Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಜಯಲಕ್ಷ್ಮಿ ಕುಟುಂಬಕ್ಕೆ ನಟಿ ಜಯಪ್ರದ ಸಹೋದರ ಕೊಟ್ಟ ಯಮಯಾತನೆ ಅಷ್ಟಿಷ್ಟಲ್ಲ.!
Recommended Video

''ಗೆದಿಯ ಬೇಕು ಮಗಳ... ಗೆದಿಯಾ ಬೇಕು...'' - 'ನಾಗಮಂಡಲ' ಚಿತ್ರದ ಈ ಹಾಡು ಕೇಳಿದ ಕೂಡಲೆ ಕನ್ನಡ ಸಿನಿ ಪ್ರಿಯರಿಗೆ ಥಟ್ ಅಂತ ನೆನಪಾಗುವುದು ನಟಿ ವಿಜಯಲಕ್ಷ್ಮಿ.
ತಮ್ಮ ಸಹಜ ಸೌಂದರ್ಯದಿಂದಲೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನಟಿ ವಿಜಯಲಕ್ಷ್ಮಿ ಬದುಕಿನಲ್ಲಿ ಕಾರ್ಮೋಡ ಆವರಿಸಿದೆ. ಒಂದ್ಕಾಲದಲ್ಲಿ ಗಾಂಧಿನಗರದ ರಾಣಿಯಂತೆ ಮೆರೆದಿದ್ದ ನಟಿ ವಿಜಯಲಕ್ಷ್ಮಿ ಈಗ ಒಂದು ಚಾನ್ಸ್ ಗಾಗಿ ಹಾತೊರೆಯುತ್ತಿದ್ದಾರೆ. ತಮಿಳು ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ಅವಕಾಶಗಳನ್ನು ಅರಿಸಿ ಬೆಂಗಳೂರಿಗೆ ಬಂದಿದ್ದಾರೆ ನಟಿ ವಿಜಯಲಕ್ಷ್ಮಿ.
ಅಷ್ಟಕ್ಕೂ, ನಟಿ ವಿಜಯಲಕ್ಷ್ಮಿ ಬದುಕಿನಲ್ಲಿ ಸಂಕಷ್ಟ ಎದುರಾಗಲು ಕಾರಣ ಏನು.? ತಮಿಳು ಚಿತ್ರರಂಗಕ್ಕೆ ಆಕೆ ಗುಡ್ ಬೈ ಹೇಳಿರುವುದು ಯಾಕೆ.? ಎಂಬುದರ ಬಗ್ಗೆ ಇತ್ತೀಚೆಗಷ್ಟೆ ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ನಟಿ ವಿಜಯಲಕ್ಷ್ಮಿ ಬಾಯ್ಬಿಟ್ಟರು.
ಎಲ್ಲರಿಗೂ ಗೊತ್ತಿರುವ ಹಾಗೆ, ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಮದುವೆ ಆಗಿರುವುದು ನಟಿ ಜಯಪ್ರದ ಸಹೋದರ ರಾಜ ಬಾಬು ರವರನ್ನ. ಸುಖವಾದ ಸಂಸಾರ ನಡೆಸಬೇಕಿದ್ದ ಉಷಾ, ರಾಜ ಬಾಬು ರವರಿಂದ ಕಿರುಕುಳಕ್ಕೊಳಗಾದರು. ಬರೀ ಉಷಾರಿಗೆ ಮಾತ್ರ ಅಲ್ಲ. ಇಡೀ ವಿಜಯಲಕ್ಷ್ಮಿ ಕುಟುಂಬಕ್ಕೆ ಜಯಪ್ರದ ಸಹೋದರ ಕೊಟ್ಟಿರುವ ಕಾಟ ಅಷ್ಟಿಷ್ಟಲ್ಲ. ಅದನ್ನೆಲ್ಲ ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ನಟಿ ವಿಜಯಲಕ್ಷ್ಮಿ ಎಳೆ ಎಳೆಯಾಗಿ ಬಿಚ್ಚಿಟ್ಟರು. ಮುಂದೆ ಓದಿರಿ...
[ಕೃಪೆ: ಸುವರ್ಣ ನ್ಯೂಸ್ 24*7]

ನನ್ನ ಸಹಾಯಕ್ಕೆ ಯಾರೂ ಇಲ್ಲ
''ನಟಿಯರಿಗೆ ಯಾವುದೇ ಕಷ್ಟ ಇರಲ್ಲ, ಅವರದ್ದೆಲ್ಲ ಕೇಕ್ ವಾಕ್ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ, 'ನಾಗಮಂಡಲ' ಚಿತ್ರದಲ್ಲಿ ಕೆಲಸ ಮಾಡಿದ್ಮೇಲೆ, ನನ್ನ ಜೀವನದ ದಾರಿ ಇವತ್ತಿನವರೆಗೂ ತುಂಬಾ ಕಷ್ಟಕರವಾಗಿದೆ. ನನಗೀಗ ತಂದೆ ಇಲ್ಲ, ನನಗೆ ಸಹಾಯ ಮಾಡೋಕೆ ಅಂತ ಯಾರೂ ಇಲ್ಲ. ನನ್ನ ಅಕ್ಕನ ಆರೋಗ್ಯ ಸರಿಯಿಲ್ಲ. ಅವರಿಗೆ ನಾನು ಆಪರೇಶನ್ ಮಾಡಿಸಬೇಕು ಅಂದ್ರೆ ಯಾರೂ ನನಗೆ ಸಹಾಯ ಮಾಡುತ್ತಿಲ್ಲ. ನನ್ನ ತಾಯಿಗೂ ಆರೋಗ್ಯ ಸರಿಯಿಲ್ಲ'' ಎಂದು ಕಣ್ಣೀರಿಟ್ಟರು ನಟಿ ವಿಜಯಲಕ್ಷ್ಮಿ.
'ಸೂರ್ಯವಂಶ'ದ
ಸೇವಂತಿ
ವಿಜಯಲಕ್ಷ್ಮಿಯ
ಕಣ್ಣೀರ
ಕಥೆ

ಬಾವನಿಂದ ಕುಟುಂಬಕ್ಕೆ ಅನ್ಯಾಯ
''ನನಗೆ ತೊಂದರೆ ಕೊಟ್ಟಿರುವವರೆಲ್ಲ ದೊಡ್ಡವರು. ಅದರ ಬಗ್ಗೆ ನಾನು ಬಾಯಿ ಬಿಡಲು ಆಗಲ್ಲ. ನನ್ನ ಬಾವ ನಟಿ ಜಯಪ್ರದ ಅವರ ಅಣ್ಣ ರಾಜ ಬಾಬು. ಅವರಿಂದ ನನ್ನ ಕುಟುಂಬಕ್ಕೆ ಆಗಿರುವ ಅನ್ಯಾಯದ ಬಗ್ಗೆ ನಾನು ಹೇಗೆ ಹೇಳಲಿ.?'' ಎನ್ನುತ್ತಲೇ ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳ ಬಗ್ಗೆ ನಟಿ ವಿಜಯಲಕ್ಷ್ಮಿ ಬಾಯಿಬಿಟ್ಟರು.

ವಿಜಯಲಕ್ಷ್ಮಿ ಜೀವನದಲ್ಲಿ ಮೊದಲ ಪೆಟ್ಟು
''ನನ್ನ ಜೀವನದಲ್ಲಿ ನನಗೆ ಮೊದಲ ಏಟು ಬಿದ್ದಿದ್ದು ನನ್ನ ಅಕ್ಕ ಮದುವೆ ಆಗಿ ಮದ್ರಾಸ್ ಗೆ ಹೋದ್ಮೇಲೆ. ನಟಿ ಜಯಪ್ರದ ಅವರ ಅಣ್ಣನ್ನೊಂದಿಗೆ (ರಾಜ ಬಾಬು) ನನ್ನ ಅಕ್ಕನ ಮದುವೆ ಆಯ್ತು. ಅಕ್ಕ ಬೇರೆ ಹೋದ್ಮೇಲೆ, ನನಗೆ ಇಲ್ಲಿ ಒಬ್ಬೊಂಟಿ ಅಂತ ಅನಿಸಲು ಶುರು ಆಯ್ತು. ಅಷ್ಟೊತ್ತಿಗೆ ನನ್ನ ಕೆರಿಯರ್ ಕೂಡ ಸ್ವಲ್ಪ ಡಲ್ ಆಯ್ತು'' - ನಟಿ ವಿಜಯಲಕ್ಷ್ಮಿ

ಅಕ್ಕನ ಸಂಸಾರದಲ್ಲಿ ಬಿರುಕು
''ನನ್ನ ತಂದೆ ತೀರಿಕೊಂಡ್ಮೇಲೆ, ನನ್ನ ಕೆರಿಯರ್ ಪೂರ್ತಿ ಬಿದ್ದು ಹೋಯ್ತು. ನನ್ನ ತಂದೆಯ ಮೃತದೇಹ ಇಟ್ಟುಕೊಂಡು, ಅಂತಿಮ ಸಂಸ್ಕಾರ ಮಾಡಲು ನನ್ನ ಬಾವನನ್ನು ಕಾಯುತ್ತಿದ್ವಿ. ಆದ್ರೆ, ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಬರಲೇ ಇಲ್ಲ. ಕಡೆಗೆ ಅಂತ್ಯಸಂಸ್ಕಾರ ಮಾಡಿದ್ದು ನಾನೇ. ಆದಾದ್ಮೇಲೆ, ನನ್ನ ಅಕ್ಕನ ಸಂಸಾರದಲ್ಲಿ ಬಿರುಕು ಮೂಡಿತು. ಅದನ್ನ ಸರಿ ಮಾಡಲು ಯಾರೂ ಮುಂದೆ ಬರಲಿಲ್ಲ'' - ನಟಿ ವಿಜಯಲಕ್ಷ್ಮಿ

ನೆಮ್ಮದಿ ಇರಲಿಲ್ಲ
''ಮದ್ರಾಸ್ ನಲ್ಲಿ ನಾನು ಶೂಟಿಂಗ್ ಮಾಡುತ್ತಿದ್ದರೆ, ನಾನು ಇರುವ ಕಡೆ ನನ್ನ ಬಾವ ಬಂದು ಜಗಳ ಮಾಡುತ್ತಿದ್ದರು. ನಾನು ಎಷ್ಟು ತೊಂದರೆ ಅನುಭವಿಸಿದ್ದೇನೆ ಅಂದ್ರೆ, ಒಂದು ಕಡೆ ಶೂಟಿಂಗ್ ಮಾಡುತ್ತಿದ್ದರೆ, ಇನ್ನೊಂದು ಕಡೆ ಕಮಿಷನರ್ ಆಫೀಸ್ ಗೆ ಹೋಗಿ ಕೈಕಾಲಿಗೆ ಬೀಳುತ್ತಿದ್ದೆ. ನನಗೆ ತುಂಬಾ ಟಾರ್ಚರ್ ಆಗುತ್ತಿತ್ತು. ನೆಮ್ಮದಿ ಅನ್ನೋದೇ ಇರಲಿಲ್ಲ'' - ನಟಿ ವಿಜಯಲಕ್ಷ್ಮಿ

ಇಲ್ಲಿಯವರೆಗೂ ಮಗು ಮುಖ ನೋಡಿಲ್ಲ
''ಕೊನೆಗೆ ನಮ್ಮ ಅಕ್ಕನನ್ನ ಬಿಟ್ಟು ಮಗುವನ್ನು ಕರ್ಕೊಂಡು ಬಾವ ಹೋಗಿಬಿಟ್ಟರು. ಹದಿಮೂರು ವರ್ಷ ಆಯ್ತು. ಇಲ್ಲಿಯವರೆಗೂ ನಾನು, ನನ್ನ ಅಕ್ಕ ಆ ಮಗು ಮುಖ ನೋಡಿಲ್ಲ. ನೋಡಲು ಬಿಡುತ್ತಿಲ್ಲ. ನನ್ನ ಅಕ್ಕನಿಗೆ ಅವರು ವಿಚ್ಛೇದನ ಕೂಡ ಕೊಟ್ಟಿಲ್ಲ. ಯಾಕೆ ಇಷ್ಟೊಂದು ದ್ವೇಷ ಅನ್ನೋದೇ ನಮಗೆ ಗೊತ್ತಿಲ್ಲ. ನನ್ನ ಅಕ್ಕನ ಜೀವನ ಹಾಳಾಗಿದೆ'' - ನಟಿ ವಿಜಯಲಕ್ಷ್ಮಿ

ದೊಡ್ಡ ದೊಡ್ಡವರೇ ಕೈಬಿಟ್ಟರು
''ಅಕ್ಕನ ಆಪರೇಶನ್ ಗೆ ನನ್ನ ಬಳಿ ದುಡ್ಡು ಇರಲಿಲ್ಲ. ಆಪರೇಶನ್ ಥಿಯೇಟರ್ ವರೆಗೂ ಕರ್ಕೊಂಡು ಹೋಗಿ ವಾಪಸ್ ಕಳುಹಿಸಿದರು. ದಯವಿಟ್ಟು ಆಪರೇಶನ್ ಮಾಡಿ, ಸಾಲವನ್ನ ತೀರಿಸುವೆ ಅಂತ ಬೇಡಿಕೊಂಡರೂ ಪ್ರಯೋಜನ ಆಗಲಿಲ್ಲ. ಅಗ ದೊಡ್ಡ ದೊಡ್ಡವರೇ ಕೈಬಿಟ್ಟರು. ಕೈಕಾಲು ಹಿಡಿದರೂ ಉಪಯೋಗ ಆಗಲಿಲ್ಲ'' - ನಟಿ ವಿಜಯಲಕ್ಷ್ಮಿ

ನಾನು ಮದುವೆ ಯಾಕೆ ಆಗಿಲ್ಲ ಅಂದ್ರೆ....
''ನಾನು ಯಾವತ್ತೂ ತಪ್ಪು ದಾರಿ ಹಿಡಿದಿಲ್ಲ. ನಾನು ಇಲ್ಲಿಯವರೆಗೂ ಮದುವೆ ಕೂಡ ಮಾಡಿಕೊಂಡಿಲ್ಲ. ಯಾಕೆ ಅಂದ್ರೆ, ನನ್ನ ಕಣ್ಣ ಮುಂದೆಯೇ ಅಕ್ಕನ ಜೀವನ ಹಾಳಾಗಿರುವಾಗ, ನಾನು ಯಾರನ್ನೋ ಮದುವೆ ಆಗಿ ಹೇಗೆ ಖುಷಿಯಾಗಿರಲಿ.? ನನ್ನ ಅಕ್ಕನ ಜೀವನ ಸರಿಯಾಗುವವರೆಗೂ ನಾನು ನನ್ನ ಜೀವನಕ್ಕೆ ಯಾರನ್ನೂ ಕರೆದುಕೊಂಡು ಬರಲ್ಲ'' - ನಟಿ ವಿಜಯಲಕ್ಷ್ಮಿ