ಡಾ ರಾಜ್ ಮೊಮ್ಮಗನ ಆರತಕ್ಷತೆಯಲ್ಲಿ ಕಾಣಿಸಿಕೊಂಡ ಸರ್ಪ್ರೈಸ್ ಅತಿಥಿಗಳು
ವರನಟ ಡಾ ರಾಜ್ ಕುಮಾರ್ ಅವರ ಮೊಮ್ಮಗ, ನಟ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಯುವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು. ಶ್ರೀದೇವಿ ಬೈರಪ್ಪ ಅವರ ಜೊತೆ ಸಪ್ತಪದಿ ತುಳಿದ ರಾಜ್ ಮೊಮ್ಮಗನಿಗೆ ಇಡೀ ಸ್ಯಾಂಡಲ್ ವುಡ್ ತಾರೆಯರು ಆರ್ಶೀವಾದ ಮಾಡಿದ್ದಾರೆ.
ಯುವರಾಜನ ಮದುವೆ ಸಂಭ್ರಮದಲ್ಲಿ ಇಡೀ ರಾಜ್ ಕುಟುಂಬ ಭಾಗಿಯಾಗಿತ್ತು. ಶಿವರಾಜ್ ಕುಮಾರ್ ದಂಪತಿ, ಪುನೀತ್ ರಾಜ್ ಕುಮಾರ್ ದಂಪತಿ, ರಾಜ್ ಕುಮಾರ್ ಅವರ ಹೆಣ್ಣು ಮಕ್ಕಳು ಹಾಗೂ ಅವರ ಮಕ್ಕಳು, ನಟ ಶ್ರೀಮುರಳಿ ದಂಪತಿ ಎಲ್ಲರೂ ಭಾಗವಹಿಸಿದ್ದರು.
ತೆಲುಗು ಚಿರಂಜೀವಿ, ಕ್ರೇಜಿಸ್ಟಾರ್ ರವಿಚಂದ್ರನ್, ಯಶ್, ಹರಿಪ್ರಿಯಾ, ಜಗ್ಗೇಶ್, ರಚಿತಾ ರಾಮ್, ರಶ್ಮಿಕಾ ಮಂದಣ್ಣ ಸೇರಿದಂತೆ ಚಂದನವನದ ಹಲವು ಸ್ಟಾರ್ ಕಲಾವಿದರು ನವಜೋಡಿಗೆ ಶುಭಹಾರೈಸಿದ್ದಾರೆ. ಹಾಗಿದ್ರೆ, ಯುವರಾಜನ ಆರತಕ್ಷತೆಯಲ್ಲಿ ಯಾವೆಲ್ಲ ಅತಿಥಿಗಳು ಕಾಣಿಸಿಕೊಂಡರು? ಮುಂದೆ ಓದಿ....

ಮೆಗಾಸ್ಟಾರ್ ಚಿರಂಜೀವಿ
ಅಣ್ಣಾವ್ರ ಕುಟುಂಬದ ಜೊತೆ ಬಹಳ ಹಿಂದಿನಿಂದಲೂ ಒಡನಾಟ ಹೊಂದಿರುವ ತೆಲುಗು ನಟ ಚಿರಂಜೀವಿ ಯುವರಾಜ್ ಕುಮಾರ್ ಅವರ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಪತ್ನಿ ಸುರೇಖ ಅವರ ಜೊತೆ ದಂಪತಿ ಸಮೇತ ಆಗಮನಿಸಿ ರಾಜ್ ಮೊಮ್ಮಗನಿಗೆ ಶುಭಕೋರಿದರು.

ಯಶ್ ಮತ್ತು ಉಪೇಂದ್ರ ದಂಪತಿ
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಯುವರಾಜ್ ಕುಮಾರ್ ರಿಸಪ್ಷನ್ ನಲ್ಲಿ ಭಾಗಿಯಾಗಿದ್ದರು. ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಕಾಣಿಸಿಕೊಂಡರು.

ಹರಿಪ್ರಿಯಾ ಮತ್ತು ರಶ್ಮಿಕಾ, ರಚಿತಾ
ಕನ್ನಡದ ಯುವ ನಟಿ ಹರಿಪ್ರಿಯಾ ಮತ್ತು ರಶ್ಮಿಕಾ ಮಂದಣ್ಣ ರಾಜ್ ಮೊಮ್ಮಗನ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಯುವರಾಜ್ ಕುಮಾರ್ ರಿಸಪ್ಷನ್ ನಲ್ಲಿ ಕಾಣಿಸಿಕೊಂಡು ನವಜೋಡಿಗೆ ವಿಶ್ ಮಾಡಿದರು.

ಕ್ರೇಜಿಸ್ಟಾರ್ ಫ್ಯಾಮಿಲಿ
ರವಿಚಂದ್ರನ್ ಮನೆಯಲ್ಲಿ ಮಗಳು ಗೀತಾಂಜಲಿ ಮದುವೆ ಸಂಭ್ರಮ ಕೂಡ ನಡೆಯುತ್ತಿದೆ. ಸಮಯ ಬಿಡುವು ಮಾಡಿಕೊಂಡು ರವಿಚಂದ್ರನ್ ಮತ್ತು ಮಕ್ಕಳಾದ ವಿಕ್ರಂ, ಮನೋರಂಜನ್ ದೊಡ್ಮನೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ನೂತನ ಸಂಸದೆ ಸುಮಲತಾ
ಮಂಡ್ಯ ಲೋಕಸಭೆ ಕ್ಷೇತ್ರದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಅಂಬರೀಶ್ ಪತ್ನಿ ಸುಮಲತಾ ಅವರು ಕೂಡ ಯುವರಾಜ್ ಕುಮಾರ್ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿ ನವಜೋಡಿಗೆ ಆರ್ಶೀವಾದ ಮಾಡಿದರು. ರಾಕ್ ಲೈನ್ ವೆಂಕಟೇಶ್ ಮತ್ತು ಗುರುಕಿರಣ್ ಕೂಡ ಹೋಗಿದ್ದರು.

ಚಿರು-ಮೇಘನಾ ದಂಪತಿ
ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಮೇಘನ ರಾಜ್ ದಂಪತಿ ನೂತನ ಜೋಡಿಗೆ ಶುಭಕೋರಿದರು. ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಕೂಡ ಆರತಕ್ಷತೆಯಲ್ಲಿ ಕಾಣಿಸಿಕೊಂಡರು.

ಜಗ್ಗೇಶ್-ದ್ವಾರಕೀಶ್
ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಮತ್ತು ಅವರ ಮಗ ಯೋಗಿ ದ್ವಾರಕೀಶ್ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ನಟ ಜಗ್ಗೇಶ್, ಸಂಗೀತ ನಿರ್ದೇಶಕ ಹಂಸಲೇಖ, ಖಳನಟ ರವಿಶಂಕರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಹೆಬ್ಬುಲಿ ಕೃಷ್ಣ, ಮದರಂಗಿ ಕೃಷ್ಣ ಕೂಡ ಆರತಕ್ಷತೆಯಲ್ಲಿ ಕಾಣಿಸಿಕೊಂಡರು.


Click it and Unblock the Notifications











