For Quick Alerts
  ALLOW NOTIFICATIONS  
  For Daily Alerts

  ಡೈರೆಕ್ಟರ್ ಆದ ಆಂಕರ್ 'ಬೆಸುಗೆ' ಪವನ್ ಕುಮಾರ್

  |

  ಕಿರುತೆರೆಯಿಂದ ಹಿರಿತೆರೆಗೆ ಆಗುವ ಪ್ರಯಾಣ ನಿರಂತರವಾಗಿ ಸಾಗುತ್ತಿದೆ. ಈಗ ಟಿವಿ ಕ್ಷೇತ್ರದಲ್ಲಿ ನಿರೂಪಕನಾಗಿ ಹೆಸರು ಮಾಡಿರುವ ಮತ್ತೊಬ್ಬ ಪ್ರತಿಭೆ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಆಂಕರ್ ಪವನ್ ಕುಮಾರ್ ಈಗ ಡೈರೆಕ್ಟರ್ ಆಗುತ್ತಿದ್ದಾರೆ.

  ಬೆಂಗಳೂರಿನ ರಾಮಕೃಷ್ಣ ಆಶ್ರಮದ ಮುಂದೆ ಟೀ ಕಾಫೀ ಮಾರಾಟ ಮಾಡಿದ ಅಜಯ್ ರಾವ್ | FILMIBEAT KANNADA

  ತಮ್ಮ ಮೊದಲ ಸಿನಿಮಾಗೆ 'ಧೀರ ಸಾಮ್ರಾಟ' ಶೀರ್ಷಿಕೆ ಇಟ್ಟಿದ್ದು, ಇತ್ತೀಚಿಗಷ್ಟೆ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಒಂದುವರೆ ವರ್ಷಗಳ ತಯಾರಿಗಳ ನಂತರ ಈ ಸಿನಿಮಾ ಈಗ ಪ್ರಾರಂಭ ಆಗುತ್ತದೆ.

  ಅರೆಸ್ಟ್ ಆಗಿದ್ದು ಡಿಕೆಶಿ, ಆದ್ರೆ ಪರದಾಡಿದ್ದು ಮಾತ್ರ ಕುರಿ ಪ್ರತಾಪ್ಅರೆಸ್ಟ್ ಆಗಿದ್ದು ಡಿಕೆಶಿ, ಆದ್ರೆ ಪರದಾಡಿದ್ದು ಮಾತ್ರ ಕುರಿ ಪ್ರತಾಪ್

  ಕೇಬಲ್ ವಾಹಿನಿಯಲ್ಲಿ ಕೆರಿಯರ್ ಶುರು ಮಾಡಿ, ನಂತರ ಉದಯ ಮ್ಯೂಸಿಕ್ ನಲ್ಲಿ ಆಂಕರ್ ಆಗಿ ಗುರುತಿಸಿಕೊಂಡು, 'ಬೆಸುಗೆ' ಪವನ್ ಅಂತಲೇ ಫೇಮಸ್ ಆಗಿದ್ದ ಇವರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ.

  ತಮ್ಮ ಮೊದಲ ಸಿನಿಮಾದ ಬಗ್ಗೆ ಪವನ್ ಕುಮಾರ್ 'ಫಿಲ್ಮಿಭೀಟ್ ಕನ್ನಡ'ದ ಜೊತೆಗೆ ವಿವರ ಹಂಚಿಕೊಂಡಿದ್ದಾರೆ.

  ಕಿರುಚಿತ್ರಗಳ ಪ್ರೋತ್ಸಾಹದಿಂದ ಸಿನಿಮಾ ಪ್ರಯತ್ನ

  ಕಿರುಚಿತ್ರಗಳ ಪ್ರೋತ್ಸಾಹದಿಂದ ಸಿನಿಮಾ ಪ್ರಯತ್ನ

  ಮೊದಲಿನಿಂದ ಸಂದೇಶ ಇರುವ ಕೆಲಸ ಮಾಡಬೇಕು ಎನ್ನುವುದು ಪವನ್ ಕುಮಾರ್ ಆಸೆ ಆಗಿತಂತೆ. ತಾವು ಮಾಡಿದ ಕಿರುಚಿತ್ರಗಳಗೆ ಪ್ರಶಸ್ತಿ ಬಂದು, ಅದಕ್ಕೆ ಸಿಕ್ಕ ಪ್ರೋತ್ಸಾಹಗಳು ಸಿನಿಮಾ ಮಾಡಲು ಶಕ್ತಿ ನೀಡಿದೆ. 'ಧೀರ ಸಾಮ್ರಾಟ' ಚಿತ್ರದ ನಿರ್ದೇಶನದ ಜೊತೆಗೆ, ಒಂದು ನೆಗೆಟಿವ್ ಪಾತ್ರದಲ್ಲಿಯೂ ಪವನ್ ನಟಿಸುತ್ತಿದ್ದಾರೆ

  ಚೇತನ್ ಕುಮಾರ್, ನಾಗೇಂದ್ರ ಪ್ರಸಾದ್ ಹಾಡುಗಳು

  ಚೇತನ್ ಕುಮಾರ್, ನಾಗೇಂದ್ರ ಪ್ರಸಾದ್ ಹಾಡುಗಳು

  'ಐ ಲವ್ ಯೂ' ಚಿತ್ರಕ್ಕೆ ಸಂಗೀತ ನೀಡಿದ್ದ ಕಿರಣ್ ಈ ಸಿನಿಮಾಗೆ ಮ್ಯೂಸಿಕ್ ಮಾಡುತ್ತಿದ್ದಾರೆ. ಸತೀಶ್ ಚಂದ್ರಯ್ಯ (ನನ್ನ ಪ್ರಕಾರ) ಸಂಕಲನ, ಕೌರವ ವೆಂಕಟೇಶ್ ಸಾಹಸ, ವಿರೇಶ್ ಕ್ಯಾಮರಾ ವರ್ಕ್, ಚಿತ್ರಕಥೆ ಸಂಭಾಷಣೆ ಎ ಆರ್ ಸಾಯಿರಾಮ್ (ಭೈರವ ಗೀತಾ) ಬರೆಯುತ್ತಿದ್ದಾರೆ. ಬಹದ್ದೂರ್ ಚೇತನ್ ಕುಮಾರ್ ಮೂರು ಹಾಡು ಹಾಗೂ ನಾಗೇಂದ್ರ ಪ್ರಸಾದ್ ಒಂದು ಹಾಡಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ.

  ''ಇಡೀ ಭಾರತದಲ್ಲಿ ನನಗೆ ಇಷ್ಟ ಆಗುವ ದೇವಸ್ಥಾನ ಧರ್ಮಸ್ಥಳ'' - ಸಾಧು ಕೋಕಿಲ''ಇಡೀ ಭಾರತದಲ್ಲಿ ನನಗೆ ಇಷ್ಟ ಆಗುವ ದೇವಸ್ಥಾನ ಧರ್ಮಸ್ಥಳ'' - ಸಾಧು ಕೋಕಿಲ

  ಉತ್ತರ ಕರ್ನಾಟಕದ ಹೀರೋ

  ಉತ್ತರ ಕರ್ನಾಟಕದ ಹೀರೋ

  ಉತ್ತರ ಕರ್ನಾಟಕದ ಪ್ರತಿಭೆ ರಾಕೇಶ್ ಚಿತ್ರದ ನಾಯಕನಾಗಿದ್ದಾರೆ. ಈ ಹಿಂದೆ ಇವರು 'ಸಪ್ಲಿಮೆಂಟರಿ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಆಯ್ಕೆ ಇನ್ನು ಅಂತಿಮ ಆಗಿಲ್ಲ. ಗುರು ಬಂಡಿ ಚಿತ್ರದ ನಿರ್ಮಾಪಕರು. ಉಳಿದಂತೆ, ಶೋಭರಾಜ್, ಶಂಕರ್ ಅಶ್ವತ್, ರಮೇಶ್ ಭಟ್ ಚಿತ್ರದ ತಾರಬಳಗದಲ್ಲಿ ಇದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಆಗಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದೆಯಂತೆ.

  'ಬೆಸುಗೆ' ಕಾರ್ಯಕ್ರಮ ಹೆಸರು ನೀಡಿದೆ

  'ಬೆಸುಗೆ' ಕಾರ್ಯಕ್ರಮ ಹೆಸರು ನೀಡಿದೆ

  ಪವನ್ ಕುಮಾರ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಸದ್ಯ 13 ವರ್ಷದ ತಮ್ಮ ಟಿವಿ ಜರ್ನಿ ಪೂರೈಸಿದ್ದಾರೆ. ಒಂದು ಸಾಮಾನ್ಯ ಕೇಬಲ್ ವಾಹಿನಿಯಿಂದ ಶುರು ಮಾಡಿ, ಬಳಿಕ ಉದಯ ಮ್ಯೂಸಿಕ್ ತಂಡ ಸೇರಿದರು. ಅಲ್ಲಿ 'ಬೆಸುಗೆ' ಎಂಬ ಕಾರ್ಯಕ್ರಮ ಅವರಿಗೆ ದೊಡ್ಡ ಹೆಸರು ನೀಡಿತು. 'ಧೀರ ಸಾಮ್ರಾಟ' ಮೂಲಕ ಖಾತೆ ತೆರೆದಿರುವ ಪವನ್ ಮುಂದೆ ಒಳ್ಳೆ ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ.

  English summary
  Kannada anchor Besuge Pavan Kumar making his sandalwood debut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X