For Quick Alerts
  ALLOW NOTIFICATIONS  
  For Daily Alerts

  75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಕನ್ನಡ ತಾರೆಯರಿಂದ ವಿಶೇಷ ಹಾಡು!

  |

  ದೇಶದೆಲ್ಲಡೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆ ಕಟ್ಟಿದೆ. ಅಮೃತ ಮಹೋತ್ಸವದ ಅಂಗವಾಗಿ ಮನೆ ಮನಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕೆ ಸಿನಿ ತಾರೆಯರು ಕೈ ಜೋಡಿಸಿದ್ದು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಿದ್ದಾರೆ.

  ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಇದಕ್ಕೆ ಸಿನಿಮಾ ತಾರೆಯರು ಬೆಂಬಲ ಸೂಚಿಸಿದ್ದಾರೆ. ಈ ಅಭಿಯಾನಕ್ಕೆ ಮತ್ತಷ್ಟು ಶಕ್ತಿ ತುಂಬಲು 'ಹರ್ ಘರ್ ತಿರಂಗಾ' ಅನ್ನುವ ದೇಶಭಕ್ತಿ ಗೀತೆಯನ್ನು ರಚಿಸಲಾಗಿದೆ.

  ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!

  ಕನ್ನಡದಲ್ಲಿ 'ವಂದೇ ಮಾತರಂ' ಗೀತೆಗೆಯಲ್ಲಿ ಸಿನಿಮಾ ತಾರೆಯರು ಬಾವುಟ ಹಿಡಿದು ಬಂದಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿನಲ್ಲಿ ಕನ್ನಡದ ಸಿನಿಮಾ ತಾರೆಯರು ಮತ್ತು ಹಲವು ಸಾಧಕರು ಇದ್ದಾರೆ. ಈ ಹಾಡಿನ ಮೂಲಕ 'ಹರ್ ಘರ್ ತಿರಂಗ' ಅಭಿಯಾನವನ್ನು ಮಾಡಲಾಗಿದೆ.

  ಈ ಗೀತೆಯಲ್ಲಿ ಪ್ರಮುಖವಾಗಿ ನಟ ಜಗ್ಗೇಶ್, ರವಿಚಂದ್ರನ್, ಅನಂತ್‌ನಾಗ್, ರಮೇಶ್, ಶಿವರಾಜ್ ಕುಮಾರ್, ಸುದೀಪ್, ಗಣೇಶ್, ವಿಜಯ್ ಪ್ರಕಾಶ್, ಅರ್ಜನ್ ಸರ್ಜಾ, ಸಾಲು ಮರದ ತಿಮ್ಮಕ್ಕ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಧನಂಜಯ್, ಶ್ರೀ ಮುರುಳಿ ಸೇರಿದಂತೆ ಹಲವು ಕಲಾವಿದರು ಮತ್ತು ಸಾಧಕರು ಈ ಹಾಡಿನಲ್ಲಿದ್ದಾರೆ.

  ಕೇವಲ ಹಾಡುವುದಲ್ಲದೇ, ನಮ್ಮ ದೇಶ ವೈವಿದ್ಯತೆಗಳಲ್ಲಿ ಏಕತೆ ಕಂಡಿರುವ ದೇಶ ಎನ್ನುವುದನ್ನು, ನಮ್ಮ ದೇಶದ ಸಂಸ್ಕೃತಿ, ಸಂಪತ್ತನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿ ಟ್ವೀಟ್ ಮಾಡಿ, ವಂದೇ ಮಾತರಂ... ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ ಎಂದು ಈ ಹಾಡಿನ ಬಗ್ಗೆ ಬರೆದುಕೊಂಡಿದ್ದಾರೆ. ಇನ್ನುಳಿದಂತೆ, ಕನ್ನಡ ತಾರೆಯರು ಈ ಗೀತೆಯನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಇನ್ನು ಸೂಪರ್ ಸ್ಟಾರ್ ರಜನಿಕಾಂತ್, ನವರಸ ನಾಯಕ ಜಗ್ಗೇಶ್, ನಟಿ ತಾರಾ ಅನುರಾಧಾ ಸೇರಿದಂತೆ ಸಾಕಷ್ಟು ಜನ ಸೆಲೆಬ್ರೆಟಿಗಳು ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಗಳ ಡಿಪಿಯಲ್ಲೂ ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿ ದೇಶಪ್ರೇಮದ ಕಹಳೆ ಮೊಳಗಿಸುತ್ತಿದ್ದಾರೆ. ಅಭಿಮಾನಿಗಳಿಗೂ ಇದನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

  English summary
  Kannada Cinema Celebrities Supporting Har Ghar Tiranga Campaign By Special Song, Know More,
  Monday, August 15, 2022, 9:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X