»   » ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.!

ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.!

Posted By:
Subscribe to Filmibeat Kannada
ಬೆಳ್ಳಿ ತೆರೆ ಮೇಲೆ ಮಿಂಚಲು ಬರ್ತಿದ್ದಾರೆ ಸ್ಟಾರ್ ನಂತರ ಮಕ್ಕಳು | Filmibeat Kannada

ಸ್ಯಾಂಡಲ್ ವುಡ್ ನಲ್ಲೀಗ ದರ್ಶನ್, ಸುದೀಪ್, ಪುನೀತ್, ಗಣೇಶ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ನಟ-ನಟಿಯರದ್ದೇ ಟ್ರೆಂಡ್.

ಇವರ ನಂತರ ಮತ್ತಷ್ಟು ಯುವ ನಟ-ನಟಿಯರು ಚಂದನವನದಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಹೀಗಿರುವಾಗ, ಕನ್ನಡದ ಸ್ಟಾರ್ ನಟರು ಮಕ್ಕಳು ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಿದ್ದವಾಗುತ್ತಿದ್ದಾರೆ.

ಈಗಿನಿಂದಲೇ ಬಣ್ಣದ ಲೋಕದ ಜೊತೆ ನಂಟು ಬೆಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕನ್ನಡದ ಟಾಪ್ ನಟರ ಮಕ್ಕಳು ಈಗಾಗಲೇ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹಾಗಿದ್ರೆ, ಯಾವೆಲ್ಲಾ ಸ್ಟಾರ್ ನಟರ ಮಕ್ಕಳು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಮುಂದೆ ನೀಡಲಾಗಿದೆ ನೋಡಿ.....

ಅಮ್ಮನ ಜೊತೆ ಮಗಳು

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಮುದ್ದು ಮಗಳು ಐಶ್ಚರ್ಯ ಅಮ್ಮನ ಜೊತೆ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಅಭಿನಯಿಸುತ್ತಿರುವ 'ಹೌರಾ ಬ್ರಿಡ್ಜ್' ಚಿತ್ರದಲ್ಲಿ ಪ್ರಿಯಾಂಕಾ ಅವರ ಮಗಳ ಪಾತ್ರದಲ್ಲಿ ಐಶ್ವರ್ಯ ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನ 'ಮಮ್ಮಿ ಸೇವ್ ಮಿ' ಖ್ಯಾತಿಯ ಲೋಹಿತ್ ನಿರ್ದೇಶನ ಮಾಡಿದ್ದು, ಚಿತ್ರೀಕರಣ ನಡೆಯುತ್ತಿದೆ.

ಅಪ್ಪ-ಅಮ್ಮನಂತೆ ಸಿನಿಲೋಕಕ್ಕೆ ಕಾಲಿಟ್ಟ ಉಪೇಂದ್ರ ಮುದ್ದಿನ ಮಗಳು

ಗಣಿ ಜೊತೆ ಚಾರಿತ್ರ್ಯ

ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಮಗಳು ಚಾರಿತ್ರ್ಯ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಚಿತ್ರದಲ್ಲಿ ಚಾರಿತ್ಯ್ರ ಸಣ್ಣದೊಂದು ಪಾತ್ರ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಜಿಗಿದಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಅಪ್ಪನ ಹಾಗೆ 'ಚಮಕ್' ನೀಡಲು ಚಿತ್ರರಂಗಕ್ಕೆ ಬಂದ ಚಾರಿತ್ರ್ಯ

ಪ್ರೇಮ್ ಮಗನ ಸಿನಿಮಾ

ಲವ್ಲಿ ಸ್ಟಾರ್ ಪ್ರೇಮ್ ಅವರ ಮಗ ಏಕಾಂತ್ ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪರಮೇಶ್ ನಿರ್ದೇಶನದ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ನಟಿಸಿದ್ದರು. ಮನೋರಂಜನ್ ಮತ್ತು ಶಾನ್ವಿ ಶ್ರೀವಾಸ್ತವ ನಟನೆಯ 'ಸಾಹೇಬ' ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಇದೀಗ, 'ರಾಮರಾಜ್ಯ-ಗಾಂಧಿ ತಾತನ ಕನಸು' ಎಂಬ ಮಕ್ಕಳ ಚಿತ್ರದಲ್ಲಿ ಏಕಾಂತ್ ನಟಿಸುತ್ತಿದ್ದಾರೆ.

'ರಾಮರಾಜ್ಯ'ದೆಡೆಗೆ ಲವ್ಲಿ ಸ್ಟಾರ್ ಪ್ರೇಮ್ ಮಗನ ಪಯಣ

ಚಾಲೆಂಜಿಂಗ್ ಸ್ಟಾರ್ ಪುತ್ರ

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪತ್ರ ವಿನೀಶ್ ಈ ಹಿಂದೆ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಜೂ.ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ ವಿಜಯಲಕ್ಷ್ಮಿ.!

ಶ್ರೀನಗರ ಕಿಟ್ಟಿ ಮಗಳು

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮತ್ತು ಭಾವನಾ ದಂಪತಿಯ ಮುದ್ದು ಮಗಳು ಪರಿಣಿತಾ ಕೂಡ ಚಂದನವನದಲ್ಲಿ ಮಿಂಚಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಮಾಸ್ ಲೀಡರ್' ಚಿತ್ರದಲ್ಲಿ ಶಿವಣ್ಣನ ಮಗಳ ಪಾತ್ರದಲ್ಲಿ ಮೋಡಿ ಮಾಡಿದ್ದರು.

'ಈ' ಮುದ್ದು ಹುಡುಗಿ ಶಿವಣ್ಣನ ಮಗಳು, ಯಾರೀ ಪುಟಾಣಿ.?

ದುನಿಯಾ ವಿಜಯ್ ಮಗ

ಈಗ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಅಪ್ಪನ ಜೊತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ವಿಜಿ ಅಭಿನಯಿಸಲಿರುವ 'ಕುಸ್ತಿ' ಚಿತ್ರದ ಮೂಲಕ ಸಮ್ರಾಟ್ ಕೂಡ ಚಿತ್ರರಂಗ ಪ್ರವೇಶ ಮಾಡಲಿದ್ದಾರಂತೆ. ಈ ಮೂಲಕ ಕನ್ನಡದ ತೆರೆಮೇಲೆ ಮತ್ತೊಬ್ಬ ಸ್ಟಾರ್ ನಟನ ಕುಡಿ ಮಿಂಚಲು ತಯಾರಾಗಿದ್ದಾರೆ.

ಅಪ್ಪನ ರೀತಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ದುನಿಯಾ ವಿಜಯ್ ಪುತ್ರ

English summary
Which Kannada Celebrities Childrens are acting in Kannada Movies?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X