For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ 69ನೇ ಹುಟ್ಟುಹಬ್ಬ: ಅಪ್ಪಾಜಿ ನೆನೆದ ಸುದೀಪ್-ದರ್ಶನ್

  |

  ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದಿಂದ ಹಲವರು ಶುಭಕೋರಿದ್ದಾರೆ. ಡಾ ರಾಜ್, ಡಾ ವಿಷ್ಣು ಬಳಿಕ ಚಿತ್ರರಂಗಕ್ಕೆ ದೊಡ್ಡಣ್ಣನಂತಿದ್ದ ಅಂಬರೀಶ್ 2018ರ ನವೆಂಬರ್‌ನಲ್ಲಿ ವಿಧಿವಶರಾದರು. ರೆಬೆಲ್ ಸ್ಟಾರ್ ಇಲ್ಲದೇ ಮೂರನೇ ಹುಟ್ಟುಹಬ್ಬ ಇದಾಗಿದ್ದು, ಆಪ್ತರು, ಅಭಿಮಾನಿಗಳನ್ನು ತಮ್ಮ ನಾಯಕನನ್ನು ನೆನೆಪು ಮಾಡಿಕೊಂಡಿದ್ದಾರೆ.

  Ambareesh ಗೆ 69ನೇ ಹುಟ್ಟುಹಬ್ಬ: ಅಂಬಿಯ ನೆನಪು ಹಂಚಿಕೊಂಡ ದಚ್ಚು,Kichcha | Filmibeat Kannada

  ಅಂಬರೀಶ್‌ಗೆ ದೊಡ್ಡ ಮಗನಂತಿದ್ದ ದರ್ಶನ್, ಅಂಬಿಯ ಆಪ್ತ ಸುದೀಪ್, ಮಗ ಅಭಿಷೇಕ್ ಅಂಬರೀಶ್, ಪವನ್ ಪಡೆಯರ್, ಸಿಂಪಲ್ ಸುನಿ, ನಿರ್ದೇಶಕ ರಘುರಾಮ್ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ಮಂಡ್ಯದ ಗಂಡಿನ ಜನುಮದಿನಕ್ಕೆ ಶುಭಕೋರಿದರು. ಯಾರು ಏನೆಂದು ವಿಶ್ ಮಾಡಿದ್ದಾರೆ? ಮುಂದೆ ಓದಿ.....

  ಅಂಬಿ ಹುಟ್ಟುಹಬ್ಬ: ಸುಮಲತಾ, ಅಭಿಷೇಕ್‌ರಿಂದ ಸಮಾಧಿಗೆ ಪೂಜೆ, ಮಂಡ್ಯಕ್ಕೆ ಪಯಣಅಂಬಿ ಹುಟ್ಟುಹಬ್ಬ: ಸುಮಲತಾ, ಅಭಿಷೇಕ್‌ರಿಂದ ಸಮಾಧಿಗೆ ಪೂಜೆ, ಮಂಡ್ಯಕ್ಕೆ ಪಯಣ

  ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ

  ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ

  ''ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು'' ಎಂದು ದರ್ಶನ್ ಶುಭಕೋರಿದರು.

  ಮಿಸ್ ಮಾಡುತ್ತಿದ್ದೇವೆ ಮಾಮ

  ಮಿಸ್ ಮಾಡುತ್ತಿದ್ದೇವೆ ಮಾಮ

  ರೆಬೆಲೆ ಸ್ಟಾರ್‌ ಅಂಬರೀಶ್‌ರ ಫೋಟೋಗಳನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್ ''ನಿಮ್ಮನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂಬಿ ಮಾಮ'' ಎಂದು ಟ್ವೀಟ್ ಮಾಡಿ ಸ್ಮರಿಸಿಕೊಂಡಿದ್ದಾರೆ.

  ಅಂಬರೀಶ್ ಹುಟ್ಟುಹಬ್ಬ: ಅಭಿಮಾನಿಗಳ ಮನದಲ್ಲಿ ಅಂಬಿ ಅಮರಅಂಬರೀಶ್ ಹುಟ್ಟುಹಬ್ಬ: ಅಭಿಮಾನಿಗಳ ಮನದಲ್ಲಿ ಅಂಬಿ ಅಮರ

  'ಅಂಬಿ 69..' ಸುಮಲತಾ ಭಾವುಕ

  'ಅಂಬಿ 69..' ಸುಮಲತಾ ಭಾವುಕ

  ''ಅಜರಾಮರ ನೆನಪುಗಳು, ಚಿರಂತನ ಚೈತನ್ಯ, ಅಪಾರ ಅಕ್ಕರೆ, ಸಂಜೀವಿನಿ ಸ್ನೇಹ, ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸಿ ಹೃದಯವಂತಿಕೆ ಶಾಶ್ವತ ನಲ್ಮೆ, ಧನ್ಯ ಬದುಕು'' ಎಂದು ಸುಮಲತಾ ಅಂಬರೀಶ್ ಟ್ವೀಟ್ ಮೂಲಕ ಪತಿಯನ್ನು ಸ್ಮರಿಸಿದ್ದಾರೆ.

  ನಂಬಿಕೆ, ಪ್ರೀತಿಗೆ ಬ್ರ್ಯಾಂಡು

  ನಂಬಿಕೆ, ಪ್ರೀತಿಗೆ ಬ್ರ್ಯಾಂಡು

  ''ಕಡಲಿಗೆ ಒಂದು ಕೊನೆ ಇದೆ ಸ್ನೇಹಕ್ಕೆ ಎಲ್ಲಿದೆ ಎಂದ ಗಂಡಂದ್ರೆ ಗಂಡು ಧಾನಕ್ಕೆ ಧರ್ಮಕ್ಕೆ ನಂಬಿಕೆಗೆ ವಿಶ್ವಾಸಕ್ಕೆ ಪ್ರೀತಿಗೆ ಕರುಣೆಗೆ ಇವರೇ ಬಹು ದೊಡ್ಡ ಬ್ರ್ಯಾಂಡು..ಹುಟ್ಟು ಹಬ್ಬದ ಶುಭಾಶಯಗಳು to one & only ನಮ್ಮ ಮಂಡ್ಯದ ಗಂಡು..'' ಎಂದು ನಿರ್ದೇಶಕ ರಘುರಾಮ್ ಸ್ಮರಿಸಿದ್ದಾರೆ.

  ಹ್ಯಾಪಿ ಬರ್ತಡೇ ಲೆಜೆಂಡ್

  ಹ್ಯಾಪಿ ಬರ್ತಡೇ ಲೆಜೆಂಡ್

  ಅಪ್ಪನ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಂನಲ್ಲಿ ಶುಭಕೋರಿರುವ ಅಭಿಷೇಕ್ ''ಹ್ಯಾಪಿ ಬರ್ತಡೇ ಲೆಜೆಂಡ್'' ಎಂದು ಅಪ್ಪನ ಜೊತೆಗಿರುವ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

  ಅಂಬರೀಶಣ್ಣ ಅಮರ

  ಅಂಬರೀಶಣ್ಣ ಅಮರ

  ಅಂಬರೀಶಣ್ಣ ಅಮರ, ಅಜರಾಮರ ಎಂದು ನಿರ್ದೇಶಕ ಪವನ ಒಡೆಯರ್ ಶುಭಕೋರಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಹ ಅಂಬಿಗೆ ವಿಶ್ ಮಾಡಿದ್ದು, ''ಇಂದು "ರೆಬೆಲ್ ಸ್ಟಾರ್" ಅಂಬರೀಷ್ ರವರ ಜನ್ಮ ದಿನ... ಅವರ ನಟನೆ..ಕೆಲಸ.,ಮಾತು ..ನೆನಪು ಎಂದಿಗು ಮರೆಯೋಕೆ ಚಾನ್ಸೆ ಇಲ್ಲ... No way' ಎಂದಿದ್ದಾರೆ.

  English summary
  Kichcha Sudeep, Darshan, Abhishek, Raghuram Remembers Ambareesh on his 69th birth anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X