twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನ ಬೆಂಬಲಕ್ಕೆ ನಿಂತ ಕನ್ನಡ ನಟ-ನಟಿಯರು ಯಾರು?

    |

    'ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ' ಎಂಬ ಕಿಚ್ಚನ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ತಿರುಗೇಟು ನೀಡಿದ್ದರು. ಇಬ್ಬರೂ ಟ್ವೀಟ್ ಮೂಲಕವೇ ಏಟು-ಏದಿರೇಟು ನೀಡಿದ್ದರು. ಅಜಯ್ ದೇವಗನ್ ತಮ್ಮ ಟ್ವೀಟ್‌ನಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಆಗಿತ್ತು. ಮುಂದೆನೂ ಇರುತ್ತೆ ಎಂದು ಹೇಳಿದ್ದರು. ಅಜಯ್ ದೇವಗನ್ ನೀಡಿದ ಈ ಹೇಳಿಕೆ ಕೂಡ ಕನ್ನಡರನ್ನು ಕೆರಳಿಸಿದ್ದು, ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಖಂಡಿಸಿದ್ದಾರೆ.

    ಕಿಚ್ಚ ಸುದೀಪ್ ಹೇಳಿಕೆ ವಿವಾದಕ್ಕೆ ಸಿಲುಕುತ್ತಿದ್ದಂತೆ ಕನ್ನಡ ಚಿತ್ರರಂಗದ ನಟ-ನಟಿಯರು ಅಖಾಡಕ್ಕೆ ಇಳಿದಿದ್ದಾರೆ. ಸುದೀಪ್ ನೀಡಿದ ಹೇಳಿಕೆಗೆ ಬೆಂಬಲ ನೀಡಿದ್ದಾರೆ. ಮೋಹಕ ತಾರೆ ರಮ್ಯಾ, ನೀನಾಸಂ ಸತೀಶ್, ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಮನ್ಸೂರೆ ಸೇರಿದಂತೆ ಹಲವರು ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಅಜಯ್ ದೇವಗನ್‌ ಟ್ವೀಟ್‌ಗೆ ಸಿದ್ದರಾಮಯ್ಯ ಖಡಕ್ ಪ್ರತ್ಯುತ್ತರಅಜಯ್ ದೇವಗನ್‌ ಟ್ವೀಟ್‌ಗೆ ಸಿದ್ದರಾಮಯ್ಯ ಖಡಕ್ ಪ್ರತ್ಯುತ್ತರ

    ಕಿಚ್ಚ ಸುದೀಪ್‌ಗೆ ರಮ್ಯಾ ಬೆಂಬಲ

    " ಇಲ್ಲ.. ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ. ಅಜಯ್ ದೇವಗನ್ ಅವರೇ ನಿಮ್ಮ ಅಜ್ಞಾನ ವಿಸ್ಮಯವಾಗಿದೆ. ಅಜಯ್ ದೇವಗನ್ ಅವರೇ 'ಕೆಜಿಎಫ್', ಪುಷ್ಪ ಮತ್ತು RRR ಸಿನಿಮಾಗಳು ಹಿಂದಿ ಬೆಲ್ಟ್‌ಗಳಲ್ಲಿ ಉತ್ತಮ ಗಳಿಕೆ ಕಂಡಿದ್ದು ಅದ್ಭುತ ಎನಿಸಿದೆ. ಕಲೆಗೆ ಯಾವುದೇ ಭಾಷೆಯ ಅಡೆತಡೆಯಿಲ್ಲ. ದಯವಿಟ್ಟು ನಾವು ನಿಮ್ಮ ಸಿನಿಮಾ ಎಂಜಾಯ್ ಮಾಡುವಂತೆ ನೀವು ನಮ್ಮ ಸಿನಿಮಾವನ್ನು ಎಂಜಾಯ್ ಮಾಡಿ." ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

    ಅಜಯ್ ದೇವಗನ್-ಸುದೀಪ್ ಟ್ವಿಟರ್ ವಾರ್‌ಗೆ ಪ್ರತಿಕ್ರಿಯಿಸುತ್ತಾರಾ ರಾಕಿ ಭಾಯ್?ಅಜಯ್ ದೇವಗನ್-ಸುದೀಪ್ ಟ್ವಿಟರ್ ವಾರ್‌ಗೆ ಪ್ರತಿಕ್ರಿಯಿಸುತ್ತಾರಾ ರಾಕಿ ಭಾಯ್?

    Recommended Video

    ರಾಷ್ಟ್ರ ಭಾಷೆ ಹಿಂದಿ ಅಂತ ಎಲ್ಲಿದೆ ? | Sudeep | Sathish Ninasam | Ajay Devgn
    ಕಿಚ್ಚನಿಗೆ ನೀನಾಸಂ ಸತೀಶ್ ಬೆಂಬಲ

    ಕಿಚ್ಚನಿಗೆ ನೀನಾಸಂ ಸತೀಶ್ ಬೆಂಬಲ

    "ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ. ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ. ನಮ್ಮಂತೆ ನೀವು ನಮ್ಮನ್ನು, ನಮ್ಮ ಭಾಷೆಯನ್ನು ಗೌರವಿಸಿ. ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ. ಕಿಚ್ಚ ಸುದೀಪ್ ಸರ್ ನಿಮ್ಮ ಧ್ವನಿಗೆ ನಮ್ಮ ಧ್ವನಿ." ಎಂದು ನೀನಾಸಂ ಸತೀಶ್ ಎಂದು ಟ್ವೀಟ್ ಮಾಡಿದ್ದಾರೆ.

    ಹಿಂದಿ ವಿವಾದ: ಅಜಯ್ ಟ್ವೀಟ್‌ಗೆ ಸರಿಯಾದ ತಿರುಗೇಟು ನೀಡಿದ ಸುದೀಪ್ಹಿಂದಿ ವಿವಾದ: ಅಜಯ್ ಟ್ವೀಟ್‌ಗೆ ಸರಿಯಾದ ತಿರುಗೇಟು ನೀಡಿದ ಸುದೀಪ್

    ಶ್ರೀನಗರ ಕಿಟ್ಟಿ ಹೇಳಿದ್ದೇನು?

    " ಹಿಂದಿ ಯಾವಾಗಲೂ ನಮ್ಮ ರಾಷ್ಟ್ರೀಯ ಭಾಷೆ ಆಗಿರಲಿಲ್ಲ. ಅದೇ ಟ್ವೀಟ್" ಎಂದು ಕನ್ನಡದ ನಟ ಶ್ರೀನಗರ ಕಿಟ್ಟಿ ಖಡಕ್ ಆಗಿ ಟ್ವೀಟ್ ಮಾಡಿದ್ದು, ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ.

    ನಿರ್ದೇಶಕ ಮನ್ಸೂರೆ ಕೊಟ್ಟ ಕಾರಣವೇನು?

    ನಿರ್ದೇಶಕ ಮನ್ಸೂರೆ ಕೊಟ್ಟ ಕಾರಣವೇನು?

    "ಅಜಯ್ ದೇವಗನ್ ಅವರೇ ದಯವಿಟ್ಟು ಒಮ್ಮೆ ಗುಜರಾತ್ ಹೈಕೋರ್ಟಿನ ತೀರ್ಪನ್ನು ಓದಿ." ಎಂದು ನಿರ್ದೇಶಕ ಮನ್ಸೂರೆ ಟ್ವೀಟ್ ಮಾಡಿದ್ದಾರೆ. ಗುಜರಾತ್ ಹೈ ಕೋರ್ಟ್ ರಾಷ್ಟ್ರೀಯ ಭಾಷೆ ಹಿಂದಿ ಅಲ್ಲ ಎಂಬ ಬಗ್ಗೆ ನೀಡಿದ ತೀರ್ಪಿನ ಲಿಂಕ್ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ.

    ಸಿದ್ಧರಾಮಯ್ಯ ಖಡಕ್ ಟ್ವೀಟ್

    ಸಿದ್ಧರಾಮಯ್ಯ ಖಡಕ್ ಟ್ವೀಟ್

    "ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಅದರ ಬಗ್ಗೆ ಜನರು ಹೆಮ್ಮೆಪಡುತ್ತಾರೆ. ನಾನೊಬ್ಬ ಕನ್ನಡಿಗ ಎಂದು ಹೆಮ್ಮೆ ಪಡುತ್ತೇನೆ!!" ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿ ಕಿಚ್ಚ ಸುದೀಪ್‌ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

    English summary
    Kannada Celebs Support Sudeep on his statement on Hindi is no more national Language, Know More.
    Thursday, April 28, 2022, 16:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X