twitter
    For Quick Alerts
    ALLOW NOTIFICATIONS  
    For Daily Alerts

    ಚಂದನವನದ ಚೆಲುವೆಯರ ಈ ವರ್ಷದ ದೀಪಾವಳಿ ಎಷ್ಟೊಂದು ಸ್ಪೆಷಲ್ ಗೊತ್ತಾ.?

    By Naveen
    |

    ಹಬ್ಬ ಅಂದರೆ ಒಂದು ಸಂಭ್ರಮ. ಅದರಲ್ಲೂ ದೀಪಾವಳಿ ಅಂದರೆ ಕೇಳಬೇಕಾ.? ಎಲ್ಲರ ಮನೆಯಲ್ಲೂ ಸಂತೋಷ ಸಡಗರ. ಇನ್ನು ಸಿನಿಮಾ ನಟಿಯರಿಗೂ ಕೂಡ ದೀಪಾವಳಿ ಹಬ್ಬ ಎನ್ನುವುದು ಸಖತ್ ವಿಶೇಷ.

    ಯಾವಾಗಲೂ ಸಿನಿಮಾದ ಕೆಲಸದಲ್ಲಿ ಬಿಜಿ ಇರುವ ನಟಿಯರು ಹಬ್ಬವನ್ನು ಮರೆಯದೆ ಮನೆಯವರ ಜೊತೆ ಆಚರಿಸುತ್ತಾರಂತೆ. ಇನ್ನೂ ಕನ್ನಡದ ನಟಿಯರಾದ ಶ್ರದ್ಧಾ ಶ್ರೀನಾಥ್, ಮಯೂರಿ, ಆಶಿಕಾ ರಂಗನಾಥ್, ಅದಿತಿ ಪ್ರಭುದೇವ ಹಬ್ಬದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಂಭ್ರಮವನ್ನು ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಆಡಂಬರ ಇಲ್ಲ ಭಕ್ತಿ ಇದೆ

    ಆಡಂಬರ ಇಲ್ಲ ಭಕ್ತಿ ಇದೆ

    ''ನಾನು ಮೂಲತಃ ಹುಬ್ಬಳಿಯವಳು. ನಮ್ಮ ಮನೆಯಲ್ಲಿ ಪ್ರತಿ ಹಬ್ಬವನ್ನೂ ಅದ್ದೂರಿಯಾಗಿ ಮಾಡುತ್ತೇವೆ. ಅದ್ದೂರಿ ಅಂದರೆ ಹಣದಿಂದ ಅಲ್ಲ. ದೇವರ ಪೂಜೆಯಿಂದ.. ಶ್ರದ್ಧೆ ಭಕ್ತಿಯಿಂದ ದೇವರಿಗೆ ಪೂಜೆ ಮಾಡಿ ನೈವೇದ್ಯ ಮಾಡುವ ತನಕ ನಾನು ಊಟ ಮಾಡುವುದಿಲ್ಲ. ಮುಂಚೆ ನಮ್ಮ ತಂದೆ ಪೂಜೆ ಮಾಡುತ್ತಿದ್ದರು. ಅವರು ತೀರಿಕೊಂಡ ನಂತರ ಈಗ ನಾನೇ ಪೂಜೆ ಮಾಡುತ್ತೇನೆ. ನಮ್ಮ ಹಬ್ಬದ ಆಚರಣೆಯಲ್ಲಿ ಆಡಂಬರ ಇಲ್ಲ ಭಕ್ತಿ ಇದೆ.'' - ಮಯೂರಿ, ನಟಿ

    ಸಿಂಪಲ್ ಹಬ್ಬ

    ಸಿಂಪಲ್ ಹಬ್ಬ

    ''ನಮ್ಮ ಮನೆಯಲ್ಲಿ ದೀಪಾವಳಿ ಅದ್ಧೂರಿ ಅಂತ ಏನು ಇಲ್ಲ. ಹೆಣ್ಣು ಮಕ್ಕಳು ಇರುವುದರಿಂದ ವರಮಹಾಲಕ್ಷ್ಮಿ ಹಬ್ಬವನ್ನು ಜೋರಾಗಿ ಮಾಡುತ್ತೇವೆ. ಬಾಕಿ ಹಬ್ಬವನ್ನು ಸಾಧಾರಣವಾಗಿ ಆಚರಿಸುತ್ತೇವೆ. ಚಿಕ್ಕ ವಯಸ್ಸಿನಲ್ಲಿ ಹಬ್ಬದ ಊಟ ಆದರೆ ತುಂಬ ಖುಷಿ. ಈಗ ಬೆಳಗ್ಗೆ ಪೂಜೆ ಮಾಡುತ್ತೇವೆ. ಸಂಜೆ ಅರಿಶಿಣ ಕುಂಕುಮಕ್ಕೆ ನಾನು ಅಕ್ಕ ಹೋಗುತ್ತೇವೆ. ಮನೆಯಲ್ಲಿ ದೀಪದಿಂದ ಅಲಂಕಾರ ಮಾಡಿ ಸಿಂಪಲ್ ಆಗಿ ಹಬ್ಬ ಮಾಡುತ್ತೇವೆ'' - ಆಶಿಕಾ, ನಟಿ

    ನಮ್ಮ ದೀಪಾವಳಿ ಹೀಗಿರುತ್ತದೆ

    ನಮ್ಮ ದೀಪಾವಳಿ ಹೀಗಿರುತ್ತದೆ

    ''ಹಬ್ಬದ ದಿನ ಮುಂಚೆಯಿಂದ ಅಮ್ಮ ಬೆಳಗ್ಗೆ ಪೂಜೆ ಮಾಡುತ್ತಾರೆ. ಸಂಜೆ ದೀಪ ಹಚ್ಚಿ, ರಂಗೋಲಿ ಹಾಕಿ, ಎಲ್ಲ ಕಡೆ ಹೂವಿನ ಅಲಂಕಾರ ಮಾಡುತ್ತೇವೆ. ನಮ್ಮ ಮನೆಯಲ್ಲಿ ಪಟಾಕಿ ಹೊಡೆಯುವುದಿಲ್ಲ. ಸುಮಾರು ವರ್ಷದಿಂದ ನಿಲ್ಲಿಸಿದ್ದೇವೆ. ಆಮೇಲೆ ಎಲ್ಲ ಸಂಬಂಧಿಗಳ ಮನೆಗೆ ಹೋಗಿ ಖುಷಿಯಾಗಿ ಮಾತನಾಡಿಕೊಂಡು ಬರುತ್ತೇವೆ. ಇಷ್ಟೆ ಈ ರೀತಿ ಇರುತ್ತದೆ ನಮ್ಮ ದೀಪಾವಳಿ'' - ಶ್ರದ್ಧಾ ಶ್ರೀನಾಥ್, ನಟಿ

    ದೀಪಗಳ ಹಬ್ಬ

    ದೀಪಗಳ ಹಬ್ಬ

    ''ನನಗೆ ದೀಪಾವಳಿ ಅಂದರೆ ಇಷ್ಟ. ಯಾಕಂದ್ರೆ ನನಗೆ ದೀಪ ಅಂದರೆ ತುಂಬ ಇಷ್ಟ. ಪವರ್ ಇದ್ದರೂ ಕೆಲವು ಸಾರಿ ನನ್ನ ರೂಮಿನಲ್ಲಿ ಕ್ಯಾಂಡಲ್ ಹಚ್ಚಿಕೊಳ್ಳುತ್ತೇನೆ. ಸೋ, ದೀಪಾವಳಿ ಅಂದರೆ ದೀಪಗಳ ಹಬ್ಬ. ಆ ದಿನ ರಾತ್ರಿ ಟೆರೆಸ್ ಮೇಲೆ ಹೋಗಿ ನೋಡಿದಾಗ ಎಲ್ಲ ಕಡೆ ದೀಪ ಹಚ್ಚಿರುತ್ತಾರೆ. ನಮ್ಮ ದಾವಣಗೆರೆ ಕಡೆ ತುಂಬ ಚೆನ್ನಾಗಿ ಇರುತ್ತದೆ. ಸಿಹಿ ಅಂದರೆ ನನಗೆ ತುಂಬ ಇಷ್ಟ. ಹಬ್ಬದ ದಿನ ಎಷ್ಟು ಬೇಕಾದರೂ ಸಿಹಿ ತಿನ್ನಬಹುದು'' - ಅಧಿತಿ ಪ್ರಭುದೇವ, ನಟಿ

    ದೀಪಾವಳಿ ದಿನ ಅತ್ತಿದ್ದೆ

    ದೀಪಾವಳಿ ದಿನ ಅತ್ತಿದ್ದೆ

    ''ಈ ಸಲ ನನಗೆ ನಾಲ್ಕು ತಿಂಗಳ ನಂತರ ಮೂರು ದಿನ ಬ್ರೇಕ್ ಸಿಕ್ಕಿದೆ. ಕಳೆದ ಬಾರಿ ದೀಪಾವಳಿಯಲ್ಲಿ ನಮ್ಮ ಅಪ್ಪ ಅಮ್ಮ ದಾವಣಗೆರೆಯಲ್ಲಿ ಇದ್ದರು. ನಾನು ಬೆಂಗಳೂರಿನಲ್ಲಿ ಪಿಜಿಯಲ್ಲಿ ಇದ್ದೆ. ಒಂದು ಹಬ್ಬನೂ ಸೆಲೆಬ್ರೇಟ್ ಮಾಡುವುದಕ್ಕೆ ಆಗುತ್ತಿಲ್ಲ ಅಂತ ಅತ್ತಿದ್ದೆ. ಆದರೆ ಈಗ ಇಲ್ಲೇ ಮನೆ ಆಗಿದೆ. ನನ್ನ ಜೊತೆ ಅಪ್ಪ, ಅಮ್ಮ, ತಮ್ಮ, ನನ್ನ ನಾಯಿ ಮರಿ ಎಲ್ಲ ಇದೆ. ಹಾಗಾಗಿ ಈ ಬಾರಿಯ ದೀಪಾವಳಿ ತುಂಬ ಸ್ಪೆಷಲ್'' - ಅಧಿತಿ ಪ್ರಭುದೇವ, ನಟಿ

    ದೀಪಾವಳಿ ಅಂದರೆ ಹೊಸ ಬಟ್ಟೆ

    ದೀಪಾವಳಿ ಅಂದರೆ ಹೊಸ ಬಟ್ಟೆ

    ''ನನಗೆ ದೀಪಾವಳಿ ಫೇವರೆಟ್ ಹಬ್ಬ. ಚಿಕ್ಕ ವಯಸ್ಸಿನಲ್ಲಿ ತಾತನ ಮನೆಗೆ ಹೋಗಿ ಅಲ್ಲಿ ಎಲ್ಲರ ಜೊತೆ ಆಚರಣೆ ಮಾಡುತ್ತಿದೆವು. ಆಗ ದೀಪಾವಳಿ ಅಂದರೆ ಹೊಸ ಬಟ್ಟೆ, ಜೊತೆಗೆ ಎಲ್ಲರ ಮನೆಯಲ್ಲಿ ದೀಪ ಇರುತ್ತಿತ್ತು. ಅದೆಲ್ಲವು ಈಗ ಸಿಹಿ ನೆನಪು.'' - ರಾಧಿಕಾ ಚೇತನ್, ನಟಿ

    English summary
    Kannada Actresses Shraddha Srinath, Mayuri, Ashika Ranganath and Adithi prabhudeva spoke about Deepavali Celebration.
    Wednesday, October 18, 2017, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X