For Quick Alerts
  ALLOW NOTIFICATIONS  
  For Daily Alerts

  ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಟಿ ವೀಣಾ ಸುಂದರ್

  |

  ವೀಣಾ ಸುಂದರ್ ಕನ್ನಡದ ಕಿರುತೆರೆ ಲೋಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ನಟಿ. ಧಾರಾವಾಹಿ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತಾಯಿ ಪಾತ್ರಕ್ಕೆ ಜೀವ ತುಂಬುವ ವೀಣಾ ಸುಂದರ್ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ.

  ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವೀಣಾ ಸುಂದರ್ ಇದೀಗ ಮೊದಲ ಬಾರಿಗೆ ತೆಲುಗು ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಅಂದ್ಹಾಗೆ ವೀಣಾ ಸುಂದರ್ ನಟಿಸುತ್ತಿರುವುದು ಕನ್ನಡದ ಆ ಕರಾಳ ರಾತ್ರಿ ಸಿನಿಮಾದ ತೆಲುಗು ರಿಮೇಕ್ ನಲ್ಲಿ. 2018ರಲ್ಲಿ ತೆರೆಗೆ ಬಂದಿದ್ದ ಆ ಕರಾಳ ರಾತ್ರಿ ಸಿನಿಮಾ ತೆಲುಗಿನಲ್ಲಿ 'ಅನಗನಗಾ ಓ ಅತಿಥಿ' ಹೆಸರಿನಲ್ಲಿ ರಿಮೇಕ್ ಆಗುತ್ತಿದೆ.

  ಹೆಸರಿನಲ್ಲೆ ಸೆಳೆವಂಥ ಇವರು ಸುಂದರ್ ವೀಣಾ..!

  ಮೂಲ ಸಿನಿಮಾದಲ್ಲಿ ವೀಣಾ ಸುಂದರ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತೆಲುಗು ರಿಮೇಕ್ ನಲ್ಲೂ ವೀಣಾ ಅದೇ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಪಾತ್ರಕ್ಕೆ ಅನ್ನಪೂರ್ಣ ಎಂದು ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಸಹ ರಿಲೀಸ್ ಮಾಡಲಾಗಿದೆ.

  ಅಂದ್ಹಾಗೆ ಅ ಕರಾಳ ರಾತ್ರಿ ಚಿತ್ರದಲ್ಲಿ ವೀಣಾ ಅದ್ಭುತ ಅಭಿನಯಕ್ಕೆ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿತ್ತು. ಇದೀಗ ಅದೇ ಪಾತ್ರದ ಮೂಲಕ ತೆಲುಗು ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ವಿಶೇಷ ಅಂದರೆ ತೆಲುಗಿನಲ್ಲಿ ಅನಗನಗಾ ಓ ಅತಿಥಿ ಸಿನಿಮಾವನ್ನು ದಯಾಳ್ ಪದ್ಮನಾಭ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

  ಅಣ್ಣನನ್ನು ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ Jote Joteyali ಅನು | Filmibeat Kannada

  ಆ ಕರಾಳ ರಾತ್ರಿ ಸಿನಿಮಾದಲ್ಲಿ ನಟಿ ಅನುಪಮಾ ಗೌಡ ಮತ್ತು ಜೆಕೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅನುಪಮಾ ಗೌಡ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ನಟಿ ಪಾಯಲ್ ರಜಪೂತ್ ನಿಭಾಯಿಸಿದ್ದಾರೆ. ಇನ್ನೂ ಜೆಕೆ ಪಾತ್ರದಲ್ಲಿ ಚೈತನ್ಯ ಕೃಷ್ಣ ಬಣ್ಣ ಹಚ್ಚಿದ್ದಾರೆ.

  English summary
  Kannada Actress Veena Sundar Enter to Telugu film industry. Veena Sundar's first Telugu movie character poster release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X