For Quick Alerts
  ALLOW NOTIFICATIONS  
  For Daily Alerts

  ವಿದ್ಯಾರ್ಥಿಗಳಿಗೆ ಉಚಿತ 'ಬಿತ್ರಿ' ಸಿನಿಮಾ ಟಿಕೆಟ್

  By Rajendra
  |

  ಈ ಹಿಂದೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಗಳನ್ನು ವಿತರಿಸಲಾಗಿತ್ತು. ಈಗ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'B3' ಚಿತ್ರಕ್ಕೂ ವಿದ್ಯಾರ್ಥಿಗಳಿಗೆ ಉಚಿತ ಟಿಕೆಟ್ ಗಳನ್ನು ನೀಡಲಾಗುತ್ತಿದೆ.

  ಸೋಮವಾರದಿಂದ ಗುರುವಾರದ (ಡಿಸೆಂಬರ್ 9ರಿಂದ 12) ತನಕ ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಬರುವ ಮೊದಲ ಐವತ್ತು ವಿದ್ಯಾರ್ಥಿಗಳಿಗೆ ಈ ಅವಕಾಶ ನೀಡಲಾಗಿದೆ. ಉಳಿದ ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಶೇ.50ರ ರಿಯಾಯಿತಿ ದರದಲ್ಲಿ ಟಿಕೆಟ್ ಪಡೆಯಬಹುದು. [ತುಟಿಗೆ ತುಟಿ ಬೆರೆಸಿದ 'ಬಿತ್ರಿ' ಹರ್ಷಿಕಾ ಪೂಣಚ್ಚ]

  ಚಿತ್ರದ ನಾಯಕಿ ಹರ್ಷಿಕಾ ಪೂಣಚ್ಚ ಅವರು ಈ ಬಗ್ಗೆ ಸಾಕಷ್ಟು ಪ್ರಚಾರವನ್ನೂ ಮಾಡುತ್ತಿದ್ದಾರೆ. ಉಚಿತ ಟಿಕೆಟ್ ಜೊತೆಗೆ ಸರ್ ಪ್ರೈಸ್ ಗಿಫ್ಟ್ ಸಹ ಉಂಟಂತೆ. ಕಾಲೇಜಿಗೆ ಚಕ್ಕರ್ ಹೊಡೆದರೆ ನಾವು ಜವಾಬ್ದಾರರಲ್ಲ ಎಂದು ಚಿತ್ರತಂಡ ಹೇಳಿದೆ.

  ಘನಶ್ಯಾಮ್ ನಿರ್ದೇಶಿಸಿರುವ ಈ ಚಿತ್ರದ ಅಡಿಬರಹ 'ಲವ್ ಯು' ಎಂಬುದು. ಒಲವೇ ಮಂದಾರ ಖ್ಯಾತಿಯ ಶ್ರೀಕಿ ಆಲಿಯಾಸ್ ಶ್ರೀಕಾಂತ್ ಚಿತ್ರದ ನಾಯಕ. ಗೋವಿಂದರಾಜು ಮತ್ತು ಬಸವರಾಜು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಸಿಳೀನ್.

  "ಚಿತ್ರದಲ್ಲಿ ಯುವಕರಿಗೆ ಒಳ್ಳೆಯ ಸಂದೇಶವಿದೆ. ಚಿತ್ರ ನೋಡಿದ ಮೇಲೆ ಪ್ರೇಕ್ಷಕರಿಗೆ ಅದು ಅರ್ಥವಾಗುತ್ತದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ತಮ್ಮ ಗರ್ಲ್ ಫ್ರೆಂಡ್ ಗಳನ್ನು ನೆನಪಿಸಿಕೊಳ್ಳುತ್ತಾರೆ" ಎಂದು ಚಿತ್ರತಂಡ 'ಬಿತ್ರಿ' ಚಿತ್ರದ ಬಗ್ಗೆ ಹೇಳಿಕೊಂಡಿದೆ. (ಏಜೆನ್ಸೀಸ್)

  English summary
  College students will get free entry to Kannada movie B3. The first 50 students coming to watch the film in Nartaki theatre will get free entry. Others who show their ID cards will get discounts up to 50 per cent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X