ಕೊನೆ ಘಳಿಗೆಯಲ್ಲಿ ಟೈಟಲ್ ಬದಲಾಯಿಸಿದ 'ಅಯೋಗ್ಯ'
'ಅಯೋಗ್ಯ' ಚಿತ್ರಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಎನ್ನುವ ಉಪ ಶೀರ್ಷಿಕೆಯನ್ನು ಇಟ್ಟುಕೊಳ್ಳಲಾಗಿತ್ತು. ಅದರಿಂದಲೇ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವೂ ಹುಟ್ಟುಕೊಂಡಿತ್ತು. ಆದರೆ ಇನ್ನೇನು ಸಿನಿಮಾ ಬಿಡುಗಡೆಗೆ ತಯಾರಾಗ್ತಿದೆ ಎನ್ನುವ ಸಂದರ್ಭದಲ್ಲಿ ಉಪ ಶೀರ್ಷಿಕೆಯೇ ನಿರ್ಮಾಪಕರಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಈ ಹಿಂದೆಯೇ ಉಪಶೀರ್ಷಿಕೆಯನ್ನು ಬದಲಾವಣೆ ಮಾಡಬೇಕು ಎನ್ನುವ ಒತ್ತಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿತ್ತು. ಇದೆ ವಿಚಾರವಾಗಿ ನಿನ್ನೆ ಗ್ರಾಮಪಂಚಾಯಿತಿ ಸದಸ್ಯರಾದ ರೇವತಿ, ಲಕ್ಷ್ಮಿ ಗೌಡ ಎನ್ನುವವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ಈ ಕುರಿತು ಇಂದು ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾದ ಚಿನ್ನೇಗೌಡ್ರು ಹಾಗೂ ಕರಿಸುಬ್ಬು ಚರ್ಚೆ ಮಾಡಿ ನಂತರ ಸಿನಿಮಾ ಕಲಾವಿದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಜೊತೆಯಲ್ಲೂ ಮಾತನಾಡಿ ಟ್ಯಾಗ್ ಲೈನ್ ತೆಗೆಯುವಂತೆ ನಿರ್ಧಾರ ಮಾಡಿದ್ದಾರೆ.

ಇಂದಿನಿಂದ ಕೇವಲ 'ಅಯೋಗ್ಯ' ಅನ್ನೋ ಟೈಟಲ್ ಮಾತ್ರ ಎಲ್ಲೆಡೆ ಬಳಸಿಕೊಳ್ಳಲು ಚಿತ್ರತಂಡ ಸಮ್ಮತಿ ನೀಡಿದೆ. ಶೀರ್ಷಿಕೆ ಅಡಿ ಇದ್ದ ಗ್ರಾಮ ಪಂಚಾಯಿತಿ ಸದಸ್ಯ ಅನ್ನೋ ಅಡಿ ಬರಹ ಬದಲಾವಣೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿರುವ 76,367 ಪಂಚಾಯಿತಿ ಸದಸ್ಯರಿಗೆ ಗೌರವ ಕೊಡುವ ಉದ್ದೇಶದಿಂದ ಟೈಟಲ್ ಟ್ಯಾಗ್ ಲೈನ್ ಕೈ ಬಿಡಲು ನಿರ್ಮಾಪಕ ಟಿ ಆರ್ ಚಂದ್ರಶೇಖರ್, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಟ ಸತೀಶ್ ನಿರ್ಧಾರ ಮಾಡಿದ್ದಾರೆ.


Click it and Unblock the Notifications











