'ಯುವರತ್ನ' ಚಿತ್ರತಂಡ ಸೇರಿಕೊಂಡ ಕಾನ್ ಸ್ಟೇಬಲ್ ಸರೋಜ
ಸುಕ್ಕ ಸೂರಿ ನಿರ್ದೇಶನದ ಟಗರು ಚಿತ್ರದ ಮೂಲಕ ಕಾನ್ ಸ್ಟೇಬರ್ ಸರೋಜ ಆಗಿ ಖ್ಯಾತಿಗಳಿಸಿದ ನಟಿ ತ್ರಿವೇಣಿ ಈಗ 'ಯುವರತ್ನ'ನ ಅಡ್ಡಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೆ ಚಿತ್ರೀಕರಣ ವೇಳೆ ಮೈ ಮೇಲೆ ದೆವ್ವ ಬಂದವರಹಾಗೆ ಆಡಿ ಸುದ್ದಿ ಮಾಡಿದ್ದ ಸರೋಜ, ಈಗ ದಿಢೀರನೆ ಪುನೀತ್ ರಾಜ್ ಕುಮಾರ್ ಜೊತೆ ಕಾಣಿಸಿಕೊಂಡಿದಲ್ಲದೆ ಬೇಜಾನ್ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಜೊತೆ ನಿಂತು ಫೋಟೋ ತೆಗಿಸಿಕೊಂಡಿರುವ ಸರೋಜ 'ಯುವರತ್ನ' ಚಿತ್ರದಲ್ಲಿ ಅಭಿನಯಿಸುವ ಸುಳಿವು ಕೂಡ ನೀಡಿದ್ದಾರೆ.
'ಯುವರತ್ನ' ಚಿತ್ರದಲ್ಲಿ ನನ್ನ ಪಾತ್ರಕ್ಕಾಗಿ ಕಾಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಅಂದ್ಹಾಗೆ ಚಿತ್ರದಲ್ಲಿ ತ್ರಿವೇಣಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದ್ರೆ ಡಾಲಿಯ ಡಾರ್ಲಿಂಗ್ 'ಯುವರತ್ನ' ಟೀಂ ಸೇರಿಕೊಂಡಿರುವುದು ಚಿತ್ರದ ಮೇಲಿನ ಕುತೂಹಲ ಕೊಂಚ ಹೆಚ್ಚಾಗಿದೆ.

ಇನ್ನು ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಚಿತ್ರದಲ್ಲೂ ಡಾಲಿಗೆ, ಸರೋಜ ಜೋಡಿ ಆಗ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿರುವ ಸರೋಜ ಸಧ್ಯದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಯುವರತ್ನ ಚಿತ್ರತಂಡ ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಚಿತ್ರದ ಪ್ರಮುಕ ಭಾಗದ ಚಿತ್ರೀಕರಣ ಮೈಸೂರಿನ ಕೆಲವು ಸುಂದರ ತಾಣಗಳಲ್ಲಿ ನಡೆಯುತ್ತಿದೆ. ಅಂದ್ಹಾಗೆ ಈಗಾಗಲೆ ಯುವರತ್ನ ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೆ ಇದೆ. ರಾಧಿಕಾ ಶರತ್ ಕುಮಾರ್, ವಸಿಷ್ಠ ಸಿಂಹ, ಅರು ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ನಾಯಕಿಯಾಗಿ ಸಯೇಶಾ ಸೈಗಲ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











