»   » ಬರುತ್ತಿದ್ದಾಳೆ ವಯಸ್ಕರನ್ನು ಕಾಡಿಸಲು 'ಕಾಮಿನಿ'

ಬರುತ್ತಿದ್ದಾಳೆ ವಯಸ್ಕರನ್ನು ಕಾಡಿಸಲು 'ಕಾಮಿನಿ'

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಮತ್ತೆ ಶುರುವಾಗಿದೆಯೇ ಶಕೀಲಾ, ಸಿಲ್ಕ್ ಸ್ಮಿತಾ, ಜ್ಯೋತಿ ಲಕ್ಷ್ಮಿ, ಜಯಮಾಲಿನಿ ಜಮಾನ. ಈಗ ಬರುತ್ತಿರುವ ಚಿತ್ರಗಳನ್ನು ನೋಡಿದರೆ ಈ ಅನುಮಾನ ಬಾರದೆ ಇರದು. ಇತ್ತೀಚೆಗೆ ಬಂದ 'ಸಿಲ್ಕ್', ಈಗ ಬಿಡುಗಡೆಗೆ ಸಿದ್ಧವಾಗಿರುವ ಮೈಸೂರು ಮಲ್ಲಿಗೆ ಹಾಗೂ ಕಾಮಿನಿ ಚಿತ್ರಗಳೇ ಇದಕ್ಕೆ ನಿದರ್ಶನ.

ಅದರಲ್ಲೂ 'ಕಾಮಿನಿ' ಚಿತ್ರ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರದ ಪೋಸ್ಟರ್ ಗಳನ್ನು ನೋಡಿದರೆ ಪಡ್ಡೆಗಳೇ ಬೆಚ್ಚಿಬೀಳುತ್ತಿದ್ದಾರೆ. ಇನ್ನು ಫ್ಯಾಮಿಲಿ, ಭಕ್ತಿ ಚಿತ್ರಗಳನ್ನು ನಿರೀಕ್ಷಿಸುತ್ತಿರುವವರ ಪಾಡೇನು? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಕೇವಲ ಪೋಸ್ಟರ್ ಗಳನ್ನು ನೋಡಿಯೇ ಚಿತ್ರದ ಹಣೆಬರಹ ನಿರ್ಧರಿಸಲು ಸಾಧ್ಯವಿಲ್ಲವಲ್ಲಾ? ಚಿತ್ರದ ಪೋಸ್ಟರ್ ಗಳು ಈ ರೀತಿ ಇದ್ದರೂ ಕಥೆ, ಚಿತ್ರಕಥೆ, ನಿರೂಪಣೆಯಲ್ಲಿ ಹೊಸತನ ಇರಬಹುದಲ್ಲವೇ? ಈ ಚಿತ್ರ ಇಂತಹದ್ದೇ ಕ್ಯಾಟಗರಿಗೆ ಸೇರುತ್ತದೆ ಎಂದು ಮುದ್ರೆ ಒತ್ತಲು ನಾವ್ಯಾರು. ಅದಕ್ಕೆಂದೇ ಸೆನ್ಸಾರ್ ಮಂಡಳಿ ಇದೆ.

ಇದು ಯಾವ ಕ್ಯಾಟಗರಿ ಚಿತ್ರ ಗುರು

ಚಿತ್ರ ಬಿಡುಗಡೆಯಾದ ನಂತರ ಇದು ಯಾವ ರೀತಿಯ ಚಿತ್ರ ಎಂಬುದು ಗೊತ್ತೇ ಗೊತ್ತಾಗುತ್ತದೆ. ಈಗಲೇ ಚಿತ್ರವನ್ನು ಇದು ಅದೇ ತರಹ ಚಿತ್ರ ಎಂದು ಹೇಳುವುದು ಸರಿಯಲ್ಲ. ಸದ್ಯಕ್ಕೆ 'ಕಾಮಿನಿ' ಚಿತ್ರದ ವಿವರಗಳನ್ನು ಸ್ಲೈಡ್ ಗಳಲ್ಲಿ ನೋಡಿ. ಈ ಚಿತ್ರದ ಅಡಿಬರಹ 'Just Inn' ಎಂಬುದು.

ಇದೊಂದು ಹಾರರ್ ಸಸ್ಪೆನ್ಸ್ ಚಿತ್ರ

ವಿ.ಎಸ್.ಬೋಜೆ ಗೌಡರ ಆಶೀರ್ವಾದಗಳೊಂದಿಗೆ ರಮಾಣಾ ಅವರು ನಿರ್ದೇಶನ ಮಾಡಿರುವ 'ಕಾಮಿನಿ' ಎಂಬ ಹಾರರ್ ಕಮ್ ಸಸ್ಪೆನ್ಸ್ ಚಿತ್ರವನ್ನು ಜಯಪ್ರಕಾಶ್ ಹಾಗೂ ಎಂ ಆರ್ ಎನ್ ಗುಪ್ತಾ ಅವರ ಜಂಟಿಯಾಗಿ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಕಾಮಿನಿ ಕಾಟವಂತೆ

ಶೋಧನೆಗಾಗಿ ಬರುವ ತಂಡ 'ಕಾಮಿನಿ' ಕಾಟದಿಂದ ಅನುಭವಿಸುವ ಕುತೂಹಲಕಾರಿ ಕ್ಷಣಗಳು ಈ ಚಿತ್ರದ ಮುಖ್ಯಾಂಶಗಳು.

ಕಾಮಿನಿ ಕೇವಲ ವಯಸ್ಕರಿಗೆ ಮಾತ್ರ

ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಕಾಮಿನಿ ಚಿತ್ರಕ್ಕೆ 'ಎ' ಅರ್ಹತಾ ಪತ್ರ ನೀಡಿದೆ.

ಕಾಮಿನಿಯಾಗಿ ಶೋಭಿನಾ

'ಕಾಮಿನಿ' ಜಸ್ಟ್ ಇನ್ ... ಚಿತ್ರದ ಮುಖ್ಯ ತಾರಾಗಣದಲ್ಲಿ ಶೋಭಿನಾ, ರಾಜೀವ್, ರಮೇಶ್, ಸೋನು ಚಿತ್ರದ ತಾರಾಬಳಗದಲ್ಲಿ ಇದ್ದಾರೆ.

5D ಕ್ಯಾಮರದಲ್ಲಿ ಸೆರೆಹಿಡಿದಿರುವ ಚಿತ್ರ

ಮಹಂತೇಶ್ ಅವರ ಛಾಯಾಗ್ರಹವಿದೆ. ಇದೊಂದು 5D ಕ್ಯಾಮರದಲ್ಲಿ ಸೆರೆಹಿಡಿದಿರುವ ಚಿತ್ರ. ನಿರ್ದೇಶಕ ರಮಾಣಾ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವವರು. ಭರತ್ ಸೋಲೊಮನ್ ಅವರು ಸಂಗೀತ ನೀಡಿದ್ದಾರೆ. ಸಂಜೀವಿ ರೆಡ್ಡಿ ಅವರ ಸಂಕಲನ ಮಾಡಿರುವರು.

ತೆಲುಗು, ತಮಿಳು, ಮಲಯಾಳಂನಲ್ಲೂ ರಿಲೀಸ್

ಈ ಚಿತ್ರ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ದಕ್ಷಿಣದ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

English summary
Kannada adult film Kaamini set to release on 11th October all over Karnataka. 'Kaamini' in the posters points to 'Kaama' but it is not so. It is a horror film. This is 5D camera cinema handled by Mahantesh.
Please Wait while comments are loading...