ಪ್ರೀತಿಯ ಅಂಬಿ ಬರ್ತಡೇಗೆ ಯಾರೆಲ್ಲ, ಹೇಗೆ ವಿಶ್ ಮಾಡಿದ್ದಾರೆ ನೋಡಿ

By Bharath Kumar

Recommended Video

ಅಂಬಿಯ 66ನೇ ಹುಟ್ಟುಹಬ್ಬಕ್ಕೆ ಯಾವ ಯಾವ ಸ್ಯಾಂಡಲ್ ವುಡ್ ಸ್ಟಾರ್ಸ್ ವಿಶ್ ಮಾಡುದ್ರು? | Filmibeat Kannada

ರೆಬಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್ ಅವರ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಅಂಬಿಯ ಅಭಿಮಾನಿ ಬಳಗದಲ್ಲಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಲೆಜೆಂಡ್ ಬರ್ತಡೇಯನ್ನ ಸೆಲೆಬ್ರೆಟ್ ಮಾಡ್ತಿದ್ದಾರೆ.

ನಿನ್ನೆ ರಾತ್ರಿಯಿಂದಲೇ ಅಂಬರೀಶ್ ಅವರ ಜೆಪಿ ನಗರದ ಅವರ ನಿವಾಸಕ್ಕೆ ಸಾಕಷ್ಟು ಅಭಿಮಾನಿಗಳು ಆಗಮಿಸಿ, ದೊಡ್ಡ ದೊಡ್ಡ ಕೇಕ್, ಹೂವಿನ ಹಾರ ತಂದು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಇನ್ನು ಫ್ಯಾನ್ಸ್ ತಂದ ಕೇಕ್ ಕಟ್ ಮಾಡಿ, ಅವರ ಜೊತೆ ಸೆಲ್ಫಿಗೆ ಫೋಸ್ ಕೊಟ್ಟು ರೆಬಲ್ ಸ್ಟಾರ್ ಕೂಡ ಖುಷಿ ಪಟ್ಟಿದ್ದಾರೆ. ಹಾಗಿದ್ರೆ, ಅಂಬಿ ಜನುಮದಿನಕ್ಕೆ ಯಾವೆಲ್ಲಾ ಸ್ಟಾರ್ ಗಳು ಶುಭಕೋರಿದರು, ಯಾರ್ ಯಾರು ಸರ್ಪ್ರೈಸ್ ಕೊಟಿದ್ದಾರೆ ಎಂದು ನೋಡೋಣ ಬನ್ನಿ....ಮುಂದೆ ಓದಿ...

ನಲ್ಮೆಯ ಅಂಬಿಗೆ ಶುಭಕೋರಿದ ಜಗ್ಗಣ್ಣನ

ರೆಬಲ್ ಸ್ಟಾರ್ ಅಂಬರೀಶ್ ಅವರಂದ್ರೆ ನವರಸ ನಾಯಕ ಜಗ್ಗೇಶ್ ಅವರಿಗೆ ಬಹಳ ಅಚ್ಚುಮೆಚ್ಚು. ಜಗ್ಗಣ್ಣನನ್ನ ಕಂಡ್ರೆ ಅಂಬಿಗೂ ಬಹಳ ಪ್ರೀತಿ ಮತ್ತು ಅಭಿಮಾನ. ಇವರಿಬ್ಬರ ಜೋಡಿಯಲ್ಲಿ ಹಲವು ಸಿನಿಮಾಗಳು ಕೂಡ ಮೂಡಿ ಬಂದಿದ್ವು. ನಿರೀಕ್ಷೆಯಂತೆ ಜಗ್ಗೇಶ್ ಅವರು ಅಂಬಿ ಬರ್ತಡೇಗೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.

'ರಾಕ್ ಸ್ಟಾರ್' ಅಂಬಿಗೆ ಚಿರು ವಿಶ್

ಅಂಬರೀಶ್ ಅವರನ್ನ ಇಷ್ಟ ಪಡುವ ಯುವ ನಟರಲ್ಲಿ ಚಿರಂಜೀವಿ ಸರ್ಜಾ ಕೂಡ ಪ್ರಮುಖರು. ಅಂಬಿಯನ್ನ ಪ್ರೀತಿಯಿಂದ 'ಮಾಮ' ಎಂದು ಕರೆಯುವ ಯುವ ಸಾಮ್ರಾಟ್ ತಮ್ಮ ಟ್ವಿಟ್ಟರ್ ಮೂಲಕ 'ಟ್ರೂ ರಾಕ್ ಸ್ಟಾರ್' ಅಂಬಿ ವಿಶ್ ಮಾಡಿದ್ದಾರೆ. ಚಿರು ಸರ್ಜಾ ಅಭಿನಯದ 'ವಾಯುಪುತ್ರ' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಅಭಿನಯಿಸಿದ್ದರು.

ಅಂಕಲ್ ಗೆ ಶುಭಕೋರಿದ ಮೇಘನಾ

ಚಿಕ್ಕವಯಸ್ಸಿನಿಂದಲೂ ಅಂಬರೀಶ್ ಅವರನ್ನ ನೋಡಿ ಬೆಳೆದಿರುವ ನಟಿ ಮೇಘನಾ ರಾಜ್ ''ಪ್ರೀತಿಯ ಅಂಕಲ್ ಗೆ'' ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ನಿರ್ದೇಶಕ ಸುನಿ ಟ್ವೀಟ್

ಕನ್ನಡದ ಯುವ ನಿರ್ದೇಶಕ ಸಿಂಪಲ್ ಸುನಿ ಲೆಜೆಂಡ್ ಕಲಾವಿದನಿಗೆ ಟ್ವಿಟ್ಟರ್ ಮೂಲಕ ಜನುಮದಿನದ ಶುಭಕೋರಿದ್ದಾರೆ. ನೂರು ವರ್ಷ ಸಂತೋಷವಾಗಿರಿ ಎಂದು ಆಶಿಸಿದ್ದಾರೆ.

ಡಿ ಬಾಸ್ ದರ್ಶನ್

ಪ್ರತಿವರ್ಷದಂತೆ ಈ ವರ್ಷವೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನೆಚ್ಚಿನ ಅಂಬಿ ಅಪ್ಪಾಜಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಜೊತೆಗೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ''ಎಷ್ಟೇ ವರ್ಷಗಳು ಕಳೆದರೂ ಸಹ ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್

ಇನ್ನು ಅಂಬರೀಶ್ ಅವರನ್ನ ಹೆಚ್ಚು ಇಷ್ಟ ಪಡುವ ಕಿಚ್ಚ ಸುದೀಪ್ ಕೂಡ ವಿಶ್ ಮಾಡಿದ್ದು, ಅಂಬರೀಶ್ ಅವರ ಬಗ್ಗೆ ಒಂದು ಅಭಿಮಾನದ ಪತ್ರವನ್ನೇ ಬರೆದುಬಿಟ್ಟಿದ್ದಾರೆ.

More from Filmibeat

English summary
Kannada Actor, Rebel Star Ambareesh celebrated his 66th birthday Today (May 30th) with his fans. and also Kannada Celebrities are wish to ambi's birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X