ಮಾಸ್ಕ್ ಧರಿಸಿ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿದ ಕನ್ನಡದ ಖ್ಯಾತ ನಟಿ

ಕಳೆದೆರಡು ದಿನಗಳಿಂದ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಶುರುವಾಗಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಲಕ್ಷಾಂತರ ಜನ ಭೇಟಿ ನೀಡುತ್ತಿದ್ದಾರೆ. ಈ ಬಾರಿ 5 ದಿನಗಳ ಕಾಲ ಪರಿಷೆ ನಡೆಯಲಿದ್ದು ಇಡೀ ಬಸವನಗುಡಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕನ್ನಡ ಸಿನಿಮಾ ತಾರೆಯರುಬ ಪರಿಷೆಗೆ ಹೋಗುತ್ತಿದ್ದಾರೆ.

ಹೀಗೆ ಸಾವಿರಾರು ಜನ ಸೇರುವ ಜಾಗದಲ್ಲಿ ಸಿನಿಮಾ ತಾರೆಯರು ಬಂದರೆ ಜನ ಮುಗಿಬೀಳುತ್ತಾರೆ. ಸೆಲ್ಫಿಗಾಗಿ ದುಂಬಾಲು ಬೀಳುತ್ತಾರೆ. ಇದು ತಾರೆಯರಿಗೆ ಕೊಂಚ ಇರಿಸು ಮುರಿಸು ಉಂಟು ಮಾಡುತ್ತದೆ. ಅದಕ್ಕೆ ಕನ್ನಡದ ಖ್ಯಾತ ನಟಿ ಒಳ್ಳೆ ಐಡಿಯಾ ಮಾಡಿದ್ದಾರೆ. ಹೀಗೆ ಸಿಂಹದ ಮಾಸ್ಕ್ ಧರಿಸಿ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ. ಜನ ಆಕೆಯನ್ನು ಗುರುತು ಹಿಡಿದಿಲ್ಲ.

Kannada Actress Visits Kadalekai Parishe in Lion Mask to Avoid Crowd Fans Call It a good Move

ಪರಿಷೆ ಅಂದಮೇಲೆ ಹೀಗೆ ಸಾಕಷ್ಟು ಜನ ಮಾಸ್ಕ್ ಧರಿಸಿ ಓಡಾಡುತ್ತಾರೆ. ಹಾಗಾಗಿ ಯಾರಿಗೂ ಅನುಮಾನ ಭರದಂತೆ ನಟಿ ಈ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬರೋಬ್ಬರಿ 18 ವರ್ಷಗಳ ಬಳಿಕ ಪರಿಷೆಗೆ ಭೇಟಿ ನೀಡಿದ್ದಾಗಿ ಬರೆದುಕೊಂಡಿದ್ದಾರೆ. ಆಕೆಯ ಪೋಸ್ಟ್ ವೈರಲ್ ಆಗ್ತಿದೆ.

ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಳ್ಳೆ ಕ್ರಿಮಿನಲ್ ಐಡಿಯಾ ಮೇಡಂ ಎನ್ನುತ್ತಿದ್ದಾರೆ. ಕೊಂಚ ಮೊದ್ಲೆ ಪೋಸ್ಟ್ ಮಾಡಿದ್ರೆ, ನಾನು ಅಲ್ಲೇ ಇದ್ದೇ ಭೇಟಿ ಮಾಡಬಹುದಿತ್ತು ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಹೀಗೆ ಮಾಸ್ಕ್ ಧರಿಸಿ ಕಡಲೆಕಾಯಿ ಪರಿಷೆಗೆ ಭೇಟಿ ನೀಡಿರುವುದು ಕನ್ನಡ ನಟಿ ರಚಿತಾ ರಾಮ್.

"ನಮಸ್ಕಾರ.. ಇವತ್ತು ನನ್ನ 'ಕ್ರಿಮಿನಲ್' ಸಿನಿಮಾ ಈವೆಂಟ್ ಮುಗಿಸಿ ಕಡೆಲೆಕಾಯಿ ಪರಿಷೆಗೆ ಹೋಗಿದ್ದು ಹೀಗೆ. ಎಷ್ಟು ಮಜಾ ಮಾಡಿದ್ದೀನಿ ಗೊತ್ತಾ? ನಮ್ಮ ಹುಡುಗರಿಗೆ ಥ್ಯಾಂಕ್ಸ್. ಇಂತಹ ತಂಡ ಇರುವುದು ನನ್ನ ಆಶೀರ್ವಾದ. ಥ್ಯಾಂಕ್ಸ್ ವರುಣ್ ಇಂತಹ ಮಾಸ್ಕ್ ಕೊಡಿಸಿದ್ದಕ್ಕೆ" ಎಂದು ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ರಚಿತಾ ರಾಮ್ ನಟಿಸಿದ ಕೆಲ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ತಮಿಳಿನ 'ಕೂಲಿ' ಚಿತ್ರದ ಕಲ್ಯಾಣಿ ಪಾತ್ರ ಆಕೆಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇದೀಗ ಮೂರ್ನಾಲ್ಕು ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಮಹೇಶ್ ನಿರ್ದೇಶನದ 'ಅಯೋಗ್ಯ- 2' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ದುನಿಯಾ ವಿಜಯ್ ಜೊತೆ 'ಲ್ಯಾಂಡ್‌ಲಾರ್ಡ್' ಸಿನಿಮಾ ಮುಗಿಸಿದ್ದಾರೆ.

ಇದೀಗ ಧ್ರುವ ಸರ್ಜಾ ಜೊತೆ 'ಕ್ರಿಮಿನಲ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಆಕ್ಷನ್ ಪ್ರಿನ್ಸ್ 7ನೇ ಸಿನಿಮಾ. 'ಕೆರೆಬೇಟೆ' ಸಿನಿಮಾ ಖ್ಯಾತಿಯ ರಾಜ್‌ಗುರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದ್ಧೂರಿಯಾಗಿ ಸಿನಿಮಾ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಈ ಹಳ್ಳಿ ಸೊಗಡಿನ ಸಿನಿಮಾ ಮೂಡಿ ಬರಲಿದೆ. ಪೈಲ್ವಾನ್ ಶಿವ ಆಗಿ ಧ್ರುವ, ಆತನ ಜೋಡಿ ಪಾರ್ವತಿಯಾಗಿ ರಚಿತಾ ಬಣ್ಣ ಹಚ್ಚಿದ್ದಾರೆ.

'ಶಬರಿ ಸರ್ಚಿಂಗ್ ಫಾರ್ ರಾವಣ', 'ಲವ್ ಮಿ ಆರ್ ಹೇಟ್ ಮಿ', 'ಕಲ್ಟ್' ಹೀಗೆ ಒಂದಷ್ಟು ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿವೆ. ಝೈದ್ ಖಾನ್ ಜೊತೆ ನಟಿಸಿರುವ 'ಕಲ್ಟ್' ಸಿನಿಮಾ ಆದಷ್ಟು ಬೇಗ ತೆರೆಗೆ ಬರಲಿದೆ. ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾ 'ಕ್ರಿಮಿನಲ್'. ಗೋಲ್ಡ್ ಮೈನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುತ್ತಿದೆ.

'ಕ್ರಿಮಿನಲ್' ಚಿತ್ರದಲ್ಲಿ ರಚಿತಾ ರಾಮ್ ಕಾಲೇಜು ಹುಡುಗಿ ಪಾತ್ರ ಮಾಡ್ತಿದ್ದು ಅದಕ್ಕಾಗಿ ತೂಕ ಇಳಿಸಿ ತೆಳ್ಳಗಾಗುವ ಮನಸ್ಸು ಮಾಡಿದ್ದಾರೆ. 'ಕೂಲಿ' ಬಳಿಕ ಮತ್ತಷ್ಟು ಪಾತ್ರಗಳು ಹುಡುಕಿ ಬರ್ತಿದೆ ಎಂದಿದ್ದಾರೆ. ಈ ಹಿಂದೆ 'ಭರ್ಜರಿ' ಚಿತ್ರದಲ್ಲಿ ಧ್ರುವ, ರಚಿತಾ ಒಟ್ಟಿಗೆ ನಟಿಸಿದ್ದರು.

More from Filmibeat

Read more about: rachita ram sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X