»   » ರೆಬೆಲ್ ಸ್ಟಾರ್ ಮುದ್ದು ಮಡದಿಗೆ ಬರ್ತ್ ಡೇ ವಿಶ್ ಮಾಡಿ

ರೆಬೆಲ್ ಸ್ಟಾರ್ ಮುದ್ದು ಮಡದಿಗೆ ಬರ್ತ್ ಡೇ ವಿಶ್ ಮಾಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಒಂದು ಕಾಲದ ಮೇರು ನಟಿ ಚಂದನವನದ ರೆಬೆಲ್ ಸ್ಟಾರ್ ಅಂಬರೀಶ್ ಮುದ್ದಿನ ಮಡದಿ ಸುಮಲತಾ ಅಂಬರೀಶ್ ಅವರಿಗೆ ಇಂದು ಜನುಮದಿನದ ಸಂಭ್ರಮ.

ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ನಟನಾ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿರುವ ನಟಿ ಸುಮಲತಾ ಅಂಬರೀಶ್ ಅವರಿಗೆ ಇಂದು 52 ನೇ ಹುಟ್ಟುಹಬ್ಬದ ಸಡಗರ.

1962 ಆಗಸ್ಟ್ 27 ರಂದು ಚೆನೈ ಮೂಲದ ತೆಲುಗು ಕುಟುಂಬದಲ್ಲಿ ಜನಿಸಿದ ಇವರು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಂತರ ಸ್ಯಾಂಡಲ್ ವುಡ್ ನ ಖ್ಯಾತ ನಟ ಹಾಗೂ ಸಚಿವರಾಗಿರುವ ಅಂಬರೀಶ್ ಅವರನ್ನು ಮದುವೆಯಾದರು. ಅಭಿಷೇಕ್ ಗೌಡ ಈ ದಂಪತಿಗಳ ಏಕೈಕ ಪುತ್ರ.[ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ]

Sumalataha

15 ವರ್ಷದವರಿರುವಾಗಲೇ ನಟನಾ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ಸುಮಲತಾ ಅವರು 1979 ರಲ್ಲಿ ಆಂಧ್ರ ಪ್ರದೇಶದ ಬ್ಯೂಟಿ ಕಂಟೆಸ್ಟ್ ನಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ತದನಂತರ 'ತಿಸೈ ಮಾರಿಯಾ ಪರವೈಗಲ್' ಎಂಬ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ನಟನೆಗೆ ಇವರಿಗೆ 'ಬೆಸ್ಟ್ ನ್ಯೂ ಫೇಸ್' ಎನ್ನುವ ಆವಾರ್ಡ್ ಕೂಡ ದೊರಕಿತು.

ನಂತರ ತೆಲುಗು, ತಮಿಳು, ಮಲಯಾಳಂ, ಮುಂತಾದ ಕ್ಷೇತ್ರಗಳಲ್ಲಿ ಕಾಣಿಸಿಕೊಂಡರು. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಮುಂತಾದವರೊಂದಿಗೆ ನಟಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.[ನಟಿ ಸುಮಲತಾ ಅಂಬರೀಶ್ 'ವಿರಾಟ್' ದರ್ಶನ ]

'ರವಿಚಂದ್ರ' ಚಿತ್ರದ ಮೂಲಕ ರಾಜ್ ಕುಮಾರ್ ಅವರ ಜೊತೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಇದಾದ ನಂತರ 'ತಾಯಿಯ ಮಮತೆ', 'ತಾಯಿಯ ಹೊಣೆ', 'ತಾಯಿಯ ಕನಸು', 'ಕಥಾನಾಯಕ', 'ಸತ್ಯಜ್ಯೋತಿ', 'ಕಾಂಚನಗಂಗಾ', 'ಮಹೇಶ್ವರ', 'ಭೂಪತಿ', 'ಎಕೆ 57' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Sumalatha Ambareesh

ಜೊತೆಗೆ 'ಆಹುತಿ', 'ಶ್ರೀ ಮಂಜುನಾಥ', 'ಕಲ್ಲರಳಿ ಹೂವಾಗಿ', 'ಅವತಾರ ಪುರುಷ' ಮುಂತಾದ ಚಿತ್ರಗಳಲ್ಲಿ ತಮ್ಮ ಪತಿ ಅಂಬರೀಶ್ ಅವರ ಜೊತೆ ಮಿಂಚಿದ್ದಾರೆ.

ಸದ್ಯಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಹಾಗೂ ದರ್ಶನ್ ಜೊತೆ 'ವಿರಾಟ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇಂತಿಪ್ಪ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಕ್ಷೇತ್ರದ ಅನೇಕ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ದರ್ಶನ್, ನಿರ್ದೇಶಕ ಪವನ್ ಒಡೆಯರ್ ಮುಂತಾದವರು ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.[ಇಂದು ಅಂಬರೀಶ್ ಹುಟ್ಟುಹಬ್ಬ, ನ್ಯೂಸ್ ಅದಲ್ಲ! ]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿ ಸುಮಲತಾ ಅಂಬರೀಶ್ ಅವರಿಗೆ 'ಹ್ಯಾಪಿ ಬರ್ತ್ ಡೇ ಡಿಯರ್ ಮದರ್ ಇಂಡಿಯಾ', ಲವ್ ಯೂ ಫಾರ್ ಎವರ್' ಅಂತ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.

ಒಟ್ನಲ್ಲಿ ಎಲ್ಲಾ ಭಾಷೆಗಳ ಮೂಲಕ ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ರೆಬೆಲ್ ಪತ್ನಿ ಸುಮಲತಾ ಅವರಿಗೆ ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್ ಡೇ.

English summary
Kannada Actress Sumalatha Ambareesh celebrated her 52nd birthday Today (August 27)with his family and friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada