ಸ್ಯಾಂಡಲ್ ವುಡ್ ನ ಈ ಮೂವರು ಸುಂದರಿಯರ 'ಯಾನ' ಹೀಗಿದೆ ನೋಡಿ

ಸ್ಯಾಂಡಲ್ ವುಡ್ ನ ಮೂವರು ಸುಂದರಿಯರು ಮಸ್ತ್ ಎಂಜಾಯ್ ಮಾಡಲು ಗೋವಕಡೆ ಪಯಣ ಬೆಳೆಸಿದ್ದಾರೆ. ಅವರ ಕಲರ್ ಫುಲ್ ಲೈಫ್ ಗೆ ಯುವಕರು ಬೋಲ್ಡ್ ಆಗಿದ್ದಾರೆ. ಅಂದ್ಹಾಗೆ ಇದು ಯಾವ ಸುಂದರಿಯರ 'ಯಾನ' ಅಂತೀರಾ. ಸ್ಯಾಂಡಲ್ ವುಡ್ ನ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂವರು ಮುದ್ದಾದ ಹೆಣ್ಣುಮಕ್ಕಳ 'ಯಾನ'.

ವೈನಿಧಿ, ವೈಭವಿ ಮತ್ತು ವೈಸಿರಿ ಈ ಮೂವರು ಮಕ್ಕಳು ಒಂದೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ 'ಯಾನ' ಸಿನಿಮಾದ ಟ್ರೈಲರ್ ಇತ್ತಿಚಿಗಷ್ಟೆ ರಿಲೀಸ್ ಆಗಿದೆ. ವಿಶೇಷ ಅಂದ್ರೆ ಚಿತ್ರದ ಟ್ರೈಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಈ ಮೂವರು ನಟಿಮಣಿಯರಿಗೆ 'ಯಾನ' ಹೊಸ ಅನುಭವ. ಹಾಗಾಗಿ ಚಿತ್ರದ ಬಗ್ಗೆ ಸಾಕಷ್ಟು ಎಕ್ಸಾಯಿಟ್ ಆಗಿದ್ದಾರೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಮೂವರು ನಾಯಕಿಯರಿಗೆ ಮೊದಲ ಅನುಭವ ಆದ್ರು ತೆರೆ ಮೇಲೆ ಸುಂದರವಾಗಿ ಕಾಣಿಸಿಕೊಳ್ಳುವ ಜೊತೆಗೆ ಅದ್ಭುತವಾಗಿ ಅಭಿನಯಿಸಿದ್ದಾರೆ.

Kannada actress Vainidhi, Vaisiri and Vaibhavi starrer Yaana film trailer released

ಅಂದ್ಹಾಗೆ ಚಿತ್ರಕ್ಕೆ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳಿದ್ದಾರೆ. ಅವರ ಮಕ್ಕಳಿಗೆ ಅವರೆ ನಿರ್ದೇಶನ ಮಾಡಿರುವುದು ಚಿತ್ರದ ವಿಶೇಷ. ಇನ್ನು ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಸುಹಾಸಿನಿ ಮತ್ತು ಕಾಮಿಡಿ ಸ್ಟಾರ್ಸ್ ಸಾಧುಕೋಕಿಲ, ಚಿಕ್ಕಣ್ಣ ಮತ್ತು ಶಿವರಾಜ್ ಕೆ ಆರ್ ಪೇಟೆ ಅಭಿನಯಿಸಿದ್ದಾರೆ.

ಸದ್ಯ ಟ್ರೈಲರ್ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿರುವ ಯಾನ ಸಧ್ಯದಲ್ಲೆ ತೆರೆಗೆ ಬರಲಿದೆ. ಈ ಮೊದಲು ಚಿತ್ರದ ಪ್ರಮೋಷನಲ್ ಹಾಡನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ರು. ಸದ್ಯ ಯಶ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ.

'ಯಾನ' ಚಿತ್ರದ ಟ್ರೈಲರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Kannada actress Vainidhi, Vaisiri and Vaibhavi starrer Yaana film trailer released. This trailer released by Rocking star Yash. Yaana directed by Vijayalakshmi singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X