For Quick Alerts
  ALLOW NOTIFICATIONS  
  For Daily Alerts

  ಹೊಸಬರ, ಹೊಸರೀತಿ ಸಿನಿಮಾ 'ಅಯ್ಯೋ ರಾಮ'

  By Pavithra
  |

  ಚಂದನವನದಲ್ಲಿ ಹೊಸ ರೀತಿ ಸಿನಿಮಾಗಳು ಪ್ರತಿವಾರ ಬಿಡುಗಡೆ ಆಗುತ್ತಲೇ ಇರುತ್ತವೆ. ಅದೇ ಸಾಲಿಗೆ ಸೇರುವ ಚಿತ್ರ 'ಅಯ್ಯೋ ರಾಮ', ಹೊಸ ಕಲಾವಿದರು ಹಾಗೂ ತಂತ್ರಜ್ಞರು ಸೇರಿ ಮಾಡಿರುವ 'ಅಯ್ಯೋ ರಾಮ' ಚಿತ್ರ ಟೈಟಲ್ ಮತ್ತು ಟೀಸರ್ ನಿಂದಲೇ ಸುದ್ದಿ ಮಾಡುತ್ತಿದೆ.

  'ಉಗ್ರಂ', 'ಮಫ್ತಿ' ಸಿನಿಮಾಗಳಲ್ಲಿ ಸಹಕಲಾವಿದನಾಗಿ ಅಭಿನಯ ಮಾಡಿದ್ದ ಪ್ರದೀಪ್ 'ಅಯ್ಯೋ ರಾಮ' ಸಿನಿಮಾದಲ್ಲಿ ನಾಯಕನಾಗಿ ಅಭಿನಯ ಮಾಡಿದ್ದಾರೆ. ಪ್ರದೀಪ್ ಜೊತೆಯಾಗಿ ಪ್ರಿಯಾಂಕ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.

  ಶ್ರೀಮುರಳಿ, ಧ್ರುವ ಸರ್ಜಾ 'ಅಯ್ಯೋ ರಾಮ' ಅಂತಿರೋದು ಯಾಕೆ.? ಶ್ರೀಮುರಳಿ, ಧ್ರುವ ಸರ್ಜಾ 'ಅಯ್ಯೋ ರಾಮ' ಅಂತಿರೋದು ಯಾಕೆ.?

  ಹೊಸ ಕಲಾವಿದರೇ ಸೇರಿ ಮಾಡಿರುವ 'ಅಯ್ಯೋ ರಾಮ' ಸಿನಿಮಾವನ್ನು ಆರ್ ವಿನೋದ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ವಿವೇಕ್ ಚಕ್ರವರ್ತಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ತ್ರಿವಿಕ್ರಮ್ ರಘು ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಚಿತ್ರೀಕರಣ ಮುಗಿಸಿರುವ 'ಅಯ್ಯೋ ರಾಮ' ಸಿನಿಮಾ ಇದೇ ತಿಂಗಳ ಅಂದರೆ ಜುಲೈ 27 ರಂದು ಬಿಡುಗಡೆ ಆಗುತ್ತಿದೆ.

  ಪ್ರದೀಪ್ ಜೊತೆಯಾಗಿ ಜಹಂಗೀರ್​, ರಾಕ್​ಲೈನ್​ ಸುಧಾಕರ್​, ಕರಿಸುಬ್ಬು, ಪ್ರಣಯಮೂರ್ತಿ ಹಾಗೂ ಶಿವಮೊಗ್ಗ ಮೂಲದ ಕಲಾವಿದ ಹರ್ಷ ಇನ್ನು ಅನೇಕರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತಿಚಿಗಷ್ಟೆ ಬಿಡುಗಡೆ ಆಗಿರುವ 'ಅಯ್ಯೋ ರಾಮ' ಚಿತ್ರದ ಟ್ರೇಲರ್ ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತಿದೆ.

  English summary
  Kannada Ayyo Ram movie is releasing on July 27th. Pradeep, Jahangir, Rockline Sudhakar, and many others have acted in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X