Prajwal Revanna Case: ಮೌನ ಮುರಿಯದ ಚಂದನವನದ ಚೆಂದದ ತಾರೆಯರು..!

By ಫಿಲ್ಮಿಬೀಟ್ ಡೆಸ್ಕ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆದರೆ.. ಸ್ಯಾಂಡಲ್ ವುಡ್ ಮಾತ್ರ ಶಾಂತವಾಗಿದೆ. ಈ ಮೌನಕ್ಕೆ ಕಾರಣ ಚಂದನವನದ ತಾರೆಯರಿಗೆ ಗೊತ್ತಾದರೂ ಸದ್ಯಕ್ಕೆ, ಕನ್ನಡ ಚಿತ್ರರಂಗದ ತಾರೆಯರ ಈ ದಿವ್ಯ ಮೌನದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅನೇಕರು ನಾನಾ ತರಹದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ನಡೆಯ ಬಗ್ಗೆ ಪ್ರಶ್ನೆಯನ್ನೂ ಮಾಡ್ತಿದ್ದಾರೆ

ಹೌದು, ಪ್ರಜ್ವಲ್ ರೇವಣ್ಣ ಅವ್ರದ್ದೇ ಎಂದು ಹೇಳಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಲ್ನೋಟಕ್ಕೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆದಿದೆ ಅನ್ನುವುದು ಕೂಡ ಸಾಬೀತಾಗಿದೆ. ಆದರೆ, ಬೆಳ್ಳಿ ಪರದೆಯ ಮೂಲಕ ಹೆಣ್ಣಿನ ಮೇಲಿನ ದೌರ್ಜನ್ಯ, ಕಿರುಕುಳದ ಕುರಿತು ಕೆಂಡ ಕಾರುವ ಕನ್ನಡ ಚಿತ್ರರಂಗ ಮಾತ್ರ ಕಣ್ಮುಚ್ಚಿ ಕುಳಿತಿದೆ. ತೆರೆ ಮೇಲೆ ದೊಡ್ಡ ದೊಡ್ಡ ಸಂಭಾಷಣೆ ಹೇಳುವ ನಾಯಕರ ವರ್ಗ ಕೂಡ ಸುಮ್ಮನೆ ಕುಳಿತಿದೆ.

kannada-cinema-is-not-talking-about-the-prajwal-revanna-viral-video

ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕರು, ಸಾಮಾಜಿಕ ಜಾಲತಾಣದ ಮೂಲಕ ತನ್ನ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅದೆಲ್ಲಿಯೋ ಆದ ದೌರ್ಜನ್ಯ, ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುವ ಕನ್ನಡ ಚಿತ್ರರಂಗ ಈ ವಿಚಾರದಲ್ಲಿ ದಿವ್ಯವಾದ ಮೌನ ವಹಿಸಿರೋದೇಕೆ ಎಂಬ ಪ್ರಶ್ನೆಯನ್ನ ಕೂಡ ಅನೇಕರು ಇದೇ ಸಾಮಾಜಿಕ ಜಾಲತಾಣದ ಸಹಾಯದ ಮೂಲಕ ಕೇಳುತ್ತಿದ್ದಾರೆ

ಇನ್ನೂ.. ಅನ್ಯಾಯಕ್ಕೊಳಕ್ಕಾದ ಯುವತಿಯ ಹಿನ್ನೆಲೆ ಮುನ್ನೆಲೆ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಕೊನೆ ಪಕ್ಷ ತಮ್ಮ ತಮ್ಮ ರಾಜಕೀಯ ಸಿದ್ಧಾಂತ ಮತ್ತು ವೇದಾಂತ ಪಕ್ಕಕ್ಕೆ ಇಟ್ಟು, ಕನ್ನಡ ಚಿತ್ರರಂಗದ ತಾರೆಯರು ತಮ್ಮ ಅಭಿಪ್ರಾಯ ಮಂಡಿಸಬಹುದಿತ್ತು ಅನ್ನುತ್ತಿರುವ ಅನೇಕರು, ಕನ್ನಡ ಚಿತ್ರರಂಗದ ಈ ದಿವ್ಯ ಮೌನದ ಹಿಂದೆ ಇರಬಹುದಾದ ಕಥೆಯನ್ನ ಹುಡುಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೊನೆ ಪಕ್ಷ ಪರೋಕ್ಷವಾಗಿಯೇ ಆದರೂ ಕನ್ನಡ ಚಿತ್ರರಂಗದ ಸದಸ್ಯರು ಈ ವಿಚಾರದಲ್ಲಿ ತಮ್ಮ ಮೌನ ಮುರಿಯಬೇಕಿತ್ತು ಅನ್ನುತ್ತಿದ್ದಾರೆ. ಇನ್ನೂ ಕೆಲವರು ಕನ್ನಡ ಚಿತ್ರರಂಗದ ಮನಸ್ಥಿತಿ ಜೊತೆ ಎದ್ದು ಕಾಣುವ ನಾಯಕನ ಅನುಪಸ್ಥಿತಿಯ ಬಗ್ಗೆ ಕೂಡ ತಮ್ಮ ಸಿಟ್ಟನ್ನ ಹೊರಹಾಕುತ್ತಿದ್ದಾರೆ

amp amp Read more at https kannada oneindia com news karnataka explore-what-karnataka-cm-siddaramaiah-said-about-prajwal-revanna-354119 html

ಒಟ್ನಲ್ಲಿ ಪ್ರಜ್ವಲ್ ರೇವಣ್ಣ ಅವರ ಖಾಸಗಿ ವಿಚಾರಕ್ಕೆಸಂಬಂಧಿಸಿದಂತೆ, ವಿಡಿಯೋ ಪೆನ್‌ಡ್ರೈವ್‌ ಮೂಲಕ ಹಾಸನದ ಹಾದಿ & ಬೀದಿಗಳಲ್ಲಿ ಸದ್ದು ಮಾಡುತ್ತಿದೆ. ಈ ಆರೋಪಗಳ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿರುದ್ಧ ಆಕ್ರೋಶ ಕೂಡ ಮೊಳಗುತ್ತಿದೆ. ಈ ಸಮಯದಲ್ಲೇ ಕಾಂಗ್ರೆಸ್ ನಾಯಕರು ಈ ವಿಚಾರ ಹಿಡಿದು ಜೆಡಿಎಸ್ ನಾಯಕರ ವಿರುದ್ಧ, ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದು ಕಡೆ ಸಂತ್ರಸ್ತ ಮಹಿಳೆಯರು ಈ ಕುರಿತು ದೂರು ನೀಡಿ ಕಾನೂನು ಹೋರಾಟಕ್ಕೂ ಮುಂದಾಗಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಇನ್ನೂ ಆಘಾತದ ನಡುವೆ ಈಗ ಸಿಎಂ ಸಿದ್ದರಾಮಯ್ಯ ಖುದ್ದು ಸಂಸದ ಪ್ರಜ್ವಲ್ ರೇವಣ್ಣಗೆ ಭೀಕರ ಆಘಾತ ನೀಡಿದ್ದಾರೆ. ಇದೆಲ್ಲದರ ನಡುವೆ ಪ್ರಜ್ವಲ್ ರೇವಣ್ಣ ವಿಚಾರದಲ್ಲಿ, ಕನ್ನಡ ಚಿತ್ರರಂಗ ದಿವ್ಯ ಮೌನಕ್ಕೆ ಶರಣಾಗಿದೆ. ಮಾತನಾಡದೇ..ಅಭಿಪ್ರಾಯ ವ್ಯಕ್ತಪಡಿಸದೇ ಕೈ ಕಟ್ಟಿ ಕುಳಿತಿದೆ. ಕನ್ನಡ ಚಿತ್ರರಂಗದ ಈ ಮೌನ ಅನೇಕ ಅನುಮಾನಗಳಿಗೂ ಕಾರಣವಾಗಿದೆ

More from Filmibeat

English summary
Prajwal Revanna's Viral Video Raises Questions, Yet Remains Unaddressed in Kannada Cinema Circles"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X