2025ರಲ್ಲಿ ಕನ್ನಡ ಚಿತ್ರಗಳ ಬಾಕ್ಸಾಫೀಸ್ ಸಾಧನೆ; 100ಕ್ಕೆ ಬರೀ 45 ಮಾರ್ಕ್

ವರ್ಷದ 365 ದಿನಗಳು ಕಳೆದೇ ಹೋಯ್ತು. ಈ ವರ್ಷ ಕನ್ನಡ ಚಿತ್ರರಂಗ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಇತ್ತು. 200ಕ್ಕೂ ಅಧಿಕ ಸಿನಿಮಾಗಳು ತೆರೆಕಂಡರೂ ಗೆದ್ದಿದ್ದು ನಾಲ್ಕೈದು ಸಿನಿಮಾಗಳು ಮಾತ್ರ. ಇನ್ನುಳಿದ ಸಿನಿಮಾಗಳೆಲ್ಲಾ ಸೋಲಿನ ಸುಳಿಗೆ ಸಿಲುಕಿದ್ದವು. ಕೋಟಿ ಕೋಟಿ ಬಂಡವಾಳ ಹಾಕಿದ್ದ ನಿರ್ಮಾಪಕರು ಕೈಸುಟ್ಟುಕೊಂಡರು.

ವರ್ಷದ ಆರೇಳು ತಿಂಗಳು ಒಂದೇ ಒಂದು ಹಿಟ್ ಸಿನಿಮಾ ಬರಲಿಲ್ಲ. ಜುಲೈ 18ರಂದು ತೆರೆಗಪ್ಪಳಿಸಿದ್ದ 'ಎಕ್ಕ' ಸಿನಿಮಾ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಕರೆತಂದಿತ್ತು. ಅಲ್ಲಿಯವರೆಗೆ ಯಾವುದೇ ಸಿನಿಮಾ ಈ ಪ್ರಯತ್ನ ಮಾಡಲಿಲ್ಲ. ಆದರೆ 'ಎಕ್ಕ' ಸಿನಿಮಾ ಕೂಡ ಒಂದೇ ವಾರಕ್ಕೆ ಸುಸ್ತಾಗಿತ್ತು. ಆಗ 'ಸು ಫ್ರಂ ಸೋ' ಸಿನಿಮಾ ಬಂದು ದಾಖಲೆ ಬರೆಯಿತು. ಬಳಿಕ ಸೋಲಿನ ಸರಪಳಿ ಮತ್ತೆ ಮುಂದುವರೆಯಿತು. ಮತ್ತೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರಲು 'ಕಾಂತಾರ'ದ ಬೆರ್ಮೆ ಬರಬೇಕಾಯಿತು.

Kannada Cinema 2025 Review Few Blockbusters Shine Amid a Year of Box Office Struggles

'ಕಾಂತಾರ'-1 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಕರ್ನಾಟಕದಲ್ಲೇ ಸಿನಿಮಾ 250 ಕೋಟಿ ರೂ. ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ರಿಷಬ್ ಶೆಟ್ಟಿ ಆರ್ಭಟ ನೋಡಲು ಸಾಗರದಂತೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬಿದ್ದರು. ಒಂದೇ ತಿಂಗಳಿಗೆ ಸಿನಿಮಾ ಓಟಿಟಿಗೆ ಬಂದರೂ ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆಯಿತು.

ರಾಜ್‌. ಬಿ ಶೆಟ್ಟಿ ನಿರ್ಮಿಸಿ ನಟಿಸಿದ್ದ 'ಸು ಫ್ರಂ ಸೋ' ಸಿನಿಮಾ ಕರ್ನಾಟಕದಲ್ಲಿ ಮಾತ್ರ 110 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ಬಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆಯಿತು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿದ್ದ ಸಿನಿಮಾ ಸಾಧನೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.

Kannada Cinema 2025 Review Few Blockbusters Shine Amid a Year of Box Office Struggles

'ಸು ಫ್ರಂ ಸೋ' ಹಾಗೂ 'ಕಾಂತಾರ'-1 ಬಿಟ್ಟರೆ ಶಶಾಂಕ್ ನಿರ್ದೇಶನದ 'ಬ್ರ್ಯಾಟ್' ಸಿನಿಮಾ ಕೂಡ ಗೆಲುವಿನ ನಗೆ ಬೀರಿತ್ತು. ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿತ್ತು. 30 ದಿನಕ್ಕೆ ಓಟಿಟಿಗೆ ಬಂದು ಸಿನಿಮಾ ಇನ್ನು ಟ್ರೆಂಡಿಂಗ್‌ನಲ್ಲಿದೆ.

ಈ 3 ಸಿನಿಮಾಗಳನ್ನು ಹೊರತುಪಡಿಸಿದ್ರೆ ಪ್ರೇಕ್ಷಕರ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ 3 ಸಿನಿಮಾಗಳು ವರ್ಷದ ಕೊನೆಗೆ ತೆರೆಗಪ್ಪಳಿಸಿದ್ದವು. ದರ್ಶನ್ ನಟನೆಯ 'ಡೆವಿಲ್', ಸುದೀಪ್ ನಟನೆಯ 'ಮಾರ್ಕ್' ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ಸು ಕಂಡಿವೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರೆಸಿವೆ. ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ನಟನೆಯ '45' ಸಿನಿಮಾ ವರ್ಷದ ಕೊನೆಗೆ ಹಿಟ್ ಲಿಸ್ಟ್ ಸೇರಿದ ಮತ್ತೊಂದು ಸಿನಿಮಾ.

ಈ ವರ್ಷ ಕನ್ನಡ ಸಿನಿಮಾಗಳ ಯಶಸ್ಸು ನೋಡಿದರೆ 100ಕ್ಕೆ 45 ಅಂಕ ಕೊಡಬಹುದು. ಆದರೆ 45 ಅಂಕ ಕೂಡ ಕೇವಲ ನಾಲ್ಕೈದು ಚಿತ್ರಗಳಿಗೆ ಎನ್ನುವುದು ವಿಪರ್ಯಾಸ. ಈ ಬೆರಳೆಣಿಯಷ್ಟು ಚಿತ್ರಗಳು ದೊಡ್ಡದಾಗಿ ಗೆದ್ದು ಪರವಾಗಿಲ್ಲ ಎನ್ನಿಸಿಕೊಂಡಿರುವುದು ಬಿಟ್ಟರೆ ಈ ವರ್ಷ ಕನ್ನಡ ಚಿತ್ರಗಳ ಸಾಧನೆ ಕಳಪೆಯಾಗಿದೆ. ಬಹುತೇಕ ಚಿತ್ರಗಳು ಒಂದು ವಾರ ಕೂಡ ಚಿತ್ರಮಂದಿರಗಳಲ್ಲಿ ಉಳಿಯಲಿಲ್ಲ. ಯಶ್, ರಕ್ಷಿತ್ ಶೆಟ್ಟಿ, ಶ್ರೀಮುರಳಿ, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ ರೀತಿಯ ಸ್ಟಾರ್ ನಟರು ನಟಿಸಿದ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಲೇಯಿಲ್ಲ. ಇದು ಕೂಡ ಹಿನ್ನೆಡೆ ಕಾರಣ ಎನ್ನಬಹುದು.

ಪರಭಾಷೆ ಸಿನಿಮಾಗಳು ಕೂಡ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಂಡು ಬಾಕ್ಸಾಫೀಸ್ ಶೇಕ್ ಮಾಡಿವೆ. ವಿಕ್ಕಿ ಕೌಶಲ್ ನಟನೆಯ 'ಛಾವ', ರಜನಿಕಾಂತ್ 'ಕೂಲಿ' ಹಾಗೂ ರಣ್‌ವೀರ್ ಸಿಂಗ್ 'ಧುರಂಧರ್' ಚಿತ್ರಗಳು ಕರ್ನಾಟಕದಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿವೆ. ಅದ್ಯಾಕೋ ಪರಭಾಷಾ ಚಿತ್ರಗಳಿಗೆ ಕರ್ನಾಟಕದಲ್ಲಿ ಸಿಗುಬ ರೆಸ್ಪಾನ್ಸ್ ಕನ್ನಡ ಸಿನಿಮಾಗಳಿಗೆ ಸಿಗಲ್ಲ ಎನ್ನುವುದು ಬೇಸರದ ಸಂಗತಿ.

2026ರಲ್ಲಿ ಕನ್ನಡ ಸಿನಿಮಾಗಳಿಂದ ಸಾಕಷ್ಟು ನಿರೀಕ್ಷೆಯಿದೆ. 'ಟಾಕ್ಸಿಕ್', 'ಲ್ಯಾಂಡ್‌ಲಾರ್ಡ್', 'ಕೆಡಿ' ಸೇರಿದಂತೆ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಈ ವರ್ಷ ಚಿತ್ರಮಂದಿರಕ್ಕೆ ಬರದೇ ನಿರಾಸೆ ಮೂಡಿಸಿದ ಸ್ಟಾರ್‌ ನಟರು ಮುಂದಿನ ವರ್ಷ ಬಂದು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X