twitter
    For Quick Alerts
    ALLOW NOTIFICATIONS  
    For Daily Alerts

    ಅನೂಪ್-ನಿರೂಪ್ ವಿರುದ್ಧ ಕನ್ನಡಿಗರ ಆಕ್ರೋಶ: ಕಲಕಿದ ನೆಟ್ಟಿಗರ ಹೃದಯ ಸಮುದ್ರ!

    By Harshitha
    |

    Recommended Video

    ಅನೂಪ್-ನಿರೂಪ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ | Filmibeat Kannada

    'ರಂಗಿತರಂಗ' ಎಂಬ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಮಾಡಿ ಕನ್ನಡ ಪ್ರೇಕ್ಷಕರ ಮನಗೆದ್ದ ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಇದೀಗ ವಿವಾದದ ಕೇಂದ್ರಬಿಂದು ಆಗಿದ್ದಾರೆ.

    ಆರ್.ಜೆ Rapid ರಶ್ಮಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ''ರಾಜರಥ ನೋಡಿಲ್ಲ ಅಂದ್ರೆ ಅಂತಹ ಪ್ರೇಕ್ಷಕ 'ಕಚಡ ನನ್ ಮಗ', 'ಕಚಡ ಲೋಫರ್ ನನ್ ಮಕ್ಳು' ಅಂತ ಭಂಡಾರಿ ಬ್ರದರ್ಸ್ ನೀಡಿರುವ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

    ಕನ್ನಡ ಸಿನಿ ಪ್ರೇಕ್ಷಕರಿಗೆ ಅನೂಪ್ ಹಾಗೂ ನಿರೂಪ್ 'ಕಚಡ', 'ಲೋಫರ್ಸ್' ಎಂಬ ಪದ ಬಳಕೆ ಮಾಡಿರುವುದರಿಂದ ನೆಟ್ಟಿಗರ ಹೃದಯ ಸಮುದ್ರ ಕಲಕಿದೆ. ಭಂಡಾರಿ ಸಹೋದರರ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

    ಅನೂಪ್ ಮತ್ತು ನಿರೂಪ್ ಬಾಯಿಂದ ಬಂದಿರುವ ಮಾತನ್ನ ಕೇಳಿ ಸಿಡಿದೆದ್ದ ನೆಟ್ಟಿಗರು ಫೇಸ್ ಬುಕ್ ನಲ್ಲಿ ಮಾಡಿರುವ ಕೆಲ ಆಯ್ದ ಕಾಮೆಂಟ್ ಗಳು ಇಲ್ಲಿವೆ. ನೋಡಿ...

    ಕನ್ನಡ ಪ್ರೇಕ್ಷಕರ ಹತ್ತಿರ ಆಟ ಆಡೋಕೆ ಬರಬೇಡಿ

    ಕನ್ನಡ ಪ್ರೇಕ್ಷಕರ ಹತ್ತಿರ ಆಟ ಆಡೋಕೆ ಬರಬೇಡಿ

    ''ಜನ ಒಂದು ಟೈಮ್ ನಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳನ್ನು ಬಿಟ್ಟು 'ರಂಗಿತರಂಗ'ಗೆ ಸಪೋರ್ಟ್ ಕೊಟ್ರು. ಸಿನಿಮಾ ಚೆನ್ನಾಗಿ ಇದ್ದರೆ ಸಪೋರ್ಟ್ ಮಾಡ್ತಾರೆ, ಇಲ್ಲ ಅಂದ್ರೆ ಕಿತ್ತು ಸೈಡಿಗೆ ಬಿಸಾಕ್ತಾರೆ. ಕನ್ನಡ ಪ್ರೇಕ್ಷಕರ ಹತ್ತಿರ ಆಟ ಆಡೋಕೆ ಬರಬೇಡಿ'' ಎಂದು ವರುಣ್ ಸಿಂಹ ಎಂಬುವರು ಕಾಮೆಂಟ್ ಮಾಡಿದ್ದಾರೆ.

    ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು' ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'

    ಕೆಂಡಕಾರುತ್ತಿರುವ ಪ್ರೇಕ್ಷಕರು

    ಕೆಂಡಕಾರುತ್ತಿರುವ ಪ್ರೇಕ್ಷಕರು

    ಭಂಡಾರಿ ಬ್ರದರ್ಸ್ ಆಡಿರುವ ಮಾತಿಗೆ ಕನ್ನಡ ಸಿನಿ ಪ್ರಿಯರು ಎಷ್ಟರ ಮಟ್ಟಿಗೆ ಕೆಂಡಕಾರುತ್ತಿದ್ದಾರೆ ಎಂಬುದಕ್ಕೆ ಈ ಕಾಮೆಂಟ್ ಸಾಕ್ಷಿ.

    ಜನರಿಗೆ ನೋವಾಗಿರುವುದು ಸತ್ಯ

    ಜನರಿಗೆ ನೋವಾಗಿರುವುದು ಸತ್ಯ

    ಪ್ರೇಕ್ಷಕರಿಗೆ 'ಕಚಡ' ಎಂಬ ಪದ ಬಳಕೆ ಮಾಡಿರುವುದು ಜನರಿಗೆ ನೋವು ತಂದಿದೆ. ಅದಕ್ಕೆ ಈ ಕಾಮೆಂಟ್ ಗಿಂತ ಉತ್ತಮ ಉದಾಹರಣೆ ಬೇಕಾ.?

    ಇದು ಸಂಸ್ಕಾರ ಅಲ್ಲ!

    ಇದು ಸಂಸ್ಕಾರ ಅಲ್ಲ!

    ''ಈ ರೀತಿ ಮಾತಾಡೋದು ಸಂಸ್ಕಾರ ಅಲ್ಲ. ನೋಡೋದು ಬಿಡೋದು ಪ್ರೇಕ್ಷಕರಿಗೆ ಬಿಟ್ಟಿದ್ದು. ಇದು ತುಂಬಾ ತಪ್ಪು'' ಎಂದು ಸುಧಿ ಗೌಡ ಎಂಬುವರು ಅಭಿಪ್ರಾಯ ಪಟ್ಟಿದ್ದಾರೆ.

    ಸಿನಿಮಾ ನೋಡದೇ ಕಚಡ ಆಗುವುದೇ ಲೇಸು!

    ಸಿನಿಮಾ ನೋಡದೇ ಕಚಡ ಆಗುವುದೇ ಲೇಸು!

    ''ಕನ್ನಡಿಗರನ್ನು ಕಚಡ ಎಂದ ಇಂತಹ ಮನಃಸ್ಥಿತಿಯ ಮನುಷ್ಯರ ಸಿನಿಮಾ ನೋಡುವುದಕ್ಕಿಂತ ಸಿನಿಮಾ ನೋಡದೆ ಕಚಡ ಆಗುವುದೇ ಲೇಸು ಅಲ್ವಾ. ಕೆಲವೊಂದು ಬಾರಿ ಸಮಯ ಮತ್ತು ಕೆಲಸದ ನಡುವೆ ಸಿನಿಮಾ ನೋಡಬೇಕು ಅಂದುಕೊಂಡು ನೋಡಲು ಆಗದೆ ಇರುವ ಲಕ್ಷ ಜನ ಇರ್ತಾರೆ. ಅವರೆಲ್ಲ ಇವರ ಪ್ರಕಾರ ಕಚಡಗಳು ಅಂತ ಆಯಿತು'' ಎಂದು ಕುಮಾರಸ್ವಾಮಿ ಎಂಬುವರು ಕಾಮೆಂಟ್ ಮಾಡಿದ್ದಾರೆ.

    ದೇವರು ಎಂದಿದ್ದ ಡಾ.ರಾಜ್

    ದೇವರು ಎಂದಿದ್ದ ಡಾ.ರಾಜ್

    ''ಪ್ರೇಕ್ಷಕರನ್ನ ದೇವರು ಎಂದು ಡಾ.ರಾಜ್ ಕುಮಾರ್ ಹೇಳಿದ್ದರು. ಪ್ರೇಕ್ಷಕರು ಇಲ್ಲದೆ ಸಿನಿಮಾ ಸಕ್ಸಸ್ ಆಗಲು ಸಾಧ್ಯವಿಲ್ಲ. ಹೀಗಿರುವಾಗ, ಇವರು ಪ್ರೇಕ್ಷಕರನ್ನ ನಿಂದಿಸಲು ಹೇಗೆ ಸಾಧ್ಯ.?'' - ಅಮೃತ ಸೂರ್ಯನಾರಾಯಣ

    ರಶ್ಮಿಗೂ ಮಂಗಳಾರತಿ

    ರಶ್ಮಿಗೂ ಮಂಗಳಾರತಿ

    ಅನೂಪ್ ಹಾಗೂ ನಿರೂಪ್ ಗೆ ಅಂತಹ ಪ್ರಶ್ನೆ ಕೇಳಿದ Rapid ರಶ್ಮಿಗೂ ನೆಟ್ಟಿಗರು ಮಹಾ ಮಂಗಳಾರತಿ ಮಾಡಿದ್ದಾರೆ.

    ಬೇಕು ಅಂತ ಹೇಳಿಲ್ಲ.!

    ಬೇಕು ಅಂತ ಹೇಳಿಲ್ಲ.!

    ''ತಮಾಷೆ ರೀತಿಯಲ್ಲಿ ಆಡಿರುವ ಮಾತು ಇದು. ಬೇಕು ಅಂತ ಹೇಳಿಲ್ಲ. ಬೋಲ್ಡ್ ಆಗಿ ಉತ್ತರ ನಿರೀಕ್ಷೆ ಮಾಡ್ತಿದ್ರು. ಅದಕ್ಕೆ ಹೀಗೆ ಹೇಳಿದ್ದಾರೆ'' ಎಂದು ಕೆಲವರು ಭಂಡಾರಿ ಬ್ರದರ್ಸ್ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.

    ಕ್ಷಮೆ ಕೇಳಿದ್ದಾರೆ, ಬಿಟ್ಟುಬಿಡಿ

    ಕ್ಷಮೆ ಕೇಳಿದ್ದಾರೆ, ಬಿಟ್ಟುಬಿಡಿ

    ''ಅನೂಪ್ ಹಾಗೂ ನಿರೂಪ್ ಕ್ಷಮೆ ಕೇಳಿದ್ದಾರೆ. ಹೀಗಾಗಿ ಈ ವಿಚಾರವನ್ನ ಇಲ್ಲಿಗೆ ಬಿಟ್ಟುಬಿಡಿ'' ಎನ್ನುತ್ತಿದ್ದಾರೆ ಕೆಲವರು

    English summary
    Kannada Cine lovers have taken their Facebook account to express their anger towards Anup Bhandari and Nirup Bhandari's statement in Rapid Rashmi show. ಅನೂಪ್-ನಿರೂಪ್ ವಿರುದ್ಧ ಕನ್ನಡಿಗರ ಆಕ್ರೋಶ: ಕಲಕಿದ ನೆಟ್ಟಿಗರ ಹೃದಯ ಸಮುದ್ರ!
    Tuesday, April 3, 2018, 11:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X