ಆಶಾ ಭಟ್ ನಂತರ 'ರಾಬರ್ಟ್' ಟೀಮ್ ಗೆ ಬಂದ ಮತ್ತೊಬ್ಬ ಚೆಲುವೆ
ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಇದೀಗ ಚಿತ್ರತಂಡಕ್ಕೆ ಮತ್ತೊಬ್ಬ ನಾಯಕಿಯ ಆಗಮನ ಆಗಿದೆ.
ತೇಜಸ್ವಿನಿ ಪ್ರಕಾಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂದು (ಡಿಸೆಂಬರ್ 19) ಅವರ ಹುಟ್ಟುಹಬ್ಬ ಇದ್ದು, ಇದೇ ದಿನ ಅವರ ಹೆಸರನ್ನು ಚಿತ್ರತಂಡ ಘೋಷಣೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತೊಬ್ಬ ನಾಯಕಿಯ ಹೆಸರನ್ನು ತಿಳಿಸಿದ್ದಾರೆ.
ಆಶಾ ಭಟ್ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರು. ಹೀಗಿರುವಾಗ ತೇಜಸ್ವಿನಿ ಕೂಡ ಚಿತ್ರತಂಡಕ್ಕೆ ಬಂದಿದ್ದಾರೆ. ಅವರ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದ ಯಾವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

ಈ ಹಿಂದೆ ದರ್ಶನ್ ರೊಂದಿಗೆ 'ಗಜ' ಸಿನಿಮಾದಲ್ಲಿ ತೇಜಸ್ವಿನಿ ನಟಿಸಿದ್ದರು. ಆ ಬಳಿಕ 'ರಾಬರ್ಟ್'ನಲ್ಲಿಯೂ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. 2016 ರಿಂದ ಕನ್ನಡ ಸಿನಿಮಾ ಮಾಡಿರದ ತೇಜಸ್ವಿನಿಗೆ ದೊಡ್ಡ ಅವಕಾಶವೇ ದೊರಕಿದೆ.
ಅಂದಹಾಗೆ, ತೇಜಸ್ವಿನಿ ಪ್ರಕಾಶ್ 'ಮಾತಾಡ್ ಮಾತಾಡ್ ಮಲ್ಲಿಗೆ', 'ಪ್ರೀತಿ ಏಕೆ ಭೂಮಿ ಮೇಲಿದೆ', 'ಅರಮನೆ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











