ ಜೊತೆ ಶಾಲಾ ದಿನದ ಕೊನೆಯ ಫೋಟೋ ತೆಗೆದುಕೊಂಡಿದ್ದಾಳೆ. ಯಾವಾಗಲು ಆಕೆಯ ಅಪ್ಪ ಅವಳನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದರು. ಆದ್ರೆ ಇನ್ಮುಂದೆ ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ದುಃಖ. ಆದ್ರೆ, ಪ್ರತಿಯೊಂದು ಕೊನೆಗೂ ಒಂದು ಸಿಹಿ ಪ್ರಾರಂಭ ಇರುತ್ತೆ'.'' ಎಂದು ಮಗಳ ಶಾಲೆಯ ಕೊನೆ ದಿನವನ್ನು ವಿಶೇಷವಾಗಿ ಹೇಳಿಕೊಂಡಿದ್ದಾರೆ.

ಇನ್ನೂ ನಿಧಿ ಸ್ಯಾಂಡಲ್ ವುಡ್ ಎಂಟ್ರಿ ಕೊಡುತ್ತದ್ದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 'ಜೋಗಿ' ಪ್ರೇಮ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಿಧಿ ನಟಿ ರಕ್ಷಿತಾ ಅವರ ಸಹೋದರನ ಜೊತೆಗೆ ಸಿನಿ ಜೀವನದ ಮೊದಲ ಹೆಜ್ಜೆ ಇಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಶಾಲೆ ಮುಗಿಸಿರುವ ನಿಧಿ ಈ ರಜೆ ದಿನಗಳಲ್ಲಿ ಸಿನಿಮಾ ಮಾಡಿದ್ರು ಅಚ್ಚರಿ ಇಲ್ಲ.

More from Filmibeat

English summary
kannada actress sudharani's daughter Nidhi's last exam and last day of school life. sudharani share a sweet movement of her daughter last day of school.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X