For Quick Alerts
  ALLOW NOTIFICATIONS  
  For Daily Alerts

  ಕಾಂಗ್ರೆಸ್ ಟಿಕೆಟ್ ಬಯಸಿದ ನಟ ನಟಿಯರ ದೊಡ್ಡ ಪಟ್ಟಿ

  |

  ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟಿನಿಂದ ಸ್ಪರ್ಧಿಸಲು ಬಯಸುವವರಿಂದ ಕಾಂಗ್ರೆಸ್ ಪಕ್ಷ ಅರ್ಜಿಯನ್ನು ಈಗಾಗಲೇ ಸ್ವೀಕರಿಸಲು ಆರಂಭಿಸಿದೆ ಮತ್ತು ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಕೂಡಾ.

  ಈ ಮಧ್ಯೆ 'ಕೈ' ಗುರುತಿನಿಂದ ಸ್ಪರ್ಧಿಸಲು ಕನ್ನಡ ಚಿತ್ರರಂಗದ ನಟ, ನಟಿ, ತಂತ್ರಜ್ಞರ ದೊಡ್ಡ ಪಟ್ಟಿಯೇ ಸಿದ್ದವಾಗಿದೆ. ಇವರಲ್ಲಿ ಯಾರಿಗೆ ಪಕ್ಷದ ಅಧಿಕೃತ ಬಿ ಫಾರಂ ಒಲಿಯುತ್ತೋ ಯಾವನಿಗೆ ಗೊತ್ತು.

  ಟಿಕೆಟ್ ಆಕಾಂಕ್ಷಿಗಳಲ್ಲಿ ಕಾಂಗ್ರೆಸ್ ಯುವ ಘಟಕದ ನಾಯಕಿಯಾಗಿರುವ ರಮ್ಯಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನಾ ಕೂಡಾ ಇದ್ದಾರೆ ಎನ್ನುವುದು ವಿಶೇಷ ಗಮನಕ್ಕೆ.

  ಕಾಂಗ್ರೆಸ್ ಇದುವರೆಗೆ ಟಿಕೆಟ್ ಅರ್ಜಿಯಲ್ಲೇ ಸುಮಾರು ಒಂದೂವರೆ ಕೋಟಿ ಆದಾಯಗಳಿಸಿದೆ ಎನ್ನುವ ಸುದ್ದಿಯಿದೆ.

  ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇನ್ನೂ ಬೆಳೆಯುವ ಸಾಧ್ಯತೆಯಿದೆ ಮತ್ತು ತೆರೆಮೆರೆಯಲ್ಲಿ ಇದರ ಪ್ರಯತ್ನಗಳು ನಡೆಯುತ್ತಲೇ ಇದೆ. ಚುನಾವಣಾ ಆಯೋಗ ದಿನಾಂಕ ಘೋಷಿಸಿದ ನಂತರವಷ್ಟೇ ಟಿಕೆಟ್ ಯಾರಿಗೆ ಒಲಿಯಲಿದೆ ಎಂದು ಗೊತ್ತಾಗಲಿದೆ.

  ಸದ್ಯ. ಕನ್ನಡ ಚಿತ್ರರಂಗದ ಯಾರು ಯಾರು ಕಾಂಗ್ರೆಸ್ ಟಿಕೆಟಿನಲ್ಲಿ ಸ್ಪರ್ಧಿಸಲು ಬಯಸುತ್ತಿದ್ದಾರೆ ಎನ್ನುವುದನ್ನು ಫೋಟೋ ಸ್ಲೈಡ್ ನಲ್ಲಿ ನೋಡಿರಿ

  ರೆಬೆಲ್ ಸ್ಟಾರ್ ಅಂಬರೀಶ್

  ರೆಬೆಲ್ ಸ್ಟಾರ್ ಅಂಬರೀಶ್

  ಪಕ್ಷದ ಹಿರಿಯ ನಾಯಕ ಮತ್ತು ಸ್ಯಾಂಡಲ್ ವುಡ್ಡಿನ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ರೆಬೆಲ್ ಸ್ಟಾರ್, ಕಲಿಯುಗದ ಕರ್ಣ ಅಂಬರೀಶ್ ಪಕ್ಷ ನೀಡುವ ಮಂಡ್ಯ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

  ಗೋಲ್ಡನ್ ಗರ್ಲ್ ರಮ್ಯಾ

  ಗೋಲ್ಡನ್ ಗರ್ಲ್ ರಮ್ಯಾ

  ಈಗಾಗಲೇ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತೆಯಾಗಿರುವ ರಮ್ಯಾ 2013 ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ಇನ್ನೂ ಅವರು ತಮ್ಮ ಅಂತಿಮ ನಿಲುವು ಪ್ರಕಟಿಸಲಿಲ್ಲ.

  ನಟಿ ಉಮಾಶ್ರೀ

  ನಟಿ ಉಮಾಶ್ರೀ

  ಹಿರಿಯ ಪೋಷಕ ನಟಿ ಉಮಾಶ್ರೀ ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಬಯಸಿದ್ದಾರೆ. ಕಳೆದ ಚುನಾವಣೆಯಲ್ಲಿ ಉಮಾಶ್ರೀ ಬಿಜೆಪಿಯ ಸಿದ್ದು ಸವದಿ ಎದುರು ಸೋಲು ಅನುಭವಿಸಿದ್ದರು.

  ಮುನಿರತ್ನ ನಾಯ್ಡು

  ಮುನಿರತ್ನ ನಾಯ್ಡು

  ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಸದಸ್ಯ. ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರೂ ಆಗಿರುವ ಮುನಿರತ್ನ ನಾಯ್ಡು ಸದ್ಯ ಬೆಂಗಳೂರು ಯಶವಂತಪುರ ವಾರ್ಡಿನ ಕಾರ್ಪೊರೇಟರ್. ಇವರು ಬೆಂಗಳೂರು ನಗರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

  ನಟ ಶಶಿಕುಮಾರ್

  ನಟ ಶಶಿಕುಮಾರ್

  ನಟ ಮತ್ತು ರಾಜಕರಿಣಿ ಶಶಿ ಕುಮಾರ್ ವಿಧಾನಸಭೆ ಚುನಾವಣಾ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ. 1999ರಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಜೆಡಿಯು ಟಿಕೆಟಿನಿಂದ ಸ್ಪರ್ಧಿಸಿ ಜಯಭೇರಿ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.

  ರಂಜಿತಾ

  ರಂಜಿತಾ

  ಗೋಲ್ಡನ್ ಗರ್ಲ್, ನಟಿ ರಮ್ಯಾ ಅವರ ತಾಯಿ ರಂಜಿತಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು ಬೆಂಗಳೂರು ನಗರ ವ್ಯಾಪ್ತಿಯ ರಾಜಾಜಿನಗರ ಅಥವಾ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ

  ಎಸ್ ಮಹೇಂದರ್

  ಎಸ್ ಮಹೇಂದರ್

  ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಮಹೇಂದರ್ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

  ಕೊಬ್ಬರಿ ಮಂಜು

  ಕೊಬ್ಬರಿ ಮಂಜು

  ಕನ್ನಡ ಚಿತ್ರರಂಗದ ಮತ್ತೊಬ್ಬ ನಿರ್ಮಾಪಕ ಕೆ ಮಂಜು ಆಶ್ಚರ್ಯಕರ ರೀತಿಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಕೆಜೆಪಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದ ಮಂಜು ಈಗ ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್
  ಆಕಾಂಕ್ಷಿಯಾಗಿದ್ದಾರೆ.

  ಮೀನಾ ತೂಗುದೀಪ್

  ಮೀನಾ ತೂಗುದೀಪ್

  ಹಿರಿಯ ಖಳ ನಟ ತೂಗುದೀಪ ಶ್ರೀನಿವಾಸ್ ಅವರ ಪತ್ನಿ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ತಾಯಿ ಮೀನಾ ತೂಗುದೀಪ್ ಬೆಂಗಳೂರು ನಗರ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ತಾಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಈ ಸುದ್ದಿ ಇನ್ನೂ ಖಚಿತವಾಗಬೆಕಷ್ಟೇ .

  English summary
  Kannada cine stars, technicians applying congress ticket for the forthcoming assembly election 2013. Ticket seekers including Ambarish, mother of actress Ramya and actor Darshan.
  Wednesday, January 30, 2013, 15:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X