'ದೆವ್ವ' ಆಗಿ ನಿಮ್ಮನ್ನು ಕಾಡಲಿರುವ ಚೆಲುವೆ ತೇಜಸ್ವಿನಿ.!
'ಗೂಳಿಹಟ್ಟಿ' ಚಿತ್ರದ ನಂತರ ಗಾಂಧಿನಗರದಿಂದ ಮಾಯಾವಾಗಿ ಟಾಲಿವುಡ್ ನಲ್ಲಿ ಝಾಂಡಾ ಹೂಡಿದ್ದ ನಟಿ ತೇಜಸ್ವಿನಿ ಅವರು ಇದೀಗ ಮತ್ತೆ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದ್ದಾರೆ.
ಈ ಬಾರಿ ತಮ್ಮ ಅಭಿಮಾನಿಗಳಿಗೆ ಭಯಂಕರವಾಗಿ ಭಯ ಬೀಳಿಸುವ ಮೂಲಕ ವಿಭಿನ್ನವಾಗಿ ಗಾಂಧಿನಗರದತ್ತ ಬರುತ್ತಿದ್ದಾರೆ. 'ಡೈಯಾನ ಹೌಸ್' ಎಂಬ ಹಾರರ್-ಥ್ರಿಲ್ಲರ್ ಚಿತ್ರದ ಮೂಲಕ ನಟಿ ತೇಜಸ್ವಿನಿ ಅವರು ಮತ್ತೆ ಅದೃಷ್ಟ ಪರೀಕ್ಷೆ ಎದುರಿಸಲು ತಯಾರಾಗಿದ್ದಾರೆ.['ಗೂಳಿಹಟ್ಟಿ' ಮೇಲೆ ಗುಟುರು ಹಾಕಿರುವ ವಿಮರ್ಶಕರು]

ಅಂದಹಾಗೆ ಇದು ಕಾಮನ್ ಆಗಿ ಭೂತ-ಪಿಶಾಚಿಗಳ ಕಥೆ ಅಲ್ಲವಂತೆ, ಬದ್ಲಾಗಿ ಹಾರರ್ ಚಿತ್ರದ ಮೂಲಕ ಒಂದು ವಿಶೇಷ ಕಥೆ ಒಂದನ್ನು ಹೇಳಲು ಹೊರಟಿದ್ದಾರೆ ಹೊಸಬರು. ಚಿತ್ರಕ್ಕೆ ಭರತ್ ನಂದ ಆಕ್ಷನ್-ಕಟ್ ಹೇಳಿದ್ದು, ರಾಘವ ನಾಗ್ ಎಂಬ ಹೊಸ ಪ್ರತಿಭೆ ನಟಿ ತೇಜಸ್ವಿನಿ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಜುಲೈ 25, ಸೋಮವಾರದಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಚಿತ್ರದಲ್ಲಿ ನಟಿ ತೇಜಸ್ವಿನಿ ಅವರು 'ದೆವ್ವ'ದ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಭಯಪಡಿಸಲಿದ್ದಾರೆ.[ಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದ 'ಗೂಳಿಹಟ್ಟಿ' ಗದ್ದಲ]

'ಗೂಳಿಹಟ್ಟಿ' ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡ ನಟಿ ತೇಜಸ್ವಿನಿ ಅವರು ಇದೀಗ ಈ ವಿಭಿನ್ನ ಹಾರರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಕಾತರರಾಗಿದ್ದಾರೆ.


Click it and Unblock the Notifications











