'ಮಫ್ತಿ' ಟ್ರೈಲರ್ ಗೆ ಸ್ಟಾರ್ ನಟರು ಫಿದಾ.! ಯಾರು ಏನಂದ್ರು?

By Bharath Kumar

Recommended Video

ಮಫ್ತಿ ಸಿನಿಮಾದ ಟ್ರೈಲರ್ ಗೆ ಫಿದಾ ಆದ ಸೆಲೆಬ್ರಿಟಿಗಳು | Filmibeat Kannada

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಇದೇ ಮೊದಲ ಸಲ ಶಿವಣ್ಣ ಮತ್ತು ಶ್ರೀಮುರಳಿ ಒಟ್ಟಿಗೆ ಅಭಿನಯಿಸಿದ್ದು, ಈ ಇಬ್ಬರ ಜುಗಲ್ ಬಂದಿ ಕಂಡು ಸ್ಯಾಂಡಲ್ ವುಡ್ ಸ್ಟಾರ್ಸ್ ಫುಲ್ ಫಿದಾ ಆಗಿದ್ದಾರೆ. ಬಹುದೊಡ್ಡ ತಾರಬಳಗ ಹೊಂದಿರುವ ಈ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ನಾಯಕಿ ಆಗಿ ಮಿಂಚಿದ್ದಾರೆ.

ಹಾಗಿದ್ರೆ, ಮಫ್ತಿ ಟ್ರೈಲರ್ ನೋಡಿ ಯಾವ ಯಾವ ನಟರು ಏನಂದ್ರು ಎಂಬುದನ್ನ ತಿಳಿಯಲು ಮುಂದೆ ಓದಿ....

ಚಿರು ಸರ್ಜಾ ಖುಷ್

ಚಿರು ಸರ್ಜಾ ಖುಷ್

'ಮಫ್ತಿ' ಟ್ರೈಲರ್ ನೋಡಿ ಖುಷಿಯಾಗಿರುವ ಚಿರಂಜೀವಿ ಸರ್ಜಾ ''ಟ್ರೈಲರ್ ನಲ್ಲಿ ಮೂಡಿ ಬಂದಿರುವ ಹಿನ್ನೆಲೆ ಧ್ವನಿಗೆ ಫುಲ್ ಫಿದಾ ಆಗಿದ್ದಾರೆ''.

ಡ್ಯಾನಿಶ್ ಸೇಠ್

ಡ್ಯಾನಿಶ್ ಸೇಠ್

ಶ್ರೀಮುರಳಿ, ಶಾನ್ವಿ ಶ್ರೀವಸ್ತವ್ ಮತ್ತು ಶಿವಣ್ಣ ಅಭಿನಯದ 'ಮಫ್ತಿ' ಟ್ರೈಲರ್ ಗೆ ಡ್ಯಾನಿಶ್ ಸೇಠ್ ಬೋಲ್ಡ್ ಆಗಿದ್ದಾರೆ.

ಗಣೇಶ್ ಫುಲ್ ಮಾರ್ಕ್ಸ್

ಗಣೇಶ್ ಫುಲ್ ಮಾರ್ಕ್ಸ್

'ಮಫ್ತಿ' ಟ್ರೈಲರ್ ನೋಡಿದ ಗೋಲ್ಡನ್ ಸ್ಟಾರ್ ಗಣೇಶ್, ಶಿವಣ್ಣ ಮತ್ತು ಶ್ರೀಮುರಳಿ ಜಬರ್ ದಸ್ತ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಅನೂಪ್ ಭಂಡಾರಿ ಅಚ್ಚರಿ

ಅನೂಪ್ ಭಂಡಾರಿ ಅಚ್ಚರಿ

'ಮಫ್ತಿ' ಟ್ರೈಲರ್ ನೋಡಿ ನಟ ಅನೂಪ್ ಭಂಡಾರಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಲುಕ್ ಗೆ ಚಿಂದಿ ಚಿತ್ರನ್ನಾ ಎಂದಿದ್ದಾರೆ. ಶ್ರೀಮುರಳಿ ಲುಕ್ ಕೂಡ ನೋಡಿ ಬೆರಗುಗೊಂಡಿದ್ದಾರೆ.

ರಾಹುಲ್ ಮೆಚ್ಚುಗೆ

ರಾಹುಲ್ ಮೆಚ್ಚುಗೆ

ಶಿವಣ್ಣ ಮತ್ತು ಶ್ರೀಮುರಳಿ ಜುಗಲ್ ಬಂದಿ ನೋಡಿ ನಟ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕ ಕಾರ್ತಿಕ್ ಗೌಡ

ನಿರ್ಮಾಪಕ ಕಾರ್ತಿಕ್ ಗೌಡ

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನ ನಿರ್ಮಾಪಕ ಕಾರ್ತಿಕ್ ಗೌಡ ಅವರು 'ಮಫ್ತಿ' ಟ್ರೈಲರ್ ನೋಡಿ ಖುಷಿ ಹಂಚಿಕೊಂಡಿದ್ದಾರೆ.

ತಮಿಳು ವಿಮರ್ಶಕ

ತಮಿಳು ವಿಮರ್ಶಕ

ಸಾಮಾಜಿಕ ಜಾಲತಾಣದ ವಿಮರ್ಶಕ ರಮೇಶ್ ಬಾಲ ಅವರು ಕೂಡ ಕನ್ನಡದ ಮಫ್ತಿಗೆ ಫಿದಾ ಆಗಿದ್ದಾರೆ. ರಮೇಶ್ ಬಾಲ ಅವರು ಮೂಲತಃ ತಮಿಳುನಾಡಿನವರಾಗಿದ್ದು, ಹಿಂದಿ, ತೆಲುಗು, ಮಲಯಾಳಂ ಚಿತ್ರಗಳ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಾರೆ.

More from Filmibeat

English summary
Kannada Celebrities are appreciate to the Mufti Trailer. The movie features Shiva Rajkumar and Srimurali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X