ತಮಿಳು ಚಿತ್ರರಂಗದಲ್ಲಿ ವಿಜಯಲಕ್ಷ್ಮಿ ಎದುರಿಸಿದ ಅವಮಾನ ಎಂಥದ್ದು.?
Recommended Video

''ಕನ್ನಡ ಚಿತ್ರರಂಗದ ದೊಡ್ಡ ನಟನಿಗೆ ನಟಿ ವಿಜಯಲಕ್ಷ್ಮಿ ಚಪ್ಪಲಿಯಲ್ಲಿ ಹೊಡೆದಿದ್ದಾರೆ'' ಎಂಬ ವಿವಾದ ನ್ಯೂಸ್ ಪೇಪರ್ ಗಳಲ್ಲಿ ಹೆಡ್ ಲೈನ್ಸ್ ಆದ್ಮೇಲೆ ನಟಿ ವಿಜಯಲಕ್ಷ್ಮಿ ಅಕ್ಷರಶಃ ಭಯಭೀತರಾದರು. ''ನಾನು ಯಾವುದೇ ತಪ್ಪು ಮಾಡಿಲ್ಲ'' ಎಂದು ಕೂಗಿ ಹೇಳಲು ವಿಜಯಲಕ್ಷ್ಮಿಗೆ ಯಾರೂ ಅವಕಾಶ ಕೊಡಲಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಅಫರ್ ಗಳಿಲ್ಲದೆ ಕಂಗಾಲಾದರು.
ಅವಕಾಶಗಳನ್ನು ಅರಸಿ ಬೇರೆ ದಾರಿಯಿಲ್ಲದೆ ತಮಿಳು ಚಿತ್ರರಂಗದ ಕಡೆ ನಟಿ ವಿಜಯಲಕ್ಷ್ಮಿ ಮುಖ ಮಾಡಿದರು. ಕಾಲಿವುಡ್ ನಲ್ಲಿ ಬೆಂಗಳೂರು ಹುಡುಗಿ ಎಂದೇ ಗುರುತಿಸಿಕೊಂಡ ನಟಿ ವಿಜಯಲಕ್ಷ್ಮಿಗೆ ಅಷ್ಟಾಗಿ ಯಶಸ್ಸು ಸಿಗಲಿಲ್ಲ.
ಅಕ್ಕ ಸಂಸಾರದ ತಾಪತ್ರಯದಿಂದ ಅಲ್ಲಿನ ಶೂಟಿಂಗ್ ಲೊಕೇಶನ್ ನಲ್ಲೂ ಅವಮಾನ ಎದುರಿಸಿದ್ದಾರೆ ನಟಿ ವಿಜಯಲಕ್ಷ್ಮಿ. ಆಫರ್ ಗಳ ಕೊರತೆಯಿಂದಾಗಿ ತಮಿಳು ಕಿರುತೆರೆಗೆ ಪದಾರ್ಪಣೆ ಮಾಡಿದರೂ, ಆಕೆಗೆ ನೆಮ್ಮದಿ ಸಿಗಲಿಲ್ಲ.
ಒಂದೊಂದೇ ವಿವಾದಗಳು ವಿಜಯಲಕ್ಷ್ಮಿ ಸುತ್ತ ಸುತ್ತಿಕೊಳ್ಳುತ್ತಿರುವಾಗಲೇ, ಅಕೆ ತೀರಿಕೊಂಡಿದ್ದಾರೆ ಎಂಬ ಗುಸುಗುಸು ಕಾಲಿವುಡ್ ನಲ್ಲಿಯೇ ಹಬ್ಬಿತು. ಇದನ್ನೆಲ್ಲ ಕಂಡು ಬೇಸೆತ್ತಿರುವ ನಟಿ ವಿಜಯಲಕ್ಷ್ಮಿ ತಮಿಳು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ''ಇನ್ಮುಂದೆ ತಮಿಳು ಸಿನಿಮಾ ಮುಟ್ಟಲ್ಲ. ಅಲ್ಲಿ ಹೆಜ್ಜೆ ಇಡಲ್ಲ'' ಎಂದಿರುವ ನಟಿ ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಮುಂದೆ ಓದಿರಿ... [ಕೃಪೆ: ಸುವರ್ಣ ನ್ಯೂಸ್ 24*7]

ಬೆಂಗಳೂರಿನ ಹುಡುಗಿ ನಟಿ ವಿಜಯಲಕ್ಷ್ಮಿ
'ನಾಗಮಂಡಲ' ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನ ಯಶವಂತಪುರದಲ್ಲಿ. ಕ್ಲೂನಿ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಮಾಡಿದ ನಟಿ ವಿಜಯಲಕ್ಷ್ಮಿ ಹತ್ತನೇ ಕ್ಲಾಸ್ ಓದುತ್ತಿರುವಾಗಲೇ, 'ನಾಗಮಂಡಲ' ಸಿನಿಮಾದಲ್ಲಿ ಕಾಣಿಸಿಕೊಂಡರು.

ತಮಿಳು ಚಿತ್ರರಂಗದ ಬಗ್ಗೆ ಬೇಸರ
''ಎರಡು ವಾರಗಳ ಹಿಂದೆ ಮದ್ರಾಸ್ ನಲ್ಲಿ ಇದ್ದಾಗ, ಕೆಲವು ವಿಷಯಗಳಿಂದ ನನ್ನ ಮನಸ್ಸಿಗೆ ತುಂಬಾ ಬೇಸರ ಆಯ್ತು. ''ಕನ್ನಡದವರನ್ನು ನೋಡದೆ ಅಗಲಿ ಹೋಗಿಬಿಟ್ಟರು'' ಎಂಬ ಸುದ್ದಿ ಬರುವ ಮುನ್ನ ನಾನೇ ಬಂದು ನಿಮ್ಮ ಮುಂದೆ ''ನನಗೆ ಏನೂ ಆಗಿಲ್ಲ, ನಾನು ಚೆನ್ನಾಗಿ ಇದ್ದೇನೆ'' ಅಂತ ಹೇಳಬೇಕು ಎನ್ನುವ ಆಸೆ ಇತ್ತು'' ಎಂದು ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ತಮ್ಮ ನೋವು ತೋಡಿಕೊಂಡರು ನಟಿ ವಿಜಯಲಕ್ಷ್ಮಿ.
ನಟಿ ವಿಜಯಲಕ್ಷ್ಮಿ ಇಲ್ಲಿಯವರೆಗೂ ಮದುವೆ ಯಾಕೆ ಆಗಿಲ್ಲ.?

ಮನಸ್ಸಿಗೆ ತುಂಬಾ ದುಃಖ ಆಗುತ್ತೆ
''ಮದ್ರಾಸ್ ನಲ್ಲಿ ನನ್ನ ಬಗ್ಗೆ ತುಂಬಾ ಕಠಿಣವಾಗಿರುವ ವಿಷಯಗಳನ್ನು ಹೇಳಿದ್ದಾರೆ. ಶೂಟಿಂಗ್ ಮಾಡುತ್ತಿರುವಾಗಲೇ ನಾನು ತೀರಿಕೊಂಡೆ ಅಂತ ಮಾತನಾಡಿರುವವರೂ ಇದ್ದಾರೆ. ಎಷ್ಟೋ ಜನ ನನಗೆ ಫೋನ್ ಮಾಡಿ ನೀವಿನ್ನೂ ಬದುಕಿದ್ದೀರಾ ಅಂತ ಕೇಳುವಾಗ ಮನಸ್ಸಿಗೆ ತುಂಬಾ ದುಃಖ ಆಗುತ್ತೆ'' - ನಟಿ ವಿಜಯಲಕ್ಷ್ಮಿ

ಎಲ್ಲದಕ್ಕೂ ಅಡ್ಡಿ ಆಗುತ್ತಲೇ ಇತ್ತು
''ಮದ್ರಾಸ್ ನಲ್ಲಿ ನನಗೆ ಬೆಂಗಳೂರು ಹುಡುಗಿ ಅಂತಲೇ ಹೇಳ್ತಾರೆ. ಹೀಗಾಗಿ, ನನಗೆ ಅಲ್ಲಿ ಬೇರೆ ಐಡೆಂಟಿಟಿ ಇಲ್ಲ. ನಾನು ಏನೇ ಕೆಲಸ ಮಾಡಲು ಬಂದರೂ ಏನೋ ಒಂದು ವಿವಾದ, ಒಂದು ಅಡ್ಡಿ ಆಗುತ್ತಲೇ ಇತ್ತು'' - ನಟಿ ವಿಜಯಲಕ್ಷ್ಮಿ

ಅಕ್ಕ ಜೊತೆಯಲ್ಲಿ ಬಂದರೆ ತಪ್ಪೇನು.?
''ತುಂಬಾ ವರ್ಷಗಳ ಗ್ಯಾಪ್ ಆದ್ಮೇಲೆ, 'ನಂದಿನಿ' ಸೀರಿಯಲ್ ಮಾಡಿದೆ. ಆಮೇಲೆ, ಸೀರಿಯಲ್ ತೆಗೆದುಕೊಂಡು ಹೋದ ರೀತಿ ಸರಿಯಾಗಲಿಲ್ಲ. 'ನಂದಿನಿ' ಸೀರಿಯಲ್ ನಲ್ಲೂ ನನಗೆ ತುಂಬಾ ಕಾಟ ಕೊಟ್ಟರು. ಅಕ್ಕ ನನ್ನ ಜೊತೆಯಲ್ಲಿ ಬರ್ತಿದ್ರು ಅಂತ ನನ್ನನ್ನ ತೆಗೆದು ಹಾಕಿದರು. ಅದು ಒಂದು ಕಾರಣವೇ.?'' ಎಂದು ಪ್ರಶ್ನಿಸುತ್ತಾರೆ ನಟಿ ವಿಜಯಲಕ್ಷ್ಮಿ

ಇನ್ಮುಂದೆ ತಮಿಳು ಸಿನಿಮಾ ಮುಟ್ಟಲ್ಲ
''ಅಕ್ಕನ ಆಪರೇಶನ್ ಗೆ ನನ್ನ ಬಳಿ ದುಡ್ಡು ಇರಲಿಲ್ಲ. ಆಪರೇಶನ್ ಥಿಯೇಟರ್ ವರೆಗೂ ಕರ್ಕೊಂಡು ಹೋಗಿ ವಾಪಸ್ ಕಳುಹಿಸಿದರು. ಅಗ ದೊಡ್ಡ ದೊಡ್ಡವರೇ ನನ್ನ ಕೈಬಿಟ್ಟರು. ಕೈಕಾಲು ಹಿಡಿದರೂ ಪ್ರಯೋಜನ ಆಗಲಿಲ್ಲ. ಕೆಲವೊಮ್ಮೆ ಊಟಕ್ಕೂ ದುಡ್ಡು ಇಲ್ಲದೇ ಇದ್ದೇನೆ. ತಪ್ಪು ದಾರಿ ಹಿಡಿಯಲಿಲ್ಲ ಎಂಬ ಕೋಪದಿಂದ ಅಲ್ಲಿ ಕೆಲವರು ಹಿಂಸೆ ಕೊಡಲು ಶುರು ಮಾಡಿದರು. ಹೀಗಾಗಿ ಇನ್ಮುಂದೆ ತಮಿಳು ಸಿನಿಮಾ ಮುಟ್ಟಲ್ಲ. ಅಲ್ಲಿ ಹೆಜ್ಜೆ ಇಡಲ್ಲ'' ಎಂದಿದ್ದಾರೆ ನಟಿ ವಿಜಯಲಕ್ಷ್ಮಿ


Click it and Unblock the Notifications











