For Quick Alerts
  ALLOW NOTIFICATIONS  
  For Daily Alerts

  ಯಂಗ್ ರೆಬೆಲ್ ಸ್ಟಾರ್ ಗೆ ಸ್ವಾಗತ ಕೋರಿದ ಸ್ಯಾಂಡಲ್ ವುಡ್

  By Pavithra
  |
  ಮರಿ ರೆಬೆಲ್ ಸ್ಟಾರ್ ಗೆ ಸ್ವಾಗತ ಕೋರಿದ ಸ್ಯಾಂಡಲ್ವುಡ್ | Oneindia Kannada

  ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿನ್ನೆಯಷ್ಟೇ ಅಭಿಷೇಕ್ ಅಭಿನಯದ ಮೊದಲ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

  ಅಭಿಷೇಕ್ ಅಭಿನಯದ 'ಅಮರ್' ಚಿತ್ರದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ .ಅಭಿಷೇಕ್ ಕೂಡ ಸಿನಿಮಾರಂಗದಲ್ಲಿ ನಾಯಕನಾಗಲು ಬೇಕಿರುವ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ.

  ಫಸ್ಟ್ ಲುಕ್ ಪೋಸ್ಟರ್ ನೋಡಿದ ತಕ್ಷಣ ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾರಂಗದ ಕಲಾವಿದರು ಹಾಗೂ ತಂತ್ರಜ್ಞರು ಅಭಿಷೇಕ್ ಅವರಿಗೆ ಸ್ವಾಗತ ಕೋರಿದ್ದಾರೆ .ಕಿಚ್ಚ ಸುದೀಪ್ ಕೂಡ ಅಭಿಷೇಕ್ ಅವರಿಗೆ ವಿಶೇಷವಾಗಿ ಸ್ವಾಗತ ಕೋರಿದ್ದಾರೆ ನಿನ್ನದೆ ಸಾಮ್ರಾಜ್ಯ ಕಟ್ಟಿಕೊ.ಅಲ್ಲಿ ನೀನೆ ರಾಜನಾಗಿರು. ನಿನ್ನದೆ ಸ್ಟೈಲ್ ಕ್ರಿಯೆಟ್ ಮಾಡು , ಅಭಿನಂದನೆಗಳು ಎಂದಿದ್ದಾರೆ.

  ಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ವಿಶೇಷ ಕಾರ್ಯಕ್ರಮಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ವಿಶೇಷ ಕಾರ್ಯಕ್ರಮ

  ಕಿಚ್ಚನ ಮಡದಿ ಪ್ರಿಯಾ ಸುದೀಪ್ ಕೂಡ ಅಭಿಷೇಕ್ ಅವರ ಮೊದಲ ಚಿತ್ರದ ಪೋಸ್ಟರ್ ನೋಡಿ ಶುಭಾಶಯ ಕೋರಿದ್ದಾರೆ. ತಂದೆ ತಾಯಿಯಂತೆ ಹೆಸರು ಗಳಿಸು ಎಂದು ಪ್ರಿಯಾ ಟ್ವೀಟ್ ಮಾಡಿದ್ದಾರೆ.

  ಇನ್ನು ನಿರ್ದೇಶಕ ಹಾಗೂ ನಿರ್ಮಾಪಕ ಶಶಾಂಕ್ ಕೂಡ ಅಭಿಷೇಕ್ ಅವರ ಚಿತ್ರ ಫಸ್ಟ್ ಲುಕ್ ನೋಡಿ ಸಂತಸ ವ್ಯಕ್ತಪಡಿಸಿದ್ದು ತಂದೆ ತಾಯಿಗೆ ತಕ್ಕ ಮಗನಾಗು ಎಂದು ಟ್ವೀಟ್ ಮಾಡುವ ಮೂಲಕ‌ ಶುಭ ಹಾರೈಸಿದ್ದಾರೆ.

  ತಾಯಿಯ ಸೌಮ್ಯತೆ, ತಂದೆಯ ಹೃದಯವಂತಿಕೆ ಎರಡನ್ನೂ ಅಳವಡಿಸಿಕೊಂಡು ಚಂದನವನಕ್ಕೆ ಬರುತ್ತಿರುವ ಅಭಿಷೇಕ್ ಅಂಬರೀಶ್ ಅವರಿಗೆ ಸ್ವಾಗತ ಎಂದು ನಿರ್ದೇಶಕ ರಘುರಾಮ್ ಫೇಸ್‌ಬುಕ್‌ ಹಾಗೂ ಟ್ವಿಟರ್ ‌ಮೂಲಕ ಚಿತ್ರರಂಗಕ್ಕೆ ಸ್ವಾಗತ ಮಾಡಿದ್ದಾರೆ.

  English summary
  Rebel Star Ambarish 's son Abhishek first film poster was released. the first look get good response. .Cinema artists and technicians welcomed Abhishek to the sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X