twitter
    For Quick Alerts
    ALLOW NOTIFICATIONS  
    For Daily Alerts

    'ಡಿಯರ್ ಕಾಮ್ರೇಡ್' ಕನ್ನಡ ಟ್ರೈಲರ್ ನಲ್ಲಿ 'ಈ ಒಂದು ಅಂಶ' ಇಷ್ಟ ಆಗ್ಲಿಲ್ಲ.!

    |

    Recommended Video

    ಡಿಯರ್ ಕಾಮ್ರೇಡ್' ಕನ್ನಡ ಟ್ರೈಲರ್ ನಲ್ಲಿ 'ಈ ಒಂದು ಅಂಶ' ಇಷ್ಟ ಆಗ್ಲಿಲ್ಲ.

    ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಡಿಯರ್ ಕಾಮ್ರೇಡ್' ಸಿನಿಮಾ ಇದೇ ತಿಂಗಳು ನಾಲ್ಕು ಭಾಷೆಯಲ್ಲಿ ತೆರೆಕಾಣುತ್ತಿದೆ. ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ಗೀತಾ ಗೋವಿಂದಂ ಚಿತ್ರದ ನಂತರ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಮತ್ತೆ ತೆರೆಮೇಲೆ ಒಟ್ಟಿಗೆ ಬರ್ತಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ಆದ್ರೆ, ಸಿನಿಮಾಗೆ ಮುಂಚೆಯೇ ಕನ್ನಡ ಅಭಿಮಾನಿಗಳು ಡಿಯರ್ ಕಾಮ್ರೇಡ್ ಬಗ್ಗೆ ಬೇಸರಗೊಂಡಿದ್ದಾರೆ.

    ರಾಕಿ ಭಾಯ್ ಜೊತೆ ರೌಡಿ: ಒಂದೇ ಕಲರ್, ಒಂದೇ ಸ್ಟೈಲ್ ನಲ್ಲಿ ಅಣ್ತಮ್ಮಾಸ್.!ರಾಕಿ ಭಾಯ್ ಜೊತೆ ರೌಡಿ: ಒಂದೇ ಕಲರ್, ಒಂದೇ ಸ್ಟೈಲ್ ನಲ್ಲಿ ಅಣ್ತಮ್ಮಾಸ್.!

    ಡಿಯರ್ ಕಾಮ್ರೇಡ್ ಸಿನಿಮಾ ಏಕಕಾಲದಲ್ಲಿ ತೆರೆಕಾಣುತ್ತಿರುವುದರಿಂದ ಇದು ಕನ್ನಡ ಸಿನಿಮಾ ಎಂದೇ ಭಾವಿಸಿದ್ದಾರೆ. ಬಟ್, ಟ್ರೈಲರ್ ನೋಡಿದ್ಮೇಲೆ ಯಾಕೋ ಇದನ್ನ ನೋಡದೇ ಇರೋದು ಉತ್ತಮ ಎಂಬ ನಿರ್ಧಾರಕ್ಕೆ ಪ್ರೇಕ್ಷಕರು ಬರ್ತಿದ್ದಾರೆ. ಅಷ್ಟಕ್ಕೂ, ಈ ಟ್ರೈಲರ್ ನಲ್ಲಿ ಇಷ್ಟ ಆಗದೇ ಇರೋದು ಏನಿದೆ? ಮುಂದೆ ಓದಿ....

    ದೇವರಕೊಂಡಗೆ ಧ್ವನಿ ಹೊಂದಿಕೆಯಾಗಿಲ್ಲ

    ದೇವರಕೊಂಡಗೆ ಧ್ವನಿ ಹೊಂದಿಕೆಯಾಗಿಲ್ಲ

    ಕನ್ನಡ ಕಲಾಭಿಮಾನಿಗಳು ಬೇಸರ ಮಾಡಿಕೊಳ್ಳುವುದಕ್ಕೆ ಕಾರಣ ವಿಜಯ್ ದೇವರಕೊಂಡ ಪಾತ್ರ. ಕನ್ನಡದಲ್ಲಿ ದೇವರಕೊಂಡ ಪಾತ್ರಕ್ಕೆ ಡಬ್ ಮಾಡಿರುವ ಧ್ವನಿ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಅವರ ಪಾತ್ರಕ್ಕೆ ಆ ಧ್ವನಿ ಸೂಕ್ತವಾಗಿ ಹೊಂದಿಕೆಯಾಗಿಲ್ಲ. ಹೀಗಾಗಿ, ಸಿನಿಮಾ ಮೇಲೆ ಆಸಕ್ತಿ ಕಮ್ಮಿಯಾಗುತ್ತಿದೆ.

    'ಲಿಪ್ ಲಾಕ್ ಅಂದ್ರೆ ನಂಗೆ ಆಗಲ್ಲ' : ಮುತ್ತಿನ ಅರ್ಥ ಹೇಳಿದ ದೇವರಕೊಂಡ'ಲಿಪ್ ಲಾಕ್ ಅಂದ್ರೆ ನಂಗೆ ಆಗಲ್ಲ' : ಮುತ್ತಿನ ಅರ್ಥ ಹೇಳಿದ ದೇವರಕೊಂಡ

    ಧ್ವನಿ ಬಗ್ಗೆ ಎಲ್ಲರಿಗೂ ಪರಿಚಯ ಇದೆ

    ಧ್ವನಿ ಬಗ್ಗೆ ಎಲ್ಲರಿಗೂ ಪರಿಚಯ ಇದೆ

    ವಿಜಯ್ ದೇವರಕೊಂಡ ಅವರ ಧ್ವನಿಯನ್ನ ಬಹುತೇಕ ಎಲ್ಲ ಸ್ಯಾಂಡಲ್ ವುಡ್ ಅಭಿಮಾನಿಗಳು ಗ್ರಹಿಸಿದ್ದಾರೆ. ಇದೀಗ, ಅವರ ಅಭಿನಯಕ್ಕೆ ಬೇರೆ ಯಾವುದೋ ಧ್ವನಿ ಬಂದಾಗ ಸಹಜವಾಗಿ ಇಷ್ಟ ಆಗುವುದಿಲ್ಲ. 'ಡಿಯರ್ ಕಾಮ್ರೇಡ್' ಸಿನಿಮಾ ವಿಚಾರದಲ್ಲೂ ಈಗ ಅದೇ ಆಗಿದೆ. ಆ ಪಾತ್ರದಲ್ಲಿರುವ ಗತ್ತಿಗೆ ತಕ್ಕಂತೆ ಡಬ್ಬಿಂಗ್ ಮಾಡಿಲ್ಲ ಎಂಬುದು ನಿರಾಸಕ್ತಿ ಮೂಡಿಸಿದೆ.

    ಅವರೇ ಟ್ರೈ ಮಾಡಬಹುದಿತ್ತು

    ಅವರೇ ಟ್ರೈ ಮಾಡಬಹುದಿತ್ತು

    ಈಗಿನ ಟ್ರೆಂಡ್ ನಲ್ಲಿ ಭಾಷೆ ಗೊತ್ತಿಲ್ಲದವರು ಕೂಡ ಭಾಷೆ ಕಲಿತು ಹಾಡುಗಳನ್ನ ಹಾಡ್ತಿದ್ದಾರೆ. ತಮ್ಮ ಪಾತ್ರಗಳಿಗೆ ಡಬ್ ಮಾಡ್ತಿದ್ದಾರೆ. ಸೋ, ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ವಿಜಯ್ ದೇವರಕೊಂಡ ಅವರೇ ಕನ್ನಡದಲ್ಲೂ ಡಬ್ ಮಾಡಬಹುದಿತ್ತು. ಇದರಿಂದ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಮತ್ತಷ್ಟು ಜಾಗ ಪಡೆಯಬಹುದಿತ್ತು.

    ವಿಜಯ್ ದೇವರಕೊಂಡ ನೋಡಿದ ಮೊದಲ ಕನ್ನಡ ಚಿತ್ರ ರಕ್ಷಿತ್ ಅವರದ್ದು ವಿಜಯ್ ದೇವರಕೊಂಡ ನೋಡಿದ ಮೊದಲ ಕನ್ನಡ ಚಿತ್ರ ರಕ್ಷಿತ್ ಅವರದ್ದು

    ರಶ್ಮಿಕಾ ನೋಡಿದ್ರೆ ಖುಷಿ ಆಗುತ್ತೆ

    ರಶ್ಮಿಕಾ ನೋಡಿದ್ರೆ ಖುಷಿ ಆಗುತ್ತೆ

    ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನ ನೋಡಿದ್ರೆ ಖುಷಿ ಆಗುತ್ತೆ. ಬಹುಶಃ ಇದು ಕನ್ನಡ ಸಿನಿಮಾ ಎಂದು ಅನಿಸುತ್ತೆ. ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಇನ್ನುಳಿದಂತೆ ಪೋಷಕ ಕಲಾವಿದರ ಧ್ವನಿ ಬಗ್ಗೆ ಅಷ್ಟಾಗಿ ಪರಚಯವಿಲ್ಲ. ಸೋ, ಅವರ ಡಬ್ಬಿಂಗ್ ನಲ್ಲಿ ಏನೂ ವ್ಯತ್ಯಾಸ ಕಾಣುತ್ತಿಲ್ಲ, ಓಕೆ ಎನ್ನಬಹುದು. ಇದೊಂದು ಬಿಟ್ಟರೇ ಸಿನಿಮಾ ಟ್ರೈಲರ್ ಚೆನ್ನಾಗಿ ಮೂಡಿ ಬಂದಿದೆ.

    English summary
    Kannada audience did not like this in dear comrade trailer. the movie starrer vijay devarakonda and rashmika mandanna in lead role.
    Saturday, July 13, 2019, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X