ರಿಯಲ್ ಸ್ಟಾರ್ ಉಪ್ಪಿಗೂ ಸೂರಿಯ 'ಟಗರು' ಚಿತ್ರಕ್ಕೂ ಲಿಂಕ್.!
ಭಾರಿ ನಿರೀಕ್ಷೆ ಹುಟ್ಟಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಬಿಡುಗಡೆ ಆಗಿ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಸಾಕಷ್ಟು ವಿಚಾರಗಳು ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದೆ. ಸಿನಿಮಾ ನೋಡಿ ಬಂದ ಶೇಕಡ 90 ರಷ್ಟು ಜನರು ಟಗರು ಚಿತ್ರಕ್ಕೂ ಉಪ್ಪಿಗೂ ಲಿಂಕ್ ಇದೆ ಎನ್ನುವ ಮಾತುಗಳನ್ನ ಹೇಳಿದ್ದಾರೆ.
ನಿರ್ದೇಶಕ ಸೂರಿ ಕನ್ನಡ ಸಿನಿಮಾಗೆ ಅದ್ಬುತ ಚಿತ್ರಗಳನ್ನ ನೀಡಿದವರು. ಇಂದಿಗೂ ಅದೆಷ್ಟೋ ಜನರು ಸೂರಿ ನಿರ್ದೇಶನದ ಚಿತ್ರಗಳನ್ನ ನೋಡಲು ಕಾದಿರುತ್ತಾರೆ. ಪ್ರತಿ ಚಿತ್ರದಲ್ಲೂ ವಿಭಿನ್ನತೆಯನ್ನ ಹೊತ್ತು ತರುವ ಸೂರಿ ಈ ಬಾರಿ ರಿವರ್ಸ್ ಸ್ಕ್ರೀನ್ ಪ್ಲೇ ಬಳಕೆ ಮಾಡಿದ್ದಾರೆ. ಟಗರು ಸಿನಿಮಾದ ಫಸ್ಟ್ ಹಾಫ್ ನಲ್ಲೇ ಪ್ರೇಕ್ಷಕರನ್ನ ಕನ್ಫೂಸ್ ಮಾಡಿದ್ದಾರೆ.
ಚಿತ್ರದ ನೋಡಿದ ಜನರು ಉಪೇಂದ್ರ ನಿರ್ದೇಶನದ ಚಿತ್ರ ವೀಕ್ಷಿಸಿದ ಅನುಭವ ಆಗುತ್ತಿದೆ ಎನ್ನುತ್ತಿದ್ದಾರೆ. ಟಗರು ಉಪ್ಪಿ ಶೈಲಿಯ ಸುಕ್ಕಾ ಸೂರಿ ಸಿನೆಮಾ ಎಂದು ಹೇಳುತ್ತಿದ್ದಾರೆ.

ಸದ್ಯ ಡೈರೆಕ್ಷನ್ ನಿಂದ ಬ್ರೇಕ್ ತೆಗೆದುಕೊಂಡಿರುವ ಉಪ್ಪಿ ಅಭಿಮಾನಿಗಳಿಗೆ ನಿರಾಸೆ ಅಂತು ಇಲ್ಲ ಎನ್ನುವುದು ಸೂರಿ ನಿರೂಪಿಸಿದ್ದಾರೆ. ಉಪ್ಪಿ ಸ್ಟೈಲ್ ಆಫ್ ಚಿತ್ರವನ್ನ ನಿರ್ದೇಶನ ಮಾಡಲು ಮತ್ತೋರ್ವ ನಿರ್ದೇಶಕರ ಪ್ರಯತ್ನಕ್ಕೆ ಫಲ ಸಿಕ್ಕಿದೆ.


Click it and Unblock the Notifications











