'ಅಜ್ಞಾತವಾಸಿ'.. 'ಗ್ರೀನ್ ಗರ್ಲ್'; ಈ 2 ಟ್ರೈಲರ್ ನೋಡಿದ್ರೆ ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಅಂತೀರಾ!

ಕನ್ನಡದಲ್ಲಿ ಕೆಲವೊಮ್ಮೆ ಔಟ್ ಆಫ್ ದಿ ಬಾಕ್ಸ್ ಎನ್ನುವಂತ ಕೆಲ ಸಿನಿಮಾಗಳು ಆಗಾಗ್ಗೆ ಬರುತ್ತವೆ. ಸದ್ಯ ಬಿಡುಗಡೆ ಆಗಿರುವ 'ಅಜ್ಞಾತವಾಸಿ' ಹಾಗೂ 'ಗ್ರೀನ್ ಗರ್ಲ್' ಸಿನಿಮಾ ಟ್ರೈಲರ್‌ಗಳನ್ನು ನೋಡಿದರೆ ನಿಮಗೆ ಅದೇ ಭಾವನೆ ಬರೋದು ಗ್ಯಾರಂಟಿ. ಈಗಾಗಲೇ ಕೆಲವರು ಫಸ್ಟ್ ಡೇ ಫಸ್ಟ್ ಶೋ ನೋಡ್ತೀವಿ ಎಂದು ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ನಿಮಗೂ ಹಾಗೆ ಅನ್ನಿಸಬಹುದು.

ರಂಗಾಯಣ ರಘು ಲೀಡ್ ರೋಲ್‌ನಲ್ಲಿ ನಟಿರುವ ಕ್ರೈಂ ಥ್ರಿಲ್ಲರ್ ಸಿನಿಮಾ 'ಅಜ್ಞಾತವಾಸಿ'. ಕನ್ನಡ ಭರವಸೆಯ ನಿರ್ದೇಶಕ ಹೇಮಂತ್ ರಾವ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಚಿತ್ರದಲ್ಲಿ ಪವನ ಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಕೂಡ ಬಣ್ಣ ಹಚ್ಚಿದ್ದಾರೆ. ಮುಂದಿನ ವಾರವೇ ಸಿನಿಮಾ ತೆರೆಗೆ ಬರಲಿದೆ.

Kannada Audience praising Agnyathavasi and Green girl Movie trailers

ಕಳೆದ ವರ್ಷ ಬಂದಿದ್ದ 'ಶಾಖಾಹಾರಿ' ಚಿತ್ರದಲ್ಲಿ ಸುಬ್ಬಣ್ಣ ಪಾತ್ರದಲ್ಲಿ ನಟಿಸಿ ರಂಗಾಯಣ ರಘು ಗಮನ ಸೆಳೆದಿದ್ದರು. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮತ್ತೊಮ್ಮೆ ಕ್ರೈಂ ಥ್ರಿಲ್ಲರ್ ಚಿತ್ರದ ಭಾಗವಾಗಿದ್ದಾರೆ. ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. 90ರ ದಶಕದಲ್ಲಿ ನಡೆಯುವ ಒಂದು ಕಾಲ್ಪನಿಕ ಕಥೆ ಇದು.

ನಾಲ್ಕೇರಿ ಎಂಬ ಹಳ್ಳಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆಯಾಗಿ 25 ವರ್ಷ ಕಳೆದಿರುತ್ತದೆ. ಆದರೆ ಒಂದೇ ಒಂದು ಸಣ್ಣ ಕೇಸ್ ದಾಖಲಾಗಿರುವುದಿಲ್ಲ. ಕೊನೆಗೆ ಒಂದು ಮರ್ಡರ್ ಕೇಸ್ ದಾಖಲಾಗುತ್ತದೆ. ಆ ಕೊಲೆಯನ್ನು ಯಾರು ಮಾಡಿದರು? ಯಾಕೆ ಮಾಡಿದರು? ಅನನುಭವಿ ಪೊಲೀಸ್ ಅಧಿಕಾರಿ ಅದನ್ನು ಹೇಗೆ ಬಗೆಹರಿಸುತ್ತಾನೆ ಎನ್ನುವ ಕಥೆ ಚಿತ್ರದಲ್ಲಿದೆ ಎನ್ನುವುದು ಗೊತ್ತಾಗುತ್ತದೆ. ಟ್ರೈಲರ್‌ನಲ್ಲಿ ಹೆಚ್ಚು ವಿಷಯ ರಿವೀಲ್ ಮಾಡದೇ ಚಿತ್ರತಂಡ ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ಜಾತಿ, ಧರ್ಮದಂತಹ ಸೂಕ್ಷ್ಮ ಸಂಗತಿಗಳನ್ನು ಆಧರಿಸಿ ಸಿನಿಮಾ ಮಾಡುವುದು ಕಮ್ಮಿ. ಸದ್ಯ ಸಾರ್ಥಕ್ ಹೆಗ್ಡೆ ನಿರ್ದೇಶನದ 'ಗ್ರೀನ್‌ ಗರ್ಲ್' ಚಿತ್ರದಲ್ಲಿ ಅಂತಾದೊಂದು ಪ್ರಯತ್ನ ಮಾಡಲಾಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮೊದಲ ನೋಟದಲ್ಲೇ ಝಲಕ್ ಹುಬ್ಬೇರಿಸುವಂತಿದೆ. ಆದರೆ ಸಿನಿಮಾ ಮುಂದಿನ ದಿನಗಳಲ್ಲಿ ಭಾರೀ ವಿವಾದ ಸೃಷ್ಟಿಸುತ್ತಾ ಎನ್ನುವ ಅನುಮಾನ ಕೂಡ ಮೂಡಿದೆ.

Kannada Audience praising Agnyathavasi and Green girl Movie trailers

ಮಯೂರ್ ಗೌಡ, ಸುಚರಿತ, ಸುದರ್ಶನ ಆಚಾರ್ಯ ಯೆಕ್ಕಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಗ್ರೀನ್ ಗರ್ಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಸಣ್ಣ ಝಲಕ್ ತೋರಿಸಿ ಕುತೂಹಲ ಮೂಡಿಸಿದೆ ಚಿತ್ರತಂಡ. ನಿಧಾನವಾಗಿ ಟ್ರೈಲರ್ ವೈರಲ್ ಆಗುತ್ತಿದೆ. ನೋಡಿದ ಪ್ರತಿಯೊಬ್ಬರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸಿನಿಮಾ ನೋಡುತ್ತೇವೆ ಯಾವಾಗ ರಿಲೀಸ್ ಎಂದು ಕೇಳುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಅವಕಾಶ ಸಿಗುತ್ತಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರೀತಿ, ಧರ್ಮ, ಲೈಂಗಿಕತೆ, ಅಮೆರಿಕಾ ಈ ವಿಚಾರಗಳ ಸುತ್ತಾ 'ಗ್ರೀನ್ ಗರ್ಲ್' ಸಿನಿಮಾ ಕಥೆ ಸುತ್ತುತ್ತದೆ. ಹಿಂದೂ ಸಂಘಟನೆಗೆ ಸೇರಿದ ಯುವಕನೊಂದಿಗೆ ಮುಸ್ಲಿಂ ಹುಡುಗಿ ಪ್ರೀತಿಯಲ್ಲಿ ಬೀಳುವ ಕಥೆ ಚಿತ್ರದಲ್ಲಿ ಇದ್ದಂತೆ ಕಾಣುತ್ತಿದೆ. ಕೆಲ ಬೋಲ್ಡ್ ದೃಶ್ಯಗಳು ಚಿತ್ರದಲ್ಲಿದೆ. ಮೇಕಿಂಗ್, ಇಂಟೆನ್ಸ್‌ಸಿಟಿ, ಬಿಜಿಎಂ ಎಲ್ಲವೂ ಹಿಡಿದಿಟ್ಟುಕೊಳ್ಳುವಂತಿದೆ.

'ಅಜ್ಞಾತವಾಸಿ' ಹಾಗೂ 'ಗ್ರೀನ್ ಗರ್ಲ್' ಎರಡೂ ಸಿನಿಮಾ ಟ್ರೈಲರ್‌ಗಳಿಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ನೋಡದ ಪ್ರತಿಯೊಬ್ಬರು ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರಮಂದಿರದಲ್ಲೇ ಸಿನಿಮಾ ನೋಡುವ ಉತ್ಸಾಹ ತೋರಿಸುತ್ತಿದ್ದಾರೆ. 'ಅಜ್ಞಾತವಾಸಿ' ಸಿನಿಮಾ ಏಪ್ರಿಲ್ 11ಕ್ಕೆ ತೆರೆಗೆ ಬರ್ತಿದೆ. ಆದರೆ 'ಗ್ರೀನ್ ಗರ್ಲ್' ಸಿನಿಮಾ ರಿಲೀಸ್ ಡೇಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.

More from Filmibeat

English summary
Audience is highly impressed with Agnyathavasi and Green girl Movies trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X