ಚಿತ್ರರಂಗದಿಂದ ದುನಿಯಾ ವಿಜಯ್ ಬಹಿಷ್ಕರಿಸಬೇಕು ಎಂದು ಒತ್ತಾಯ

ಪರಪ್ಪನ ಅಗ್ರಹಾರದಲ್ಲಿ ಇರುವ ದುನಿಯಾ ವಿಜಯ್ ಗೆ ಸಪ್ಟೆಂಬರ್ 26ರ ವರೆಗೆ ಜೈಲು ವಾಸ ಕಾಯಂ ಆಗಿದೆ. ಇತ್ತ ಚಿತ್ರರಂಗದಿಂದ ಅವರನ್ನು ಬಹಿಷ್ಕಾರ ಮಾಡಬೇಕು ಎಂಬ ಒತ್ತಾಯ ಜಾಸ್ತಿಯಾಗಿದೆ.

ನಿನ್ನೆ ದುನಿಯಾ ವಿಜಯ್ ಪ್ರಕರಣದ ಬಗ್ಗೆ ಮಾತನಾಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ''ಇದು ದುನಿಯಾ ವಿಜಯ್ ಅವರ ವೈಯಕ್ತಿಯ ವಿಚಾರ ಹೀಗಾಗಿ ಚಿತ್ರರಂಗದಿಂದ ಬಹಿಷ್ಕಾರ ಮಾಡಲು ಸಾಧ್ಯವಿಲ್ಲ ಎಂದಿದ್ದರು.

ಆದರೆ, ಇದೀಗ ಕನ್ನಡ ಚಳುವಳಿ ಒಕ್ಕೂಟ ದುನಿಯಾ ವಿಜಯ್ ವಿರುದ್ಧ ಫಿಲ್ಮ್ ಚೆಂಬರ್ ಗೆ ದೂರು ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾಮಾ ಹರೀಶ್ ಅವರಿಗೆ ಮನವಿ ಪತ್ರ ನೀಡಿದೆ. ಅದರಲ್ಲಿ ದುನಿಯಾ ವಿಜಯ್ ನನ್ನು ಚಿತ್ರರಂಗದಿಂದ ಹೊರಗೆ ಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ.

Kannada Chaluvali Okkuta lodges complaint against DuniyaVijay in KFCC

ಇದರೊಂದಿಗೆ ಕಿಡ್ಲಾಪ್ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ವಿರುದ್ಧ ನಿನ್ನೆ ಪಾನಿಪುರಿ ಕಿಟ್ಟಿ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು.

ಈ ಬಗ್ಗೆ ಮಾತನಾಡಿರುವ ಚಿನ್ನೇಗೌಡ ''ದುನಿಯಾ ವಿಜಿ ಪ್ರಕರಣ ಕೊರ್ಟ್ ನಲ್ಲಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದು ಅವರ ವೈಯಕ್ತಿಕ ವಿಚಾರ ಆಗಿರುವುದರಿಂದ ಚಿತ್ರರಂಗದಿಂದ ಬಹಿಷ್ಕಾರ ಸಾಧ್ಯವಿಲ್ಲ'' ಎಂದು ತಿಳಿಸಿದ್ದಾರೆ.

More from Filmibeat

English summary
Kannada Chaluvali Okkuta lodges complaint against actor Duniya Vijay in Karnataka Film Chamber.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X