ನಟಿ ವಿಜಯಲಕ್ಷ್ಮಿ ಇಲ್ಲಿಯವರೆಗೂ ಮದುವೆ ಯಾಕೆ ಆಗಿಲ್ಲ.?
Recommended Video

ಕನ್ನಡ ಚಿತ್ರರಂಗ ಬಿಟ್ಟು ತಮಿಳು ಚಿತ್ರರಂಗದ ಕಡೆಗೆ ಮುಖ ಮಾಡಿದ ನಟಿ ವಿಜಯಲಕ್ಷ್ಮಿ ಬಗ್ಗೆ ಕೇಳಿಬಂದ ಗಾಸಿಪ್ ಗಳು ಒಂದೆರಡಲ್ಲ. ''ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂಬೆಲ್ಲ ಗುಸುಗುಸು ಹಬ್ಬಿದ್ದು ಕಾಲಿವುಡ್ ನಿಂದಲೇ.!
ತಂದೆ ತೀರಿಕೊಂಡ ಬಳಿಕ ಮಾನಸಿಕ ಖಿನ್ನತೆಗೆ ಒಳಗಾದ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ನಿಜ. ಆದ್ರೆ, ವಿಜಯಲಕ್ಷ್ಮಿ ಪ್ರಾಣಕ್ಕೆ ಯಾವುದೇ ಅಪಾಯ ಆಗಿಲ್ಲ.
ಮತ್ತೊಂದು ವಿಷಯ ಅಂದ್ರೆ, ಎಲ್ಲರೂ ಭಾವಿಸಿರುವ ಹಾಗೆ ನಟಿ ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ಇಲ್ಲಿಯವರೆಗೂ ನಟಿ ವಿಜಯಲಕ್ಷ್ಮಿ ಮದುವೆ ಆಗಿಲ್ಲ.
ಸಹಾಯಕ ನಿರ್ದೇಶಕ ಹಾಗೂ ನಟ ಸೃಜನ್ ಲೋಕೇಶ್ ಜೊತೆಗೆ ನಟಿ ವಿಜಯಲಕ್ಷ್ಮಿ ಹೆಸರು ತಳುಕು ಹಾಕಿಕೊಂಡಿತ್ತಾದರೂ, ನಟಿ ವಿಜಯಲಕ್ಷ್ಮಿ ಇನ್ನೂ ಒಂಟಿಯಾಗಿ ಇದ್ದಾರೆ. ಇದಕ್ಕೆ ಕಾರಣ ಏನು.? ಈ ಬಗ್ಗೆ ನಟಿ ವಿಜಯಲಕ್ಷ್ಮಿ ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ಮನಬಿಚ್ಚಿ ಮಾತನಾಡಿದರು. ಮುಂದೆ ಓದಿರಿ...
[ಕೃಪೆ: ಸುವರ್ಣ ನ್ಯೂಸ್ 24*7]

ಇಲ್ಲಿಯವರೆಗೂ ನಟಿ ವಿಜಯಲಕ್ಷ್ಮಿ ಮದುವೆ ಯಾಕೆ ಮಾಡಿಕೊಂಡಿಲ್ಲ.?
''ನಾನು ಯಾವತ್ತೂ ತಪ್ಪು ದಾರಿ ಹಿಡಿದಿಲ್ಲ. ನಾನು ಇಲ್ಲಿಯವರೆಗೂ ಮದುವೆ ಮಾಡಿಕೊಂಡಿಲ್ಲ. ಯಾಕೆ ಅಂದ್ರೆ, ನನ್ನ ಕಣ್ಣ ಮುಂದೆಯೇ ಅಕ್ಕನ ಸಂಸಾರ ಹಾಳಾಗಿರುವಾಗ, ನಾನು ಯಾರನ್ನೋ ಮದುವೆ ಆಗಿ ಹೇಗೆ ಖುಷಿಯಾಗಿರಲಿ.? ನನ್ನ ಅಕ್ಕನ ಜೀವನ ಸರಿಯಾಗುವವರೆಗೂ ನಾನು ನನ್ನ ಜೀವನದಲ್ಲಿ ಯಾರನ್ನೂ ಕರೆದುಕೊಂಡು ಬರಲ್ಲ'' ಎಂದಿದ್ದಾರೆ ನಟಿ ವಿಜಯಲಕ್ಷ್ಮಿ

ಸಹಾಯಕ ನಿರ್ದೇಶಕನಿಂದ ಕಿರುಕುಳ
ಸಹಾಯಕ ನಿರ್ದೇಶಕರೊಬ್ಬರನ್ನ ನಟಿ ವಿಜಯಲಕ್ಷ್ಮಿ ಪ್ರೀತಿಸುತ್ತಿದ್ದರು. ಆದ್ರೆ, ಆ ಪ್ರೀತಿ ಬಹಳ ದಿನ ಉಳಿಯಲಿಲ್ಲ. ನಟಿ ವಿಜಯಲಕ್ಷ್ಮಿಗೆ ಆ ಸಹಾಯಕ ನಿರ್ದೇಶಕ ಕಿರುಕುಳ ನೀಡಿದ್ದ.

ನಟ ಸೃಜನ್ ಲೋಕೇಶ್ ಜೊತೆಗೆ ನಿಶ್ಚಿತಾರ್ಥ
ನಟ ಸೃಜನ್ ಲೋಕೇಶ್ ಹಾಗೂ ನಟಿ ವಿಜಯಲಕ್ಷ್ಮಿ ಮೂರು ವರ್ಷಗಳ ಕಾಲ ಪ್ರೀತಿಸಿದರು. ಇಬ್ಬರ ಪ್ರೀತಿ ನಿಶ್ಚಿತಾರ್ಥದವರೆಗೂ ಹೋಯಿತು. ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ, ಇಬ್ಬರ ಮಧ್ಯೆ ಮನಸ್ತಾಪ ಮೂಡಿ ಬೇರಾದರು.

ಯಾರೂ genuine ಆಗಿ ಇರಲಿಲ್ಲ
''ಬೇಕಾದಷ್ಟು ಮದುವೆ ಪ್ರಪೋಸಲ್ ಬಂದಿತ್ತು. ಆದ್ರೆ, ಸೃಜನ್ ಬಿಟ್ಟರೆ ಇನ್ಯಾರೂ genuine ಆಗಿ ಇರಲಿಲ್ಲ. ಕೆಲವರಿಗೆ ಕಮಿಟ್ಮೆಂಟ್ ಇಷ್ಟ ಇರಲಿಲ್ಲ. ಬಳಿಕ ಜಾತಿ ಅಂತ ಶುರು ಆಯ್ತು. ಇಷ್ಟೆಲ್ಲ ಆಗಿದ್ದಕ್ಕೆ, ಮದುವೆ ಆಗಲು ಮನಸ್ಸು ಮಾಡಲಿಲ್ಲ'' - ನಟಿ ವಿಜಯಲಕ್ಷ್ಮಿ


Click it and Unblock the Notifications











