ಐಷಾರಾಮಿ ಮನೆ, BMW ಕಾರು ; ಪೊಲೀಸ್ ಠಾಣೆ ಮೆಟ್ಟಿಲೇರಿದ ಗಿಚ್ಚಿ ಗಿಲಿ ಗಿಲಿ ಜಾಹ್ನವಿ..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ. ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ...
ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುಳ್ಳು ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ವೈರಲ್ ಆಗಿರುತ್ತೆ. ಇದ್ರಿಂದ ಆ ಸುದ್ದಿಯ ಕೇಂದ್ರಬಿಂದುವಾದ ವ್ಯಕ್ತಿಗೆ ಆಘಾತವಾಗುತ್ತೆ.

2024ರಲ್ಲಿ ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ಪ್ರಕರಣ ದಾಖಲಾಗಿವೆ. ''ಸುಳ್ಳು ಸುದ್ದಿ'' ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವ ಅರಿವು ಇದ್ದರು ಕೂಡ ಲೈಕ್ಸ್ .. ಶೇರ್‌ಗಳ ಹುಚ್ಚಿಗೆ ಬಿದ್ದ ಅನೇಕರು ''ಸುಳ್ಳು ಸುದ್ದಿ''ಯನ್ನು ಬರೆಯುತ್ತಾರೆ. ಹಂಚಿಕೊಳ್ಳುತ್ತಾರೆ.
ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಕನ್ನಡದ ಖ್ಯಾತ ನಿರೂಪಕಿ ಮತ್ತು ನಟಿ ಜಾಹ್ನವಿ ಅವರ ಕುರಿತ ''ಫೇಕ್ ನ್ಯೂಸ್'' ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಜಾಹ್ನವಿ ಸೈಬರ್ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದಾರೆ. ಹೌದು, ಕೆಲ ದಿನಗಳ ಹಿಂದೆ "ವಿದ್ಯಾ ಮಲ್ನಾಡ್ " ಯೂಟ್ಯೂಬ್ ಚಾನೆಲ್ ಗೆ ಜಾಹ್ನವಿ ಸಂದರ್ಶನ ನೀಡಿದ್ದರು.
ಈ ಸಂದರ್ಶನದಲ್ಲಿ ಮದುವೆ-ವಿಚ್ಛೇದನದ ಕುರಿತು ತಮ್ಮ ಮನದ ನೋವು ಹಂಚಿಕೊಳ್ಳುತ್ತಲೇ ಜಾಹ್ನವಿ ಮಾತನಾಡುವುರು ಮಾತನಾಡುತ್ತಲೇ ಇರುತ್ತಾರೆ, ಅವರ ಬಾಯಿ ಮುಚ್ಚಿಸೋಕೆ ಆಗಲ್ಲ ಎಂದು ಹೇಳಿದ್ದರು. ಮಾತಿನ ಭರದಲ್ಲಿ ಅವರು ಅವರ ಹೆಂಡತಿ ಮತ್ತು ಮಗು ಜೊತೆ ಚೆನ್ನಾಗಿರಲಿ ಎಂದು ಕೂಡ ತಮ್ಮ ಮಾಜಿ ಪತಿಯ ಬಗ್ಗೆ ಹೇಳಿದ್ದರು.
ಜಾಹ್ನವಿ ಅವರಾಡಿದ ಈ ಮಾತುಗಳಿಗೆ ಆ ನಂತರ ಕೆಲವರು ''ಉಪ್ಪು ಹುಳಿ ಖಾರ'' ಬೆರೆಸಿ ಹಂಚಿಕೊಳ್ಳಲು ಶುರು ಮಾಡಿದರು. ನಾನು ಡಿವೋರ್ಸ್ ಕೊಟ್ಟ ಗಂಡ ಇವತ್ತು ಮದುವೆಯಾಗಿ ಮಗು ಮಾಡಿಕೊಂಡಿದ್ದಾನೆ. ನಾವು ಇವತ್ತಿಗೂ ಒಂಟಿಯಾಗಿದ್ದೇನೆ, ನನ್ನ ಆಸೆಗೆ ತಕ್ಕ ವರ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಐಷಾರಾಮಿ ಮನೆ ಬೇಕು, ಬಿಎಂಡಬ್ಲ್ಯೂ ಕಾರ್ ಬೇಕು, ರಾಜಕಾರಣಿಯಾಗಿದ್ದರೆ ತುಂಬ ಒಳ್ಳೆಯದು" ಎಂದು ಜಾನ್ವಿ ಹೇಳಿದ್ದಾರೆ ಎಂದು ಬಿಂಬಿಸಿದರು. ಮತ್ತೂ ಕೆಲವರು ಇದು ಜಾಹ್ನವಿ ಅವರದ್ದೇ ಮಾತು ಎಂದುಕೊಂಡು ಟ್ರೋಲ್ ಕೂಡ ಮಾಡಿದರು.

ತಮ್ಮ ವಿರುದ್ದ ನಡೆಯುತ್ತಿರುವ ಈ ಪಿತೂರಿ, ಅಪಪ್ರಚಾರ, ಸಹಜವಾಗಿ ಜಾಹ್ನವಿ ಅವರಿಗೆ ಕೂಡ ಗೊತ್ತಾಗಿದೆ. ಹೀಗಾಗಿಯೇ ಕೆರಳಿರುವ ಜಾಹ್ನವಿ ಸದ್ಯ ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ವೈರಲ್ ಆದ ಪೋಸ್ಟ್ ನ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಜಾಹ್ನವಿ, ''ಈ ವಿಷಯ ನನಗೆ ಗೊತ್ತಿರಲಿಲ್ಲ. ಕಂಪ್ಲೇಟ್ ಕೊಟ್ಟಿದ್ದೇನೆ, ಈ ಫೇಕ್ ನ್ಯೂಸ್ ಹರಡುವವರಿಗೆ ಪೊಲೀಸರೇ ಏರೋಪ್ಲೇನ್ ಹತ್ತಿಸುತ್ತಾರೆ'' ಎಂದು ಬರೆದುಕೊಂಡಿದ್ದಾರೆ.
ಸದ್ಯ ಜಾಹ್ನವಿ ಅವರ ಈ ಎಚ್ಚರಿಕೆಯ ಬರಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವಾರು ಜನ ಜಾಹ್ನವಿ ಅವರನ್ನು ಬೆಂಬಲಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಜಾಹ್ನವಿ ಅವರ ಹೇಳಿಕೆಯನ್ನು ತಿರುಚಿ ಈ ರೀತಿ ''ಫೇಕ್ ನ್ಯೂಸ್'' ಹಬ್ಬಿಸದವರ ವಿರುದ್ದ ಪೊಲೀಸ್‌ನವರು ಕ್ರಮ ಕೈಗೊಳ್ಳುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











