For Quick Alerts
  ALLOW NOTIFICATIONS  
  For Daily Alerts

  ಮರೆಯಾದ 'ಸುದರ್ಶನ'ನಿಗೆ ಕಂಬನಿ ಮಿಡಿದ ಕಲಾವಿದರು

  By Bharath Kumar
  |

  ಕನ್ನಡದ ಹಿರಿಯ ನಟ ಆರ್.ಎನ್.ಸುದರ್ಶನ್ ಅವರು ಇನ್ನು ನೆನಪು ಮಾತ್ರ. ಸುಮಾರು 6 ದಶಕಗಳಿಂದ ಕನ್ನಡ ಚಿತ್ರಪ್ರೇಮಿಗಳನ್ನ ರಂಜಿಸುತ್ತಾ ಕನ್ನಡಿಗರ ಮನದಲ್ಲಿ ಜಾಗ ಪಡೆದುಕೊಂಡಿದ್ದ 'ವಿಜಯನಗರದ ವೀರಪುತ್ರ' ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅಪಾರ ಕೀರ್ತಿ ಗಳಿಸಿಕೊಂಡಿದ್ದರು.

  ನಟ, ಕಂಠದಾನ ಕಲಾವಿದ, ನಿರ್ಮಾಪಕ, ಗಾಯಕನಾಗಿ ಸ್ಯಾಂಡಲ್ ವುಡ್ ಗೆ ಇವರ ಸೇವೆ ಅಪಾರ. ಈ ಸೇವೆಗೆ ಕನಾರ್ಟಕ ಸರ್ಕಾರ, ಕನ್ನಡ ಚಲನಚಿತ್ರರಂಗ ಕನಿಷ್ಠ ಗೌರವ ನೀಡಬೇಕಾಗಿರುವುದು ಧರ್ಮ ಮತ್ತು ಕರ್ತವ್ಯ ಕೂಡ.

  ಸುದರ್ಶನ್ ಅವರಿಗೆ ಸಂತಾಪ ಸೂಚಿಸಿದ ನಟಿ ಜಯಮಾಲ'' ಸುದರ್ಶನ್ ಅವರ ಸಾವು ನನಗೆ ತುಂಬ ದುಃಖ ತಂದಿದೆ. ಅವರು ಚೆನ್ನೈನಲ್ಲಿದ್ದರು, ಅವರು ಮರಳಿ ನಮ್ಮ ನಾಡಿಗೆ ಬಂದರು. 'ಸತಿ ಸಲೋಚನ' ಚಿತ್ರಕ್ಕೆ ಕೊಡುಗೆ ನೀಡಿದವರಿಗೆ ಗೌರವಿಸಬೇಕು. ಸಿನಿಮಾ ಎನ್ನುವುದು ನಮ್ಮ ಕುಟುಂಬ'' ಎಂದಿದ್ದಾರೆ.

  Kannada Celebrities Condolence towards sudarshan death

  ಇನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ ''ಅವರ ಇಡೀ ಕುಟುಂಬ ಸಿನಿಮಾರಂಗಕ್ಕೆ ದಶಕಗಳ ಕಾಲ ಸೇವೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಹಿರಿಯ ಕಲಾವಿದರಾಗಿದ್ದರೂ, ತುಂಬ ಶ್ರದ್ಧೆಯಿಂದ ಬದುಕಿದ್ದವರು. ಸರ್ಕಾರ ಮತ್ತು ಉದ್ಯಮಿ ಅವರಿಗೆ ಗೌರವ ನೀಡಬೇಕು'' ಎಂದು ಬೇಸರ ವ್ಯಕ್ತಪಡಿಸಿದರು.

  ಇನ್ನು ಜಗ್ಗೇಶ್ ಅವರು ಟ್ವೀಟ್ ಮಾಡಿ ಸುದರ್ಶನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

  ಹಿರಿಯ ನಟ ಶಿವರಾಂ ಮಾತನಾಡಿ ''60 ವರ್ಷ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಅವರ ಕುಟುಂಬ ಪೂರ್ತಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಇವರ ಸೇವೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ'' ಎಂದು ಸ್ನೇಹಿತನನ್ನ ನೆನೆಸಿಕೊಂಡರು.

  English summary
  Kannada Celebrities have expressed Condolence towards death of Senior Actor Sudarshan

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X