ಪ್ರಶಾಂತ್ ನೀಲ್ - ಪ್ರಭಾಸ್ ಹೊಸ ಸಿನಿಮಾದ ವಿರುದ್ಧ ಕನ್ನಡ ಪ್ರೇಕ್ಷಕರ ಆಕ್ರೋಶ

By ಫಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್ ಮುಂದಿನ ಹೊಸ ಸಿನಿಮಾ ಅನೌನ್ಸ ಮಾಡಿದೆ. ಡಿಸೆಂಬರ್ 2ರಂದು ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿ ಕನ್ನಡ ಸಿನಿಮಾ ಪ್ರೇಕ್ಷಕರ ಕುತೂಹಲ ಹೆಚ್ಚಿಸಿತ್ತು. ಕೆಜಿಎಫ್ ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಪ್ಯಾನ್ ಇಂಡಿಯಾ ಸಿನಿಮಾವಿದು.

Recommended Video

ಸಲಾರ್, ಪ್ರಶಾಂತ್ ನೀಲ್ ಮುಂದಿನ ಚಿತ್ರ ಪ್ರಭಾಸ್ ಜೊತೆಗೆ | Filmibeat kannada

ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿತ್ತು. ಯಾವ ಸ್ಟಾರ್ ನಟನ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಕುತೂಹಲದಿಂದ ಸಿನಿಮಾಪ್ರಿಯರು ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಇದೀಗ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಅನೌನ್ಸ್ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ.

ನಿರೀಕ್ಷೆಯಂತೆ ಹೊಂಬಾಳೆ ಫಿಲ್ಮ್ಸ್ ನ ಮುಂದಿನ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ವಿಚಾರ ಚಿತ್ರಪ್ರಿಯರಿಗೆ ಸಂತಸ ಮೂಡಿಸಿದೆ. ಆದರೆ ಈ ಸಿನಿಮಾ ಕನ್ನಡ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದೆ ಓದಿ..

ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ

ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ

ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾದಲ್ಲಿ ತೆಲುಗು ನಟ ಪ್ರಭಾಸ್ ನಾಯಕ ಎನ್ನುವ ವಿಚಾರ ಗೊತ್ತಾಗುತ್ತಿದಂತೆ ಕನ್ನಡ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ವಿರುದ್ಧ ಮುಗಿಬಿದ್ದಿದ್ದಾರೆ. ಕನ್ನಡದಲ್ಲಿ ಯಾರು ಹೀರೋಗಳು ಸಿಗಲ್ವಾ? ಕನ್ನಡ ಸಹವಾಸ ಸಾಕಾಯ್ತಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ರಾಜಮೌಳಿ ಸರ್ ನ ನೋಡಿ ಕಲೀರಿ

ರಾಜಮೌಳಿ ಸರ್ ನ ನೋಡಿ ಕಲೀರಿ

ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ಕನ್ನಡ ಪ್ರೇಕ್ಷಕರು ಸಿಟ್ಟಿಗೆದಿದ್ದಾರೆ. 'ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರಿಗೆ ಕನ್ನಡ ಸಹವಾಸ ಸಾಕಾಯ್ತಾ. ಕೆಜಿಎಫ್ ಫಿಲಂ ಮಾಡಿದ ಮೇಲೆ ನಮ್ಮ ಕನ್ನಡಿಗರ ಜೊತೆ ಸಿನಿಮಾ ಮಾಡ್ತಾರೆ ಅಂತ ಅಂದುಕೊಂಡರೆ ಪ್ರಭಾಸ್ ಗೆ ಸಿನಿಮಾ ಮಾಡುತ್ತಿದ್ದಾರೆ. ಅದೇ ರಾಜಮೌಳಿ ನೋಡಿ ಕಲಿತುಕೊಳ್ಳಿ ಎಷ್ಟೇ ಕರೆದ್ರು ಹಿಂದಿಗೆ ಹೋಗಲಿಲ್ಲ ಎಂದು ಬೇಸಕ ವ್ಯಕ್ತಪಡಿಸುತ್ತಿದ್ದಾರೆ.

ಬೆಳೆಯೋಕ್ ನಮ್ ಜನ ಬೇಕು ಬೆಳೆದ ಮೇಲೆ ಬೇಡ

ಬೆಳೆಯೋಕ್ ನಮ್ ಜನ ಬೇಕು ಬೆಳೆದ ಮೇಲೆ ಬೇಡ

ನಮ್ಮ ಭಾಷೆಯಲ್ಲಿ ನಾಯಕ ನಟನನ್ನು ಇಟ್ಕೊಂಡು ನಿಮಗೆ ಆಕಾಶ ಮುಟ್ಟೋ ಶಕ್ತಿ ಇರಬೇಕಾದರೆ. ಬೇರೆ ಭಾಷೆಯ ನಟ ಯಾಕೆ ಬೇಕು. ಮೊದಲು ನಮ್ಮ ಭಾಷೆಯ ನಾಯಕ ನಟರನ್ನು ಹೆಚ್ಚು ಬೆಳಸಿ. ರಾಜಮೌಳಿ ನೋಡಿ ಕಲಿರಿ ಯಾವ ರೀತಿ ತೆಲುಗು ಚಿತ್ರ ರಂಗಕ್ಕೆ ಕಮಿಟ್ ಆಗಿದ್ದಾರೆ ಅಂತ. ಯಾಕ್ರೀ ಎಲ್ಲರೂ ಈತರ ಮಾಡ್ತೀರಾ. ಬೆಳೆಯೋಕ್ ನಮ್ ಜನ. ಬೆಳೆದ ಮೇಲೆ ಹೀಗೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

More from Filmibeat

English summary
Kannada Audience Outrage Against Prashant Neal and Prabhas new Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X